ಮುಚ್ಚಿ

ಗೊರೂರು ಅಣೆಕಟ್ಟು

ಕಾವೇರಿ ನದಿಯ ಒಂದು ಪ್ರಮುಖ ಉಪನದಿಯಾದ ಹೇಮಾವತಿ ನದಿಗೆ ಅಡ್ಡಲಾಗಿ ಒಂದು ಅಣೆಕಟ್ಟನ್ನು ಕಟ್ಟಲಾಗಿದೆ. ಈ ಅಣೆಕಟ್ಟು ಕರ್ನಾಟಕ ರಾಜ್ಯದ ಹಾಸನದ ಸಮೀಪವಿರುವ ಗೊರೂರಿನಲ್ಲಿದೆ. 1979ರಲ್ಲಿ ಕಟ್ಟಲ್ಪಟ್ಟ ಜಲಾಶಯವು ಹಾಸನ ಜಿಲ್ಲೆಯ ಜನಗಳಿಗೆ ಕುಡಿಯುವ ನೀರಿನ ಹಾಗೂ ನೀರಾವರಿಯ ಉದ್ದೇಶಗಳನ್ನು ಪೂರ್ಣಗೊಳಿಸುತ್ತದೆ. ಹೇಮಾವತಿ ಅಣೆಕಟ್ಟು ಬಹಳ ವಿಶಾಲವಾಗಿದ್ದು, 2810 ಚದರ ಕಿ.ಮೀ. ವಿಸ್ತೀರ್ಣದ ಜಲಾನಯನ ಪ್ರದೇಶವನ್ನು ಆಕ್ರಮಿಸಿದೆ. ಈ ಅಣೆಕಟ್ಟು 4692 ಮೀಟರ್ ಉದ್ದ, 58.5 ಮೀ. ಎತ್ತರವಿದೆ.  ಈ ಅಣೆಕಟ್ಟಿನ ಒಟ್ಟು ಸಂಗ್ರಹಣಾ ಸಾಮರ್ಥ್ಯ 1050.63 mcm.   ಜಲಾಶಯವು 6 ದೊಡ್ಡ ರೇಡಿಯಲ್ ಸ್ಪಿಲ್ ವೇ ತೂಬುಗಳನ್ನು ಹೊಂದಿದೆ.

ಹೇಮಾವತಿ ಅಣೆಕಟ್ಟು ನೋಡುಗರಿಗೆ ಅದರಲ್ಲೂ ಮಳೆಗಾಲದಲ್ಲಿ ಹರಿದು ಬರುವ ಪ್ರವಾಹದ ನೀರು ತೂಬು ಗೇಟುಗಳನ್ನು ತೆರೆದಾಗ ಧುಮ್ಮಿಕ್ಕಿ ಹಾಲ್ನೊರೆಯಂತೆ ಕಂಗೊಳಿಸುತ್ತದೆ. ಅಣೆಕಟ್ಟಿನ ಪಕ್ಕದಲ್ಲೇ ಇರುವ ಹಸಿರು ಹಾಸಿನ ಉಪವನ ವಾತಾವರಣದ ಹಾಗೂ ಸ್ಥಳದ ಸೌಂದರ್ಯವನ್ನು ವೃದ್ಧಿಸುತ್ತದೆ.  ಸ್ಥಳೀಯರು ಆಗಾಗ್ಗೆ ಇಲ್ಲಿಗೆ ಭೇಟಿಕೊಡುತ್ತಿರುತ್ತಾರೆ.  ಬೆಳಗಿನ ಹೊತ್ತಿನಲ್ಲಿ ಅಣೆಕಟ್ಟಿಗೆ ಭೇಟಿಕೊಡುವುದು ಬಹಳ ಆನಂದದಾಯಕ, ಆಹ್ಲಾದಕರ ಮತ್ತು ಸ್ಫೂರ್ತಿದಾಯಕವಾಗಿರುತ್ತದೆ.  ಬೇರೆ ಬೇರೆ ಬಗೆಯ ನೀರುಹಕ್ಕಿಗಳು ಹಾರಾಡುವುದು, ನೀರೊಳಗೆ ಧುಮುಕುವುದು ಮಾಡುತ್ತಿರುತ್ತವೆ. ಶ್ರೀ ಪರವಾಸುದೇವ ಮತ್ತು ಯೋಗಾನರಸಿಂಹ ದೇವಸ್ಥಾನಗಳು ಅಣೆಕಟ್ಟಿಗೆ ಸಮೀಪದಲ್ಲಿದ್ದು, ಜನಪ್ರಿಯ ಪ್ರವಾಸಿ ತಾಣಗ

ಫೋಟೋ ಗ್ಯಾಲರಿ

  • ಗೊರೂರು ಅಣೆಕಟ್ಟು ಹಾಸನ
  • ಗೊರೂರು ಅಣೆಕಟ್ಟು ಹಾಸನ
  • ಗೊರೂರು ಅಣೆಕಟ್ಟು ಹಾಸನ

ತಲುಪುವ ಬಗೆ:

ವಿಮಾನದಲ್ಲಿ

ಹಾಸನದಲ್ಲಿ ವಿಮಾನ ನಿಲ್ದಾಣವಿರುವುದಿಲ್ಲ. ಬೆಂಗಳೂರು ಅತಿ ಹತ್ತಿರದ ವಿಮಾನ ನಿಲ್ದಾಣವಾಗಿದ್ದು, ಅಲ್ಲಿಂದ ಭಾರತದಾದ್ಯಂತ ದೊಡ್ಡ ದೊಡ್ಡ ಸ್ಥಳಗಳಿಗೆ ಹಾಗೂ ವಿದೇಶಗಳಿಗೆ ಹೋಗಲು ವಿಮಾನಗಳು ಇರುತ್ತವೆ

ರೈಲಿನಿಂದ

ಹಾಸನವು ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ ಮತ್ತು ಮಂಗಳೂರಿಗೆ ರೈಲು ಸಂಪರ್ಕ ಹೊಂದಿದೆ.

ರಸ್ತೆ ಮೂಲಕ

ಹಾಸನದಿಂದ 30 ಕಿ.ಮೀ.