ಮುಚ್ಚಿ

ವಸ್ತ್ರ ಸಂಹಿತೆ ನಿಯಮಗಳು

ತಾಯಿ ಹಾಸನಾಂಬೆಯ ಶ್ರದ್ದಾ-ಭಕ್ತಿಗೆ ಪಾತ್ರರಾಗಲು ವಸ್ತ್ರ ಸಂಹಿತೆ (Dress Code) ನಿಯಮಗಳು

  • ತಾಯಿ ಹಾಸನಾಂಬೆಯ ಇತಿಹಾಸ 12ನೇ ಶತಮಾನದಿಂದ ಪ್ರಸಿದ್ದಿ ಪಡೆದಿದ್ದು ದೇವಿಯ ದರ್ಶನಕ್ಕೆ ಒಂದು ಸಾoಪ್ರಾದಾಯಿಕ ಇತಿಹಾಸವಿದ್ದು ಜನರಲ್ಲಿ ವರ್ಷದಿಂದ ವರ್ಷಕ್ಕೆ ನಂಬಿಕೆ ವೃದ್ಧಿಸುತ್ತಿರುವುದು ಒಂದು ಸoತೋಷದಾಯಕ ಬೆಳವಣಿಗೆ.
  • ಹಾಸನ ಜಿಲ್ಲೆಯು ಐತಿಹಾಸಿಕ ಮತ್ತು ಸಾಂಪ್ರಾದಾಯಿಕ ಪರಂಪರೆಯನ್ನು ಹೊಂದಿದ್ದು ಜಾತ್ರಾ ಮಹೋತ್ಸವದ ವೇಳೆ ದರ್ಶನ ಪಡೆಯುವ ಭಕ್ತಾದಿಗಳು ಅವರ ಉಡುಗೆಗಳಲ್ಲಿ ಸಾಂಪ್ರದಾಯಿಕ ವಸ್ತ್ರ -ಸoಹಿತೆ ಅನುಸರಿಸಲು ಒತ್ತು ನೀಡಿದೆ.
  • ದೇವಸ್ಥಾನದ ಆವರಣದಿಂದ ದೇವರ ದರ್ಶನಕ್ಕೆ ಪ್ರವೇಶ ಪಡೆಯುವ ಭಕ್ತಾದಿಗಳು ಭಾರತೀಯ ಸಂಪ್ರದಾಯದOತೆ ಅನುಚಿತ ಉಡುಪು ಧರಿಸುವುದು ಕಡ್ಡಾಯ. ಪಾಶ್ಚಿಮಾತ್ಯ ಅರೆಬರೆ ಉಡುಗೆಗಳಲ್ಲಿ ದರ್ಶನಾವಕಾಶವಿರುವುದಿಲ್ಲ.
  • ಜಾತ್ರಾ ಮಹೋತ್ಸವದಲ್ಲಿ ಕರ್ತವ್ಯ ನಿರತ ಸಮವಸ್ತ್ರ ಸಂಹಿತೆ ಅಧಿಕಾರಿ/ಸಿಬ್ಬಂಧಿಗಳಿಗೆ ಕರ್ತವ್ಯ ನಿರತ ಸಮವಸ್ತ್ರದೊಂದಿಗೆ ದೇವಸ್ಥಾನದ ಗರ್ಭಗುಡಿ ಪ್ರವೇಶಕ್ಕೆ ಧಾರ್ಮಿಕ ನಿಯಾಮಾನುಸಾರ ನಿರ್ಭಂದವಿರುತ್ತದೆ.