• ಸಾಮಾಜಿಕ ಮಾಧ್ಯಮ ಲಿಂಕ್ಸ್
  • Site Map
  • Accessibility Links
  • ಕನ್ನಡ
ಮುಚ್ಚಿ

ಹಾಸನಾಂಬ ವಸ್ತು ಪ್ರದರ್ಶನ

ಜಾತ್ರಾ ಮಹೋತ್ಸವದ ಪ್ರಯುಕ್ತ ಭಕ್ತಾದಿಗಳಿಗೆ

ಹಾಸನಾಂಬ ವಸ್ತು ಪ್ರದರ್ಶನದ ವಿಶೇಷತೆಗಳು

  • ತಾಯಿ ಹಾಸನಾಂಬ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಜಾತ್ರಾ ಮಹೋತ್ಸವ ಅಂಗವಾಗಿ ವಸ್ತು ಪ್ರದರ್ಶನವನ್ನು ದಿನಾಂಕ 09/10/2025 ರಿಂದ 23/10/2025 ರ ವರೆಗೆ, ಹಾಸನ ನಗರದ ಸಾಲಗಮೆ ರಸ್ತೆಯಲ್ಲಿರುವ ಸರ್ಕಾರಿ ವಿಜ್ಞಾನ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದೆ.
  • ವಸ್ತು ಪ್ರದರ್ಶನ ದಿನಗಳಲ್ಲಿ, ಪ್ರದರ್ಶನ ಕಾಲಾವದಿಯನ್ನು ಸಮಯ ಬೆಳಗ್ಗೆ 09:00 ಗಂಟೆಯಿOದ ರಾತ್ರಿ 08:30 ರ ವರೆಗೆ ನಿಗದಿಪಡಿಸಲಾಗಿದೆ.
  • ವಸ್ತು ಪ್ರದರ್ಶನದಲ್ಲಿ ಹಾಸನ ಜಿಲ್ಲೆಯ ಯುವ ಉದ್ಯಮಿಗಳ ಉತ್ಕೃಷ್ಟ ಉತ್ಪನ್ನಗಳನ್ನು ಜಿಲ್ಲೆಗೆ ಮತ್ತು ಹೊರಜಿಲ್ಲೆಯ ಗ್ರಾಹಕರಿಗೆ ಇನ್ನಷ್ಟು ಪರಿಷಯಿಸಿ ಮಾರುಕಟ್ಟೆ ವೃದ್ದಿಸುವ ಬಗ್ಗೆ ವಿಶೇಷ ಗಮನಹರಿಸಿದೆ.
  • ವಸ್ತು ಪ್ರದರ್ಶನದಲ್ಲಿ ಹಾಸನ ಜಿಲ್ಲೆಯ ಮಹಿಳಾ ಸ್ವಸಹಾಯ ಸಂಘಗಳ ವಿಶಿಷ್ಠ ಸೊಗಡಿನ ಸಾಂಪ್ರದಾಯಿಕ ಅಡುಗೆ ಗೃಹ ಉತ್ಪನ್ನಗಳನ್ನು ಜಿಲ್ಲೆಗೆ ಮತ್ತು ಹೊರಜಿಲ್ಲೆಯ ಗ್ರಾಹಕರಿಗೆ ಇನ್ನಷ್ಟು ಪರಿಷಯಿಸಿ ಮಾರುಕಟ್ಟೆ ವೃದ್ದಿಸುವ ಬಗ್ಗೆ ವಿಶೇಷ ಗಮನಹರಿಸಿದೆ.
  • ವಸ್ತು ಪ್ರದರ್ಶನದಲ್ಲಿ ಸರ್ಕಾರದ ಸಹಾಯಧನ ಯೋಜನೆಗಳ ಫಲಾನುಭವಿಗಳು, ಉದ್ಯಮಿಗಳಾಗಿ ಹೊರಹೊಮ್ಮಿ ರಾಜ್ಯ, ರಾಷ್ಟ್ರ ಮಾರುಕಟ್ಟೆ ಮೀರಿ ವಿದೇಶಗಳಿಗೆ ಉತ್ಪನ್ನಗಳನ್ನು ರಫ್ತು ಮಾಡುತ್ತಿರುವಂತೆ, ಅಂತಹ ಯೋಜನೆಗಳು ಮತ್ತು ಸರ್ಕಾರದ ಫಲಾನುಬವಿಗಳನ್ನು ನವ ಉದ್ಯಮ ಸ್ಥಾಪಿಸಲು ಕನಸು ಹೊತ್ತವರಿಗೆ ಪ್ರೇರಣೆಯಾಗಲೆಂದು ಪರಿಚಯಿಸುತ್ತಿರುವುದು ವಿಶೇಷ.
  • ಜಿಲ್ಲೆಯ ಕೃಷಿ ಮತ್ತು ಕೃಷಿ ಸಂಬOಧಿತ ಉದ್ಯಮಗಳ ಅವಕಾಶಗಳನ್ನು ಸರ್ಕಾರಿ ಯೋಜನೆಗಳ ಫಲಾನುಭವಿಗಳ ಮೂಲಕ ಬಗೆ ಬಗೆಯ ಉತ್ಪನ್ನಗಳಾಗಿ ವಸ್ತು ಪ್ರದರ್ಶನದಲ್ಲಿ ಪರಿಚಯಿಸುತ್ತಿರುವುದ ಒಂದು ವೈಶಿಷ್ಠ ಸಂದರ್ಭ.
  • ವಸ್ತು ಪ್ರದರ್ಶನದಲ್ಲಿ ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸಿ, ಖರೀದಿಸುವುದಷ್ಟೇ ಅಲ್ಲದೆ, ಮುಂದಿನ ಮಾರುಕಟ್ಟೆ ವಿಸ್ತರಣೆಗೆ ವ್ಯವಹಾರ ಒಡಂಬಡಿಕೆಗಳನ್ನು ಹೋಲ್ ಸೇಲ್ ಖರೀದಿದಾರರು ಮತ್ತು ರಫ್ತುದಾರರೊಂದಿಗೆ ರೂಪಿಸಿಕೊಳ್ಳಲು ಮುಂದಿನ ಹೆಜ್ಜೆಯಾಗಲಿದೆ.
  • ವಿವಿಧ ಇಲಾಖೆಯ ಆಕರ್ಷನೀಯ ವಸ್ತು ಪ್ರದರ್ಶನಕ್ಕೆ ಅವಕಾಶ ರೂಪಿಸಿರುವ ಜೊತೆಗೆ ವಿವಿಧ ನವೀನ ಕೃಷಿಯಂತ್ರೋಪಕರಣಗಳ ವೀಕ್ಷಣೆಗೂ ಅವಕಾಶ ಕಲ್ಪಿಸಿರುವಂತೆ, 60ಕ್ಕೂ ಹೆಚ್ಚು ಮಳಿಗೆಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದೆ.
  • ವಸ್ತು ಪ್ರದರ್ಶನ ಪ್ರದೇಶದಲ್ಲಿ ದಿನಾಂಕ 19/10/2025 ರಂದು ಬೆಳಗ್ಗೆ 11 ಗಂಟೆಯಿOದ ಸಂಜೆ 4 ಗಂಟೆಯ ಕಾಲಾವದಿಯಲ್ಲಿ ಡಾಗ್ ಶೋ – ಕಾರ್ಯಕ್ರಮವನ್ನು ವಿಶೇಷವಾಗಿ ಆಯೋಜಿಸಲು ಕ್ರಮವಹಿಸಿದೆ.
  • ವಸ್ತು ಪ್ರದರ್ಶನದ ವೇಳೆ, ಅಲ್ಲಿನ ಸುತ್ತಲಿನ ಪ್ರದೇಶವನ್ನು ಸ್ವಚ್ಚವಾಗಿಡುವ ಸಾರ್ವಜನಿಕ ಜವಬ್ದಾರಿಯಿಂದ ಗ್ರಾಹಕರು ಮತ್ತು ಪ್ರದರ್ಶಕರು ಗಮನಹರಿಸಬೇಕಿದೆ. ಈ ನಿಟ್ಟಿನಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇದಿಸಿರುವಂತೆ ಪರ್ಯಾಯ ಪರಿಸರ ಸ್ನೇಹಿ ವ್ಯಾಪಾರ ಕ್ರಮಗಳನ್ನು ಅನುಸರಿಸಲು ತಿಳಿಸಿದೆ.
  • ಪಾಕಸ್ಪರ್ದೆ;ವಸ್ತು ಪ್ರದರ್ಶನ ಪ್ರದೇದಶಲ್ಲಿಯೇ ಸರ್ಕಾರಿ ವಿಜ್ಞಾನ ಕಾಲೇಜು ಕೊಠಡಿಯಲ್ಲಿ ದಿನಾಂಕ 12/10/2025 ರಂದು ಬೆಳಗ್ಗೆ 10:30 ರಿಂದ ಮದ್ಯಾಹ್ನ 2 ಗಂಟೆಯ ವರೆಗೆ ಪಾಕ ಸ್ಪರ್ದೆ ಏರ್ಪಡಿಸಲಾಗಿದೆ. ವಿಜೇತರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವನ್ನು ನೀಡಲಾಗವುದು.