ಹಾಸನಾಂಬ ದೇವಾಲಯ
ಇಲ್ಲಿನ ರಾಜಗೋಪುರವನ್ನು ಹೊಸದಾಗಿ ನಿರ್ಮಾಣಮಾಡಲಾಗಿದೆ. ಈ ಗೋಪುರವನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯದ ಪ್ರಾಂಗಣದಲ್ಲಿ ಮುಖ್ಯವಾಗಿ ಮೂರು ದೇವಾಲಯಗಳಿವೆ ಅವುಗಳೆಂದರೆ ದರ್ಬಾರ್ ಗಣಪತಿ ದೇವಾಲಯ, ಹಾಸನಾಂಭ ದೇವಾಲಯ ಹಾಗೂ ಸಿದ್ಧೇಶ್ವರ ದೇವಾಲಯ. ಇಲ್ಲಿ ಇನ್ನೊಂದು ಮುಖ್ಯವಾದ ಸ್ಥಳವೆಂದರೆ ಕಳ್ಳಪ್ಪನ ಗುಡಿ. ಇಲ್ಲಿ 3 ವಿಗ್ರಹಗಳಿದ್ದು ಅವುಗಳು ದೇವಾಲಯವನ್ನು ಕಳ್ಳತನ ಮಾಡಲು ಬಂದು ದೇವಿಯ ಅವಕೃಪೆಗೆ ಒಳಗಾದ ಕಳ್ಳರದ್ದು ಎಂದು ಹೇಳುತ್ತಾರೆ. ಹಿಂದೆ ಹಾಸನಕ್ಕೆ ಸಿಂಹಾಸನಪುರಿ ಎಂಬ ಹೆಸರಿತ್ತು ಅದು ಕಾಲಾನಂತರದಲ್ಲಿ ಹಾಸನ ಎಂದಾಗಿದೆ. ಹಿಂದೆ ಸುಮಾರು 12 ಶತಮಾನದಲ್ಲಿ ಹೊಯ್ಸಳರ ಕಾಲದಲ್ಲಿ ಒಂದು ವಿಗ್ರಹ ಸಿಕ್ಕಿತು ಅದರ ಮುಖ ಮಂದಸ್ಮಿತವನ್ನು ಹೊಂದಿದ್ದರಿಂದ ಹಸನ ಅಂದರೆ ಹಾಸನ ಎಂಬ ಹೆಸರು ಬಂದಿತು ಎಂತಲೂ ಹೇಳುತ್ತಾರೆ. ಇಲ್ಲಿ ದೀಪಾವಳಿಯ ಸಂದರ್ಭದಲ್ಲಿ 12 ದಿನಗಳಕಾಲ ಮಾತ್ರ ದೇವಾಲಯವನ್ನು ತೆರೆಯಲಾಗುತ್ತದೆ. ಇಲ್ಲಿನ ದೇವಾಲಯವನ್ನು ತೆರೆಯಬೇಕಾದರೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ತೆರೆಯಲಾಗುತ್ತದೆ. ಇಲ್ಲಿನ ವಿಷೇಶತೆಯೆಂದರೆ ಇಲ್ಲಿ ಈ ಬಾರಿ ಹಚ್ಚಿದ ದೀಪ ಮುಂದಿನ ವರ್ಷದವರೆಗೂ ಬೆಳಗುತ್ತಿರುತ್ತದೆ ಹಾಗೂ ಹೂವುಗಳೂ ಕೂಡ ತಾಜಾವಾಗಿರುತ್ತದೆ. ಇಲ್ಲಿಗೆ ದಕ್ಷಿಣ ಭಾರತ ಹಾಗೂ ಮಹಾರಾಷ್ಟ್ರದಿಂದ ಭಕ್ತಾದಿಗಳು ಬರುತ್ತಾರೆ.
ಫೋಟೋ ಗ್ಯಾಲರಿ
ತಲುಪುವ ಬಗೆ:
ವಿಮಾನದಲ್ಲಿ
ಹಸನ್ ಒಂದು ವಿಮಾನ ನಿಲ್ದಾಣವನ್ನು ಹೊಂದಿಲ್ಲ ಮತ್ತು ಹತ್ತಿರದ ವಿಮಾನ ನಿಲ್ದಾಣವು ಬೆಂಗಳೂರಿನಿಂದ ಬರುತ್ತದೆ ಮತ್ತು ಅಲ್ಲಿಂದ ಭಾರತ ಮತ್ತು ವಿದೇಶದ ಇತರ ಪ್ರಮುಖ ಸ್ಥಳಗಳಿಗೆ ವಿಮಾನವನ್ನು ತೆಗೆದುಕೊಳ್ಳಬಹುದು.
ರೈಲಿನಿಂದ
ಹಾಸನವು ರೈಲು, ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ ಮತ್ತು ಮಂಗಳೂರಿಗೆ ಸಂಪರ್ಕ ಹೊಂದಿದೆ
ರಸ್ತೆ ಮೂಲಕ
ಹಾಸನ ಬೆಂಗಳೂರು, ಮೈಸೂರು, ಮಂಗಳೂರು, ಮಡಿಕೇರಿ, ಚಿಕ್ಕಮಗಳೂರುಗೆ ಸಂಪರ್ಕ ಹೊಂದಿದೆ. ಇದು ಬೆಂಗಳೂರಿನಿಂದ ಸುಮಾರು 187 ಕಿ.ಮೀ ಮತ್ತು ಮೈಸೂರುನಿಂದ 115 ಕಿ.ಮೀ ದೂರದಲ್ಲಿದೆ. ಒಂದು ಬಾರಿ ಸರ್ಕಾರವನ್ನು ಪಡೆಯಬಹುದು. ಈ ನಗರಗಳು / ಪಟ್ಟಣಗಳಿಂದ ಹಾಸನಕ್ಕೆ ಬಸ್ಸುಗಳು