
ಕೆಎಸ್ಟಿಡಿಸಿ ಪ್ರವಾಸ ಪ್ಯಾಕೇಜ್ 11: ಬೆಂಗಳೂರು-ಹಾಸನಾಂಬ ದರ್ಶನ
ಆರಂಭದ ಸ್ಥಳ:
|
ಕೆ.ಎಸ್.ಟಿ.ಡಿ.ಸಿ. ಕಛೇರಿ ಯಶವಂತಪುರ,ಬೆಂಗಳೂರು
|
ಮುಕ್ತಾಯದ ಸ್ಥಳ:
|
ಕೆ.ಎಸ್.ಟಿ.ಡಿ.ಸಿ. ಕಛೇರಿ ಯಶವಂತಪುರ,ಬೆಂಗಳೂರು
|
ಪ್ರವಾಸದ ಥೀಮ್:
|
ಧಾರ್ಮಿಕ /ಪರಂಪರೆ ಪ್ರವಾಸ ಮತ್ತು ಹಾಸನಾಂಬ ದರ್ಶನ
|
ಕೆ.ಎಸ್.ಟಿ.ಡಿ.ಸಿ. ದರ
|
ಮೊತ್ತ ರೂ.2016/- (ದರ್ಶನ ಪಾಸ್ ಒಳಗೊಂಡಿರುತ್ತದೆ)
|
ಆಫ್ಲೈನ್ ಬುಕಿಂಗ್
|
ಕೆಎಸ್ಟಿಡಿಸಿ ಕಚೇರಿ. ಯಶವಂತಪುರ |
|
WWW.KSTDC.CO |
ವಿವರವಾದ ವೇಳಾಪಟ್ಟಿ
ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನ, ನುಗ್ಗೇಹಳ್ಳಿ:
- ಬೆಳಿಗ್ಗೆ 06.00ಕ್ಕೆ – ನುಗ್ಗೇಹಳ್ಳಿಯ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನಕ್ಕೆ ನಿರ್ಗಮನ(ಬೆಂಗಳೂರಿನಿಂದ)
- ಬೆಳಿಗ್ಗೆ 10.00ಕ್ಕೆ – ನುಗ್ಗೇಹಳ್ಳಿಯ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಆಗಮನ
ಬೆಳಿಗ್ಗೆ 8.00 ಯಡೆಯೂರು [ಪ್ರಯಾಣಿಕರು ಸ್ವತಃ ಶುಲ್ಕ ಪಾವತಿಸಬೇಕಾಗುತ್ತದೆ]
ಪ್ರವಾಸಿ ತಾಣದ ಮಾಹಿತಿ:
- ಕ್ರಿ.ಶ. 1246 ರಲ್ಲಿ ಹೊಯ್ಸಳ ರಾಜ ವೀರಸೋಮೇಶ್ವರನ ಆಳ್ವಿಯ ಸಂದರ್ಭದಲ್ಲಿ ಬೊಮ್ಮಣ್ಣ ದಂಡನಾಯಕ ನಿರ್ಮಿಸಿದನು ಎಂದು ಉಲ್ಲೇಖಿಸಲಾಗಿದೆ.
- ಇದನ್ನು ಹೊಯ್ಸಳ ತ್ರಿಕೂಟ (ಮೂರು ಗರ್ಭಗುಡಿ) ಶೈಲಿಯಲ್ಲಿ ನಿರ್ಮಿಸಲಾಗಿದೆ – ಕೇಶವ (ಪಶ್ಚಿಮ), ಲಕ್ಷ್ಮಿ ನರಸಿಂಹ (ಉತ್ತರ) ಮತ್ತು ವೇಣುಗೋಪಾಲ (ದಕ್ಷಿಣ) ಗೆ ಸಮರ್ಪಿಸಲಾಗಿದೆ.
ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 30 ನಿಮಿಷಗಳು
ನವಿಲೆ ನಾಗೇಶ್ವರ ದೇವಸ್ಥಾನ, ನವಿಲೆ:
- ಬೆಳಿಗ್ಗೆ 10.30 ಕ್ಕೆ – ನಾಗೇಶ್ವರ ದೇವಾಸ್ಥಾನಕ್ಕೆ ನಿರ್ಗಮನ
- ಬೆಳಿಗ್ಗೆ 11.00 ಕ್ಕೆ – ನಾಗೇಶ್ವರ ದೇವಾಸ್ಥಾನಕ್ಕೆ ಆಗಮನ
ಪ್ರವಾಸಿ ತಾಣದ ಮಾಹಿತಿ:
- ಇಲ್ಲಿ ಪ್ರಸಿದ್ದ ನಾಗೇಶ್ವರ ದೇವಸ್ಥಾನವಿದ್ದು, ಈ ದೇವಾಲಯವು 900 ಕ್ಕೂ ಹೆಚ್ಚು ಹಳೆಯ ಐತಿಹಾಸಿಕ ದೇವಸ್ಥಾನವಾಗಿದೆ.
ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 1.00 ಗಂಟೆಗಳು
ಮಧ್ಯಾಹ್ನ 1.00 ರಿಂದ 2.00 ರವರೆಗೆ ಹೋಟೆಲ್ನಲ್ಲಿ ಊಟ
[ಪ್ರಯಾಣಿಕರು ಸ್ವತಃ ಶುಲ್ಕ ಪಾವತಿಸಬೇಕಾಗುತ್ತದೆ]
ಹಾಸನಾಂಬ ದೇವಸ್ಥಾನ, ಹಾಸನ:
ಮಧ್ಯಾಹ್ನ 2.30 ಕ್ಕೆ – ಹಾಸನದ ಶ್ರೀ ಹಾಸನಾಂಬ ದೇವಸ್ಥಾನಕ್ಕೆ ಆಗಮನ
ಪ್ರವಾಸಿ ತಾಣದ ಮಾಹಿತಿ:
- ಇದು ಒಂದು ಪುರಾತನ ಕಾಲದ ದೇವಾಲಯವಾಗಿದೆ.
- ಈ ದೇವಾಲಯವು ವರ್ಷಕ್ಕೆ ಒಂದು ಬಾರಿ ದೀಪಾವಳಿ ಸಮಯದಲ್ಲಿ ತೆರೆಯಲ್ಪಡುತ್ತದೆ.
- ಹಾಸನಾಂಬ ದೇವಾಲಯದಲ್ಲಿ ಮಹೇಶ್ವರಿ, ಕೌಮಾರಿ ಮತ್ತು ವೈಷ್ಣವಿರೂಪದಲ್ಲಿ ದೇವಿ ನೆಲೆಸಿರುತ್ತಾರೆ.
ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 2.30 ಗಂಟೆಗಳು
ಸಂಜೆ : 5.00 ಗಂಟೆಗೆ ಬೆಂಗಳೂರಿಗೆ ನಿರ್ಗಮನ