• ಸಾಮಾಜಿಕ ಮಾಧ್ಯಮ ಲಿಂಕ್ಸ್
  • Site Map
  • Accessibility Links
  • ಕನ್ನಡ
ಮುಚ್ಚಿ

ಹಾಸನಾಂಬ ಪಾಕ ಸ್ಪರ್ಧೆ

ವಸ್ತು ಪ್ರದರ್ಶನ ಪ್ರದೇದಶಲ್ಲಿಯೇ ಸರ್ಕಾರಿ ವಿಜ್ಞಾನ ಕಾಲೇಜು ಕೊಠಡಿಯಲ್ಲಿ ದಿನಾಂಕ 12/10/2025 ರಂದು ಬೆಳಗ್ಗೆ 10:30 ರಿಂದ ಮದ್ಯಾಹ್ನ 2 ಗಂಟೆಯ ವರೆಗೆ ಪಾಕ ಸ್ಪರ್ದೆ ಏರ್ಪಡಿಸಲಾಗಿದೆ. ವಿಜೇತರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವನ್ನು ನೀಡಲಾಗವುದು.

ಪಾಕ ಸ್ಪರ್ಧೆಯಲ್ಲಿ ಭಾಗವಹಿಸಲು ದಯವಿಟ್ಟು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ

ಶ್ರೀ ಹಾಸನಾಂಬ ದೇವಿ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಏರ್ಪಡಿಸಿರುವ ಪಾಕ ಸ್ಪರ್ದೆ ನೊಂದಣಿ

ಪಾಕ ಸ್ಪರ್ದೆ ಮಾಹಿತಿ 

1) ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ಶುಲ್ಕವಿರುವುದಿಲ್ಲ.

2) ಸ್ಪರ್ಧಿಸಲು ಒಬ್ಬರಿಗೆ ಮಾತ್ರ ಅವಕಾಶ (ಆಹಾರ ಪ್ರದರ್ಶನದ ಸಮಯದಲ್ಲಿ ಸಹಾಯಕರ ಸಹಾಯ ಪಡೆಯುವಂತಿಲ್ಲ).

3)ನೋಂದಾಯಿಸಲು ಕೊನೆಯ ದಿನಾಂಕ : 10.10.2025 ಸಾಯಂಕಾಲ 4-00 ಗಂಟೆ. 

5) ಪಾಕ ಸ್ಪರ್ದೆ ನಡೆಯುವ ದಿನಾಂಕ: 12.10.2025.

6) ಮನೆಯಲ್ಲಿ ಸಿದ್ದಪಡಿಸಿದ ಸಸ್ಯಹಾರದೊಂದಿಗೆ ಬೆಳಿಗ್ಗೆ 10:00 ಗಂಟೆಗೆ ಹಾಜರಿರಬೇಕು.

7) ಪ್ರದರ್ಶನದ ಸಮಯ ಬೆಳಗ್ಗೆ 10:00 ರಿಂದ 11:00 ಗಂಟೆ.

8)ಸಸ್ಯಹಾರಿ ಆಹಾರ ಪದಾರ್ಥಗಳನ್ನು ಮಾತ್ರ ಪ್ರದರ್ಶಿಸುವುದು.

9)ಜಂಕ್‌ಫುಡ್ ಸಿದ್ದಪಡಿಸಿ ಪ್ರದರ್ಶಿಸುವಂತಿಲ್ಲ.

10)ಪರಿಕರ ಮತ್ತು ಖಾದ್ಯಾಲಂಕಾರ ವಸ್ತುಗಳನ್ನು ಸ್ಪರ್ಧಿಗಳೇ ತರಬೇಕು ಹಾಗೂ ಪ್ರದರ್ಶನದ ಆಯೋಜಕರು ಸ್ಪರ್ದಿಗಳಿಗೆ ಯಾವುದೇ ಪಾತ್ರೆ/ಪರಿಕರ/ಇತರೆ ವಸ್ತುಗಳನ್ನು ನೀಡಲಾಗುವುದಿಲ್ಲ ಮತ್ತು ತಾವು ತರುವಂತಹ ವಸ್ತುಗಳು ಹಾಗೂ ಸ್ಪರ್ದಿಗಳ ಇತರೆ ಯಾವುದೇ ವಸ್ತುಗಳಿಗೆ ಆಯೋಜಕರು ಜವಬ್ದಾರರಾಗಿರುವುದಿಲ್ಲ.

11)ತೀರ್ಪುಗಾರರು ಅಂತಿಮಗೊಳಿಸುವ  ಸ್ಪರ್ದಾ ವಿಜೇತರ ತೀರ್ಮಾನವೇ ಅಂತಿಮವಾಗಿರುತ್ತದೆ  ಹಾಗೂ ಅವರ ತೀರ್ಪನ್ನು ಯಾವ ಸ್ಪರ್ದಿಗಳು ಸಹ ಪ್ರಶ್ನಿಸುವಂತಿಲ್ಲ.

12)ಮೊದಲ ಮೂರು ವಿಜೇತ ಸ್ಪರ್ಧಿಗಳಿಗೆ ಕ್ರಮವಾಗಿ  1) ರೂ. 10,000/-, 2) ರೂ. 5000/-, 3) ರೂ. 3000/-. ನಗದು ಬಹುಮಾನ ನೀಡಲಾಗುವುದು.   

13) ಪಾಕ ಸ್ಪರ್ದೆ ನಡೆಯುವ ಸ್ಥಳ : ಸರ್ಕಾರಿ ವಿಜ್ಙಾನ ಕಾಲೇಜು ಮೈದಾನದ ಆವರಣ,  ಸಾಲಗಾಮೆ ರಸ್ತೆ, ಹಾಸನ.