ಹಾಸನಾಂಬ ಜಾನಪದ ಜಾತ್ರೆ
ಜಾತ್ರಾ ಮಹೋತ್ಸವದ ಪ್ರಯುಕ್ತ ಭಕ್ತಾದಿಗಳಿಗೆ
ಹಾಸನಾಂಬ ಜಾನಪದ ಜಾತ್ರಾ ಸಾಂಸ್ಕೃತಿಕ ವಿಶೇಷತೆಗಳು
- ತಾಯಿ ಹಾಸನಾಂಬ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಹಾಸನ ಜಿಲ್ಲೆಯ ಸಾಂಸ್ಕೃತಿಕ ಜಾನಪದ ಕಲಾ ವೈಭವದ ಹಿರಿಮೆಯನ್ನು ಪರಿಚಯಿಸಲು ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
- ಹಾಸನಾಂಬ ಜಾನಪದ ಜಾತ್ರಾ ಉದ್ಘಾಟನಾ ಕಾರ್ಯಕ್ರಮ: ಜಾತ್ರಾ ಮಹೋತ್ಸವದ ಪ್ರಾರಂಭದ ದಿನಾಂಕ: 09/10/2025 ರಂದು ಸಂಜೆ 6:00 ಗಂಟೆಗೆ ಹಾಸನ ನಗರದ ಮಹಾರಾಜ ಪಾರ್ಕ್ ಹೊರಗಿನ ಹೇಮಾವತಿ ಪುತ್ಥಳಿ ಬಳಿ ಮಾನ್ಯ ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಇತರೆ ಗಣ್ಯರಿಂದ “ಜಾನಪದ ಜಾತ್ರಾ” ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉದ್ಘಾಟನೆ ಮೂಲಕ ಚಾಲನೆ ನೀಡಲಾಗುವುದು.
- ಹಾಸನಾಂಬ ಜಾನಪದ ಜಾತ್ರಾ ಹೊಯ್ಸಳ ವೇದಿಕೆ: ದಿನಾಂಕ 10/10/2025 ರಿಂದ 21/10/2025 ರ ವರೆಗೆ ಹಾಸನ ನಗರದ ಶುಭಾಷ್ ಚೌಕದ ಬಳಿ ಸಂಜೆ 06:30 ರಿಂದ ರಾತ್ರಿ 08:30ರ ವರೆಗೆ ವಿಶೇಷ ಜಾನಪದ ನೃತ್ಯೋತ್ಸವ ವೀಕ್ಷಿಸಲು ವ್ಯವಸ್ಥೆ ಕೈಗೊಳ್ಳಲಾಗಿರುತ್ತದೆ.
- ಹಾಸನಾಂಬ ಜಾನಪದ ಜಾತ್ರಾ ಬಾಹುಬಲಿ ವೇದಿಕೆ: ದಿನಾಂಕ 17/10/2025 ರಿಂದ 20/10/2025 ರ ವರೆಗೆ ಹಸನ ನಗರದ ಸಿಲ್ವರ್ ಜೂಬ್ಲಿ ಪಾರ್ಕ್ ನಲ್ಲಿ ವಿಶೇಷ ಫಲಪುಷ್ಪ ಪ್ರದರ್ಶನ ಏರ್ಪಡಿಸಿರುವುದರಿಂದ ಸಂಜೆ 7 ಗOಟೆಯಿಂದ ರಾತ್ರಿ 9 ಗಂಟೆಯ ವರೆಗೆ ಹಾಸನ ಜಿಲ್ಲೆಯ ಶಾಲಾ ಕಾಲೇಜು ಯುವ ಪ್ರತಿಬೆಗಳಿಂದ ಜಾನಪದ ನೃತ್ಯೋತ್ಸವ ವೀಕ್ಷಿಸಲು ವ್ಯವಸ್ಥೆ ಕೈಗೊಳ್ಳಲಾಗಿರುತ್ತದೆ.
- ಹಾಸನಾಂಬ ಜಾನಪದ ಕಲಾ ಸಂಭ್ರಮ ವೇದಿಕೆ: ದಿನಾಂಕ: 10/10/2025 ರಿಂದ 20/10/2025 ರ ವರೆಗೆ ದಿನದ ಮೂರು ಕಾಲವದಿಯಲ್ಲಿ ದೇವಸ್ಥಾನದ ಆವರಣದಲ್ಲಿ, ಸರತಿ ಸಾಲಿಗೆ ಹೊಂದಿಕೊOಡOತೆ ಬೆಳಗ್ಗೆ 05:30 ರಿಂದ ಬೆಳಗ್ಗೆ 07:30 ರ ವರೆಗೆ ಭಜನೆ, ಬೆಳಗ್ಗೆ 10 ರಿಂದ ಮದ್ಯಾಹ್ನ 1 ಗಂಟೆಯವರೆಗೆ ಮತ್ತು ರಾತ್ರಿ 8 ಗOಟೆಯಿOದ ರಾತ್ರಿ 11 ಗಂಟೆಯವರೆಗೆ ಲೈವ್ ಮ್ಯೂಸಿಕ್ ಕರ್ಯಕ್ರಮಗಳಿರುತ್ತದೆ.
- ಜಿಲ್ಲೆಯ ಯುವ ಕಲಾ ಪ್ರತಿಭೆಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಜಾನಪದ ಕಲಾ ಕ್ಷೇತ್ರದಲ್ಲಿ, ಜಿಲ್ಲೆಯ ಜಾನಪದಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಈ ಅವಕಾಶಗಳನ್ನು ರೂಪಿಸಿದೆ.