ಹಾಸನಾಂಬ ಪ್ರವಾಸ ಪ್ಯಾಕೇಜ್‌ಗಳು – 2026

ಹಾಸನ ಬಸ್ ಪ್ರವಾಸ

ಪ್ರವಾಸ ಪ್ಯಾಕೇಜ್‌ಗಳ ಕುರಿತು ಹೆಚ್ಚಿನ ವಿವರಗಳಿಗಾಗಿ, ಬಟನ್ ಅನ್ನು ಕ್ಲಿಕ್ ಮಾಡಿ

ಕೆ.ಎಸ್.ಟಿ.ಡಿ.ಸಿ ಟೂರ್ ಪ್ಯಾಕೇಜ್‌ಗಳ ವಿವರ
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕೆ.ಎಸ್.ಟಿ.ಡಿ.ಸಿ ಬೆಂಗಳೂರು ರವರ ಸಹಯೋಗದೊಂದಿಗೆ ಪ್ರವಾಸಿಗರಿಗೆ ಟೂರ್‌ ಪ್ಯಾಕೇಜ್‌ ಕಾರ್ಯಕ್ರಮ.

ಮಾರ್ಗ-1 ಬೆಂಗಳೂರು: ನರಸಿಂಹ ದೇವಸ್ಥಾನ, ನುಗ್ಗೇಹಳ್ಳಿ-ನಾಗೇಶ್ವರ ದೇವಸ್ಥಾನ, ನವಿಲೆ-ಹಾಸನಾಂಬ ದೇವಿ ದರ್ಶನ-ಬೆಂಗಳೂರು. (ವಿಶೇಷ ದರ್ಶನ ಟಿಕೆಟ್ ಒಳಗೊಂಡಂತೆ):-
ಪ್ಯಾಕೇಜ್‌ ಆರಂಭ ಸ್ಥಳ: ಯಶವಂತಪುರ, ಕೆ.ಎಸ್.ಟಿ.ಡಿ.ಸಿ ಕಛೇರಿ, ಬೆಂಗಳೂರು.
ಪ್ರವಾಸ ಆರಂಭ ಸಮಯ: ನಿರ್ಗಮನ ಬೆಳಗ್ಗೆ 6:00 ಆಗಮನ ರಾತ್ರಿ 10:00.
ಟಿಕೆಟ್‌ ಮೊತ್ತ: 2,300/-

ಮಾರ್ಗ-2 ಮೈಸೂರು: ಹಾಸನಾಂಬ ದೇವಿ ದರ್ಶನ-ಹೊಯ್ಸಳೇಶ್ವರ ದೇವಾಲಯ, ಹಳೇಬೀಡು- ಚನ್ನಕೇಶವ ದೇವಾಲಯ, ಬೇಲೂರು -ಮೈಸೂರು. (ವಿಶೇಷ ದರ್ಶನ ಟಿಕೆಟ್ ಒಳಗೊಂಡಂತೆ):-
ಪ್ಯಾಕೇಜ್‌ ಆರಂಭ ಸ್ಥಳ: ಹೋಟೆಲ್‌ ಮಯೂರ ಹೊಯ್ಸಳ, ಮೈಸೂರು.
ಪ್ರವಾಸ ಆರಂಭ ಸಮಯ: ನಿರ್ಗಮನ ಬೆಳಗ್ಗೆ 7:00 ಆಗಮನ ರಾತ್ರಿ 8:30.
ಟಿಕೆಟ್‌ ಮೊತ್ತ: 2,150/-
ಸದರಿ ಪ್ಯಾಕೇಜ್‌ಗಳ ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
8970650021, 8970650070
K.S.T.D.C ವೆಬ್‌ಸೈಟ್ ವಿಳಾಸ: www.kstdc.co

ಸುರಕ್ಷತೆಗಾಗಿ ಕೈಗೊಳ್ಳುವ ಕ್ರಮಗಳು.

ಪ್ಯಾಕೇಜ್‌ ಟೂರ್‌ ಕಾರ್ಯಕ್ರಮದಲ್ಲಿ ಪ್ರವಾಸಿಗರ/ಸಾರ್ವಜನಿಕರ ಸುರಕ್ಷತೆ ಹಾಗೂ ಹಿತದೃಷ್ಠಿಯಿಂದ ಈ ಕೆಳಕಂಡ ಕ್ರಮಗಳನ್ನು ವಹಿಸಲಾಗುವುದು.

  • ಪ್ರತಿ ಪ್ಯಾಕೇಜ್‌ ಟೂರ್‌ನಲ್ಲಿ ಪ್ರವಾಸಿ ಮಿತ್ರ ಸಿಬ್ಬಂದಿಗಳ ನಿಯೋಜನೆ.
  • ಪ್ರತಿ ಪ್ಯಾಕೇಜ್‌ ಟೂರ್‌ನಲ್ಲಿ 01 ಪ್ರವಾಸಿ ಮಾರ್ಗದರ್ಶಿಯ ನಿಯೋಜನೆ.
  • ಪ್ರತಿ ಪ್ಯಾಕೇಜ್‌ ಟೂರ್‌ನಲ್ಲಿ ನರ್ಸ್‌ಗಳ ನಿಯೋಜನೆ.
    ಸದರಿ ಪ್ಯಾಕೇಜ್‌ಗಳ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
    ಪ್ರವಾಸೋದ್ಯಮ ಇಲಾಖೆ: 08172-268862
    ಪ್ರವಾಸಿ ಪ್ರವರ್ತಕರು:9019712720
    K.S.R.T.C ವೆಬ್‌ಸೈಟ್ ವಿಳಾಸ: www.ksrtc.in
    K.S.T.D.C ವೆಬ್‌ಸೈಟ್ ವಿಳಾಸ: www.kstdc.co
  • ಟೂರ್‌ ಪ್ಯಾಕೇಜ್‌ ಕಾರ್ಯಕ್ರಮದಲ್ಲಿ ಪ್ರಯಾಣ ಮಾಡುವ ಪ್ರವಾಸಿಗರ ಮಾಹಿತಿ ಮತ್ತು ಪ್ರವಾಸಿಗರ ಸುರಕ್ಷತೆಗೆ ಕಾರ್ಯನಿರ್ವಹಿಸುವ ಪ್ರವಾಸಿ ಮಾರ್ಗದರ್ಶಿ ಹಾಗೂ ಪ್ರವಾಸಿ ಮಿತ್ರರುಗಳಿಗೆ ಗುರುತಿನ ಚೀಟಿ ಮತ್ತು ಪಾಸ್‌ ನೀಡಲು ಕೋರಿ ಆಡಳಿತಾಧಿಕಾರಿ, ಹಾಸನಾಂಬ ದೇವಾಲಯ ರವರಿಗೆ ಈಗಾಗಲೇ ಪತ್ರ ಬರೆಯಲಾಗಿರುತ್ತದೆ.
  • ಟೂರ್‌ ಪ್ಯಾಕೇಜ್‌ ಕಾರ್ಯಕ್ರಮದಲ್ಲಿ ಪ್ರಯಾಣ ಮಾಡುವ ಪ್ರವಾಸಿಗರ ಅನುಕೂಲಕ್ಕಾಗಿ ಜಿಲ್ಲೆಯ ಎಲ್ಲಾ ದೇವಲಾಯಗಳನ್ನು ಬೆಳಗ್ಗೆ 7:00 ರಿಂದ ಸಂಜೆ 7:00 ರವರೆಗೆ ತೆರೆಯಲು ತಹಸೀಲ್ದಾರ್‌ ಮುಜರಾಯಿ ಇಲಾಖೆ ರವರನ್ನು ಕೋರಲಾಗುವುದು.