ಮುಚ್ಚಿ

ಪ್ರವಾಸ ಪ್ಯಾಕೇಜ್-01: ಹಾಸನಾಂಬ ಸಪ್ತಮಾತೃಕೆಯರ ದರ್ಶನ

Slide1

ಆರಂಭದ ಹಂತ: ನಗರ ಬಸ್ ನಿಲ್ದಾಣ ಹಾಸನ
ಅಂತ್ಯ ಹಂತ: ನಗರ ಬಸ್ ನಿಲ್ದಾಣ ಹಾಸನ
ಪ್ರವಾಸದ ವಿಷಯ: ಧಾರ್ಮಿಕ ಅನುಭವ/ಹಾಸನಾಂಬಾ ಸಪ್ತಮಾತೃಕೆ ದರ್ಶನ
ಕೆಎಸ್‌ಆರ್‌ಟಿಸಿ ದರ:
ವಯಸ್ಕರಿಗೆ: 
ರೂ. 400+ ರೂ 1000 (ದರ್ಶನ ಪಾಸ್)=1400
ಮಕ್ಕಳು (12 ವರ್ಷಕ್ಕಿಂತ ಕಡಿಮೆ ವಯಸ್ಸಿನವರು):
 ರೂ. 300+ ರೂ 1000 (ದರ್ಶನ ಪಾಸ್)=1300
ಆಫ್‌ಲೈನ್ ಬುಕಿಂಗ್
1.ನಗರದ ಹಳೇ ಬಸ್ ನಿಲ್ದಾಣ, ಹಾಸನ
2.ನಗರ ಕೇಂದ್ರ ಬಸ್ ನಿಲ್ದಾಣ, ಹಾಸನ
3.ಸ್ವಾಮಿ ಟೂರ್ ಆಂಡ್ ಟ್ರಾವೆಲ್ಸ್, 
ವಿವೇಕಾನಂದ ಶಾಲೆ ಹತ್ತಿರ, ಹಾಸನ
newಆನ್ಲೈನ್ 
ಬುಕಿಂಗ್
www.ksrtc.in

ವಿವರವಾದ ವೇಳಾಪಟ್ಟಿ

    ಹಾಸನಾಂಬ ದೇವಸ್ಥಾನ, ಹಾಸನ

  • ಬೆಳಿಗ್ಗೆ 08.00ಕ್ಕೆ – ನಗರ ಬಸ್ ನಿಲ್ದಾಣದಿಂದ ನಿರ್ಗಮನ ( 2 ಕಿ.ಮೀ)
  • ಬೆಳಿಗ್ಗೆ 08.30ಕ್ಕೆ – ಹಾಸನಾಂಬ ದೇವಸ್ಥಾನಕ್ಕೆ ಆಗಮನ

(ದರ್ಶನ ಪಾಸ್: ರೂ 1000.00 ಒಳಗೊಂಡಿದೆ)

      ಪ್ರವಾಸಿ ತಾಣದ ಮಾಹಿತಿ:

  • ಇದು ಒಂದು ಪುರಾತನ ಕಾಲದ ದೇವಾಲಯವಾಗಿದೆ.
  • ಈ ದೇವಾಲಯವು ವರ್ಷಕ್ಕೆ ಒಂದು ಬಾರಿ ದೀಪಾವಳಿ ಸಮಯದಲ್ಲಿ ತೆರೆಯಲ್ಪಡುತ್ತದೆ.
  • ಹಾಸನಾಂಬ ದೇವಾಲಯದಲ್ಲಿ ಮಹೇಶ್ವರಿ, ಕೌಮಾರಿ ಮತ್ತು ವೈಷ್ಣವಿರೂಪದಲ್ಲಿ ದೇವಿ ನೆಲೆಸಿರುತ್ತಾರೆ

     ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 2.30 ಗಂಟೆಗಳು

ದೇವಿಗೆರೆ ಕಲ್ಯಾಣಿ, ಹಾಸನ

  •  ಬೆಳಿಗ್ಗೆ 11.00ಕ್ಕೆ – ದೇವಿಗೆರೆ ಕಲ್ಯಾಣಿಗೆ ನಿರ್ಗಮನ (500 ಮೀಟರ್)
  • ಬೆಳಿಗ್ಗೆ 11.15ಕ್ಕೆ – ದೇವಿಗೆರೆ ಕಲ್ಯಾಣಿಗೆ ಆಗಮನ

     ಪ್ರವಾಸಿ ತಾಣದ ಮಾಹಿತಿ:

  • ದೇವಿಗೆರೆ ಕಲ್ಯಾಣಿಯಲ್ಲಿ ಸಪ್ತಮಾತೃಕೆಯರಲ್ಲಿ ವಾರಾಹಿ ದೇವಿ, ಇಂದ್ರಾಣಿ ದೇವಿ ಮತ್ತು ಚಾಮುಂಡಿ ದೇವಿಯರು ನೆಲೆಸಿರುತ್ತಾರೆ

ಮಧ್ಯಾಹ್ನ 12.00 ರಿಂದ 1.00 ರವರೆಗೆ ಹಾಸನದ ಖಾಸಗಿ ಹೋಟೆಲ್‌ನಲ್ಲಿ ಊಟ [ಪ್ರಯಾಣಿಕರು ಸ್ವತಃ ಶುಲ್ಕ ಪಾವತಿಸಬೇಕಾಗುತ್ತದೆ]

ಕೆಂಚಮ್ಮನ ಹೊಸಕೋಟೆ:

  • ಮಧ್ಯಾಹ್ನ 01.30ಕ್ಕೆ – ಕೆಂಚಮ್ಮನ ಹೊಸಕೋಟೆಗೆ ನಿರ್ಗಮನ (40 ಕಿ.ಮೀ)
  • ಮಧ್ಯಾಹ್ನ 03.00ಕ್ಕೆ – ಕೆಂಚಮ್ಮನ ಹೊಸಕೋಟೆಗೆ ಆಗಮನ

    ಪ್ರವಾಸಿ ತಾಣದ ಮಾಹಿತಿ:

  • ಸಪ್ತಮಾತೃಕೆಯರಲ್ಲಿ ಒಬ್ಬರಾದ ಬ್ರಾಹ್ಮಿ ದೇವಿಯನ್ನು ಕೆಂಚಮ್ಮನ ಹೊಸಕೋಟೆಯಲ್ಲಿ ಕೆಂಚಾಂಬಾ ದೇವಿ ಎಂದು ಪೂಜಿಸಲಾಗುತ್ತಿದೆ.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 30 ನಿಮಿಷಗಳು

ಮಧ್ಯಾಹ್ನ 03.30ಕ್ಕೆ – ಹಾಸನದ ನಗರ ಬಸ್ ನಿಲ್ದಾಣ