ಮುಚ್ಚಿ

ದೂರುಗಳನ್ನು ಸಲ್ಲಿಸುವುದು ಹೇಗೆ

  ಪಿ.ಜಿ.ಆರ್.ಎಸ್ ಹಾಸನ್ ಬಗ್ಗೆ

ಹಾಸನ ಜಿಲ್ಲಾ ಸಾರ್ವಜನಿಕರ ಕುಂದು ಕೊರತೆಗಳ ನಿವಾರಣಾ ಕೋಶವು ಸಾರ್ವಜನಿಕರಿಗೆ ಅವರುಗಳ ಕುಂದು ಕೊರತೆಗಳ ನಿವಾರಣಿಗೆ ವಿಶೇಷವಾದ ತಂತ್ರಾಂಶವನ್ನು ರೂಪಿಸಲಾಗಿದೆ. ಕುಂದುಕೊರತೆಗಳ ನಿವಾರಣೆಗೆ ಅರ್ಜಿಗಳನ್ನು ಯಾವುದೇ ಸ್ಥಳದಿಂದಲಾದರೂ ಆನ್ ಲೈನ್ ಮುಖಾಂತರ ದಾಖಲಿಸಲು ಸಹಕಾರಿಯಾಗಿರುತ್ತದೆ. ಈ ಒಂದು ವ್ಯವಸ್ಥೆಯನ್ನು ಸಾರ್ವಜನಿಕರು ಅವರ ಕುಂದು ಕೊರತೆಗಳ ಅರ್ಜಿಯನ್ನು ನೇರವಾಗಿ ಸಂಬಂಧಿಸಿದ ಇಲಾಖೆಗಳಿಗೆ ಸಲ್ಲಿಸಬಹುದಾಗಿದ್ದು, ಸಲ್ಲಿಸಿದ ಅರ್ಜಿಗಳ ಬಗ್ಗೆ ಸಂಬಂಧಿಸಿದವರು ಕೈಗೊಂಡಿರುವ ಕ್ರಮಗಳ ವಿವರಗಳನ್ನು ಆನ್ ಲೈನ್ ಮುಖಾಂತರ ಪರಿಶೀಲಿಸಿಕೊಳ್ಳಬಹುದಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ವ್ಯವಸ್ಥೆಯನ್ನು ಬಳಸಿಕೊಂಡು ಸಾರ್ವಜನಿಕರ ಅವರ ಕುಂದು ಕೊರತೆಗಳನ್ನು ಪೋರ್ಟಬಲ್ ಡಾಕ್ಯುಮೆಂಟ್ ನಮೂನೆ (ಪಿ.ಡಿ.ಎಫ್)ಯಲ್ಲಿ ಆನ್ ಲೈನ್ ಮುಖಾಂತರ ದಾಖಲಿಸಬಹುದಾಗಿದೆ. ಈ ವ್ಯವಸ್ಥೆಯು ಪಾರದರ್ಶಕದಿಂದ ತ್ವರಿತವಾಗಿ ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ಕುಶಲ ರಚನಾಕ್ರಮದ ಉದ್ದೇಶವಾಗಿದೆ. ಈ ಮಾಹಿತಿಯನ್ನು ಗಣಕಯಂತ್ರದಲ್ಲಾಗಲೀ, ಸ್ಮಾರ್ಟ್ ಫೋನ್ನ ಮುಖಾಂತರವಾಗಲಿ ಸಾರ್ವಜನಿಕರು ಪರಿಶೀಲಿಸಿಕೊಳ್ಳಬಹುದಾದ ವ್ಯವಸ್ಥೆಯನ್ನು ಹೊಂದಿರುತ್ತದೆ.

 ಪಿ.ಜಿ.ಆರ್.ಎಸ್ ನ ವಿಶೇಷತೆಗಳು

  •   ಯಾವುದೇ ಸ್ಥಳದಿಂದ ಆನ್ ಲೈನ್ ಮುಖಾಂತರ ದೂರುಗಳನ್ನು ದಾಖಲಿಸಬಹುದಾಗಿದೆ.
  •   ಆನ್ ಲೈನ್ ಮುಖಾಂತರ ಸಲ್ಲಿಸಿದ ದೂರ ಅರ್ಜಿಗಳ ಸ್ಥಿತಿಗಳನ್ನು ಪರಿಶೀಲಿಸಿಕೊಳ್ಳುವ ವ್ಯವಸ್ಥೆಯನ್ನು ಹೊಂದಿದೆ.
  •   ದೂರು ಅರ್ಜಿಗಳ ವಿಚಾರಣೆ ಪಾರದರ್ಶಕತೆಯಿಂದ ಕೂಡಿದ್ದು, ತ್ವರಿತವಾಗಿ ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ವ್ಯವಸ್ಥೆಯಾಗಿದೆ.
  •   ದೂರ ಅರ್ಜಿಗಳ ಬಗ್ಗೆ ಕೈಗೊಂಡ ಕ್ರಮವನ್ನು ಆನ್ ಲೈನ್ ಮುಖಾಂತರ ಕಂಪ್ಯೂಟರ್ ಹಾಗೂ ಸ್ಮಾರ್ಟ್ ಫೋನ್ನಲ್ಲಿ ಪರಿಶೀಲಿಸಿಕೊಳ್ಳಬಹುದಾದ ವ್ಯವಸ್ಥೆಯನ್ನೊಳಗೊಂಡಿದೆ.

ಭೇಟಿ: https://dahassan.kar.nic.in/hassanpgc/

ಡಿಸಿ ಆಫೀಸ್ ಕಾಂಪ್ಲೆಕ್ಸ್

ಡಿಸಿ ಆಫೀಸ್ ಕಾಂಪ್ಲೆಕ್ಸ್ ಬಿ ಎಂ ರೋಡ್ ಹಸ್ಸನ್ 573201
ಸ್ಥಳ : ಡಿಸಿ ಆಫೀಸ್ ಕಾಂಪ್ಲೆಕ್ಸ್ | ನಗರ : ಹಾಸನ | ಪಿನ್ ಕೋಡ್ : 573201
ದೂರವಾಣಿ : 08172-267345