ಮುಚ್ಚಿ

ಹಾಸನಾಂಬ ದರ್ಶನ ಟಿಕೆಟ್‌ಗಳು

online passes

ತಾಯಿ ಹಾಸನಾಂಬ ದೇವಿಯ ಭಕ್ತಾದಿಗಳ ದರ್ಶನಕ್ಕೆ ಆನ್ ಲೈನ್ ಟಿಕೇಟ್ ಖರೀದಿ ಮಾಹಿತಿ

  • ತಾಯಿ ಹಾಸನಾಂಬ ದೇವಿ ಮತ್ತು ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಸಾರ್ವಜನಿಕ ದರ್ಶನಕ್ಕೆ ದಿನಾಂಕ 10/10/2025 ರಿಂದ 22/10/2025 ರ ವರೆಗೆ, ಮಾತ್ರ ಅವಕಾಶವಿರುತ್ತದೆ.
  • ಪ್ರತೀ ವರ್ಷವೂ ತನ್ನ ಭಕ್ತಾದಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿರುವ ಅನುಪಾತದಂತೆ, ಈ ವರ್ಷ 25 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ತಾಯಿ ಹಾಸನಾಂಬ ದೇವಿಯ ದರ್ಶನಕ್ಕೆ ಆಗಮಿಸುವ ನಿರೀಕ್ಷೆಯಿದೆ.
  • ಉಚಿತ ಧರ್ಮದರ್ಶನ ಹೊರತಾಗಿ, ಧರ್ಮದರ್ಶನದ ಸರತಿ ಸಾಲಿನಲ್ಲಿ ಭಕ್ತಾದಿಗಳ ಸಂಖ್ಯೆ ಸಾಮಾನ್ಯವಾಗಿ ಹೆಚ್ಚಿರುವುದರಿಂದ ಭಕ್ತಾದಿಗಳಿಗೆ ಸುಲಲಿತವಾಗಿ ದರ್ಶನಾವಕಾಶವಾಗಲೆಂದು ಆನ್ ಲೈನ್ ಟಿಕೇಟ್ ಖರೀದಿಗೆ ವಿನೂತನ ವ್ಯವಸ್ಥೆ ಕಲ್ಪಿಸಿದೆ.
  • ಭಕ್ತಾದಿಗಳ ಆನ್ ಲೈನ್ ಟಿಕೇಟ್ ಬುಕಿಂಗ್ ಸರಳವಾಗಲೆಂದು 3 ಬಗೆಯಲ್ಲಿ ಮಾತ್ರ ಅಧಿಕೃತ ಆನ್ ಲೈನ್ ಟಿಕೇಟ್ ಖರೀದಿಗೆ Razor Pay Gateway ಮೂಲಕ ಅವಕಾಶ ಕಲ್ಪಿಸಿದೆ.
  • ಎ. ಹಾಸನಾಂಬ ವೆಬ್‌ಸೈಟ್; ವೆಬ್‌ಸೈಟ್ ವಿಳಾಸಕ್ಕೆ  http:srihassanaambatemple.com ಭೇಟಿ ನೀಡಿ ಮಾಹಿತಿ ಮತ್ತು ಚಾಟ್‌ಬಾಟ್ ಲಿಂಕ್ ಪಡೆದು ದರ್ಶನ ಟಿಕೆಟ್ ಬುಕಿಂಗ್ ಮಾಡಿಕೊಳ್ಳುವುದು.
  • ಬಿ. ಹಾಸನಾಂಬ App: ಗೂಗಲ್ Play Store ಅಥವಾ ಐ-ಪೋನ್ App Store ಮೂಲಕ Sri Hassanaamba App ಡೌನ್ಲೋಡ್ ಮಾಡಿಕೊಂಡು ಅಲ್ಲಿ ನೇರವಾಗಿ ದರ್ಶನ ಟಿಕೆಟ್ ಬುಕಿಂಗ್ ಮಾಡಿಕೊಳ್ಳುವುದು.
  •  ಸಿ. ವಾಟ್ಸಾಪ್ ಚಾಟ್‌ಬಾಟ್ ವ್ಯವಸ್ಥೆ; 6366105589 ಸಂಖ್ಯೆಗೆ WhatsApp ನಲ್ಲಿ Hi ಎಂದು ಸಂದೇಶ ಕಳುಹಿಸಿದರೆ ಸಾಕು, ಉಳಿದಂತೆ ಅಲ್ಲಿ ಸೂಚಿಸುವ ಸಂದೇಶ ಪಡೆಯುವ ಮೂಲಕ ನೇರವಾಗಿ ದರ್ಶನ ಟಿಕೆಟ್ ಬುಕಿಂಗ್ ಮಾಡಿಕೊಳ್ಳುವುದು.
  • ಟಿಕೇಟ್ ದರ; ಎರಡು ದರದ ಟಿಕೇಟ್ ಲಭ್ಯ 1] ರೂ.೧೦೦೦/-ಸಾಲಿನ ದರ್ಶನಕ್ಕೆ ಮತ್ತು 2] ರೂ.3೦೦/ ಸಾಲಿನ ದರ್ಶನಕ್ಕೆ ಟಿಕೇಟ್ ಲಭ್ಯ. ಒಬ್ಬರ ದರ್ಶನಕ್ಕೆ ಒಂದು ಟಿಕೇಟ್ ಖರೀದಿಸಬೇಕು. 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ಟಿಕೇಟ್ ಖರೀದಿ ಕಡ್ಡಾಯ.
  • ಟಿಕೇಟ್ ಪ್ರತಿ ಹೊಂದುವ ಮತ್ತು ಸುರಕ್ಷತೆಯಲ್ಲಿಟ್ಟುಕೊಳ್ಳುವ ಬಗ್ಗೆ: ಪ್ರತಿ ಆನ್ ಲೈನ್ ಟಿಕೇಟಿಗೆ ಡಿಜಿಟಲ್ ಕೋಡ್ Scanner ಅಳವಡಿಸಲಾಗಿರುತ್ತದೆ. ಚಾಟ್ ಬಾಟ್ ಮೂಲಕ ಬುಕ್ ಮಾಡಿದ ಡಿಜಿಟಲ್ ಟಿಕೇಟ್ ಆಯಾ ವಾಟ್ಸಾಪ್ ಚಾಟ್ ಬಾಟ್ ಗೆ ಬಂದು ಸೇರುತ್ತದೆ. ಹಾಗೆಯೇ, App ಮೂಲಕ ಪಡೆದ ಡಿಜಿಟಲ್ ಟಿಕೇಟ್ ಅನ್ನು ಮರೆಯದೆ SAVE ಎಂದು ಕೊಟ್ಟ ತಕ್ಷಣ ಅದು ಫೋನ್ ಗ್ಯಾಲರಿಯಲ್ಲಿ ಸೇರುತ್ತದೆ. ಟಿಕೇಟನ್ನು ಮತ್ತಷ್ಟು ಜೋಪಾನವಾಗಿಡಲು ಆಯಾ ಡಿಜಿಟಲ್ ಟಿಕೇಟಿನ Screen Shot ಮಾಡಿಕೊಂಡು ಸುರಕ್ಷಿತವಾಗಿಟ್ಟುಕೊಳ್ಳುವುದು ಮತ್ತು ದರ್ಶನ ಪಡೆಯುವರು ಮಾತ್ರ ಇಟ್ಟುಕೊಳ್ಳವುದು. ನಿಮ್ಮ ಪೋನ್ ಸ್ವಿಚ್ ಆಫ್ ಸಮಸ್ಯೆ ಎದುರಿಸಿದರೆ ಮುಂಚಿತವಾಗಿ ಡಿಜಿಟಲ್ ಟಿಕೇಟ್ ಪ್ರಿಂಟ್ ಕೂಡ ಇಟ್ಟುಕೊಳ್ಳುವುದು.
  • ಆನ್‌ಲೈನ್ ಟಿಕೇಟ್ ಪರಿಶೀಲನೆಗಾಗಿ Digital Ticket Scan App: ಖರೀದಿಸಿದ ಟಿಕೇಟ್ ಪರಿಶೀಲಿಸಿ, ಸಿಂದುಗೊಳಿಸಿ ದರ್ಶನಕ್ಕೆ ಪ್ರವೇಶ ನೀಡಿದ ತಕ್ಷಣವೇ ಅದರ ಚಾಲ್ತಿಯನ್ನು ತಾಂತ್ರಿಕವಾಗಿ ರದ್ಧತಿಗೊಳಿಸಲಾಗುತ್ತದೆ. ನೆನಪಿರಲಿ ಒಂದು ಡಿಜಿಟಲ್ ಟಿಕೇಟ್ ನ ಬಳಕೆ ಒಂದು ಭಾರಿ ಮಾತ್ರ ಸಾಧ್ಯವಾಗುವಂತೆ ತಾಂತ್ರಿಕವಾಗಿ ನಿಶ್ಚಿತಗೊಳಿಸಲಾಗಿರುತ್ತದೆ.
  • 80 ವರ್ಷ ಮೇಲ್ಪಟ್ಟ ಮತ್ತು ವಿಶೇಷ ಚೇತನ ಭಕ್ತರಿಗೆ ಸರಳ, ವಿಶೇಷ ಮತ್ತು ಉಚಿತ ದರ್ಶನಕ್ಕೆ ಪ್ರೋತ್ಸಾಹವಿದೆ. ವೆಬ್‌ಸೈಟ್ ನಲ್ಲಿ ಪ್ರತ್ಯೇಕವಾಗಿ ಹೆಚ್ಚಿನ ಮಾಹಿತಿ ನೀಡಿದೆ.