ಮುಚ್ಚಿ

ಇತಿಹಾಸ

ಹಾಸನ ಜಿಲ್ಲೆಯು ಕ್ರಿ.ಪೂ.3ನೇ ಶತಮಾನದಲ್ಲಿ ಮೌರ್ಯರ ಆಳ್ವಿಕೆಗೆ, ನಂತರ ಕದಂಬರ, ಚಾಲುಕ್ಯರ, ಗಂಗರ, ಹೊಯ್ಸಳರ ಮತ್ತು ವಿಜಯನಗರ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟಿತ್ತು. ಹೊಯ್ಸಳರು ಈ ಜಿಲ್ಲೆಗೆ ದೇಗುಲಗಳ ಅನನ್ಯ ಶೈಲಿಯ ವಾಸ್ತುಶಿಲ್ಪಗಳ ಮೂಲಕ ಜಗದ್ವಿಖ್ಯಾತಿಯನ್ನು ತಂದುಕೊಟ್ಟಿರುತ್ತಾರೆ.