ಮುಚ್ಚಿ

ನ್ಯಾಯಾಲಯಗಳು

ಹಾಸನದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ದಿನಾಂಕ 27-9-1965ರ ಸರ್ಕಾರಿ ಆದೇಶ ಸಂಖ್ಯೆ. LAW 135 CAD 63 (VIII) ಪ್ರಕಾರ ಸ್ಥಾಪಿತವಾಗಿದೆ ಮತ್ತು ದಿನಾಂಕ 1-11-1965ರಿಂದ ಕಾರ್ಯಾರಂಭ ಮಾಡಿದೆ. ಪ್ರಸ್ತುತ ನ್ಯಾಯಲಯವು ಹಾಸನ ನಗರದ ಹೃದಯಭಾಗದಲ್ಲಿದ್ದು, ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಎದುರಿಗೆ ಕಾರ್ಯನಿರ್ವಹಿಸುತ್ತಿದೆ.

(ಹಾಸನ ಜಿಲ್ಲಾ ಕೇಂದ್ರವು ಬೆಂಗಳೂರಿನಿಂದ ಅತ್ಯುತ್ತಮ ರಸ್ತೆ ಮತ್ತು ರೈಲಿನ ಸಂಪರ್ಕ ಹೊಂದಿದೆ ಹಾಗೂ ಹೋಟೆಲು, ವಸತಿ ಇತ್ಯಾದಿಗಳು ಒಳಗೊಂಡಂತೆ ಎಲ್ಲ ಬಗೆಯ ಆಧುನಿಕ ಸವಲತ್ತುಗಳನ್ನು ಹೊಂದಿದೆ. ಕಾವೇರಿ ನದಿಯು ಹಾಸನ ಜಿಲ್ಲೆಯ ದಕ್ಷಿಣದ ಕೆಲಭಾಗಗಳಲ್ಲಿ ಹರಿಯುತ್ತದೆ. ಹೇಮಾವತಿ ಮತ್ತು ಯಗಚಿ ಇವು ಕಾವೇರಿ ನದಿಯ ಉಪನದಿಗಳು.  ಗೊರೂರಿನಲ್ಲಿ ಹೇಮಾವತಿ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಲಾಗಿದೆ. ಹಾಸನವು ಏಲಕ್ಕಿ ಮತ್ತು ಕರಿಮೆಣಸಿಗೆ ಪ್ರಸಿದ್ಧವಾಗಿದೆ. ಹಾಸನ ಜಿಲ್ಲೆಯು ಹೊಯ್ಸಳರು ಮತ್ತು ಗಂಗರಿಂದ ಪ್ರಭಾವಿತವಾದ ಶ್ರೀಮಂತ ಇತಿಹಾಸವನ್ನು ಹೊಂದಿದೆ.  ಜಿಲ್ಲೆಯು ಸ್ಮಾರಕಗಳಿಂದ ತುಂಬಿದೆ.  ಬೇಲೂರು, ಹಳೇಬೀಡು ಮತ್ತು ಶ್ರವಣಬೆಳಗೊಳ ಇವು ವಿಶ್ವವಿಖ್ಯಾತವಾದ ಶಿಲ್ಪಕಲೆಗಳಿಂದ ಕೂಡಿದ ದೇಗುಲಗಳಿಂದ ಕೂಡಿವೆ.)

ಹಾಸನ ಕೋರ್ಟ್ ಜಾಲತಾಣ