ಮುಚ್ಚಿ

ಹೊಯ್ಸಳೇಶ್ವರ ದೇವಸ್ಥಾನ, ಹಳಬೀಡು

ಹಳೇಬೀಡು ದೇವಸ್ಥಾನವು ಹಳೇಬೀಡಿನಲ್ಲಿ ವಿಷ್ಣುವರ್ಧನ ಮತ್ತು ಎರಡನೇ ಬಲ್ಲಾಳ ಇವರುಗಳಿಂದ ನಿರ್ಮಿಸಲ್ಪಟ್ಟಿರುವ ಹೊಯ್ಸಳೇಶ್ವರ ಮತ್ತು ಕೇದಾರೇಶ್ವರ ಜೋಡಿದೇವಸ್ಥಾನಗಳು, ದೇಗುಲ ವಾಸ್ತು ಶಿಲ್ಪಕ್ಕೆ ಇನ್ನೊಂದು ಅತ್ಯುತ್ತಮ ಉದಾಹರಣೆಯಾಗಿದೆ.  ರಾಮಾಯಣ, ಮಹಾಭಾರತ, ಭಾಗವತಗಳಲ್ಲಿನ ದೃಷ್ಟಾಂತಗಳನ್ನು ಈ ದೇಗುಲಗಳ ಹೊರಗೋಡೆಗಳ ಮೇಲೆ ಚಿತ್ರಿಸಲಾಗಿದೆ. ಇಲ್ಲಿ ಕಲ್ಲಿನ ಮೇಲೆ ಕೊರೆದಿರುವ ದೃಷ್ಟಾಂತ ಕಥೆಗಳು ಶಿಲ್ಪಕಲೆಯ ದಕ್ಷತೆ, ನೈಪುಣ್ಯತೆ ಎಂಥವರನ್ನೂ ಮರುಳುಗೊಳಿಸುವಂತಿವೆ. 

ಫೋಟೋ ಗ್ಯಾಲರಿ

  • ಹೊಯ್ಸಳೇಶ್ವರ ದೇವಸ್ಥಾನ,
  • ಹೊಯ್ಸಳೇಶ್ವರ ದೇವಸ್ಥಾನ,
  • ಹೊಯ್ಸಳೇಶ್ವರ ದೇವಸ್ಥಾನ,

ತಲುಪುವ ಬಗೆ:

ವಿಮಾನದಲ್ಲಿ

ಹಾಸನದಲ್ಲಿ ವಿಮಾನ ನಿಲ್ದಾಣವಿರುವುದಿಲ್ಲ. ಬೆಂಗಳೂರು ಅತಿ ಹತ್ತಿರದ ವಿಮಾನ ನಿಲ್ದಾಣವಾಗಿದ್ದು, ಅಲ್ಲಿಂದ ಭಾರತದಾದ್ಯಂತ ದೊಡ್ಡ ದೊಡ್ಡ ಸ್ಥಳಗಳಿಗೆ ಹಾಗೂ ವಿದೇಶಗಳಿಗೆ ಹೋಗಲು ವಿಮಾನಗಳು ಇರುತ್ತವೆ

ರೈಲಿನಿಂದ

ಹಾಸನವು ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ ಮತ್ತು ಮಂಗಳೂರಿಗೆ ರೈಲು ಸಂಪರ್ಕ ಹೊಂದಿದೆ.

ರಸ್ತೆ ಮೂಲಕ

ಹಳೇಬಬೀಡು ಬೇಲೂರಿನಿಂದ 17 ಕಿ.ಮೀ. ಮತ್ತು ಹಾಸನದಿಂದ 30 ಕಿ.ಮೀ.ದೂರದಲ್ಲಿದೆ. ಹಾಸನ ಮತ್ತು ಬೇಲೂರಿನಿಂದ ವ್ಯವಸ್ಥಿತವಾದ ಬಸ್ ಸೇವೆ ಹಾಗೂ ಟ್ಯಾಕ್ಸಿಗಳು ದೊರೆಯುತ್ತವೆ