ಜಾತ್ರಾ ಮಹೋತ್ಸವದ ವೇಳೆ ಹಾಸನ ನಗರಕ್ಕೆ ಆಗಮಿಸುವ ಭಕ್ತಾದಿಗಳಿಗೆ ವಾಹನ ಸಂಚಾರಿ ನಿಯಮಗಳು
- 2025 ರ ಜಾತ್ರಾ ಮಹೋತ್ಸವಕ್ಕೆ ರಾಜ್ಯ ಮತ್ತು ಹೊರರಾಜ್ಯಗಳಿಂದ 25 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ದರ್ಶನಕ್ಕೆ ಆಗಮಿಸುವ ನಿರೀಕ್ಷೆಯಿದ್ದು, ಅವರ ಸುರಕ್ಷತೆ ಹಾಗೂ ಸುಲಲಿತ ದರ್ಶನ ನಮ್ಮೆಲ್ಲರ ಅತ್ಯಮೂಲ್ಯ ಜವಾಬ್ಚಾರಿ.
- ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಎಲ್ಲಾ ಭಕ್ತಾದಿಗಳ ಸುರಕ್ಷತೆ ದೃಷ್ಟಿಯಲ್ಲಿ ಕರ್ತವ್ಯ ನಿರತ ಅಧಿಕಾರಿ/ಸಿಬ್ಬಂದಿಗಳ ಮಾರ್ಗದರ್ಶನದೊಂದಿಗೆ ಎಲ್ಲಾ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪರಿಪಾಲಿಸುವುದು.
- ಆಯಾ ರಸ್ತೆ ಹೆದ್ದಾರಿ ಮಾರ್ಗವಾಗಿ ಹಾಸನ ನಗರದ ವಿವಿಧ ಭಾಗಗಳಲ್ಲಿ ಪೂರ್ವ ನಿಗಧಿಪಡಿಸಿರುವ ಪಾರ್ಕಿಂಗ್ ಸ್ಥಳಗಳಲ್ಲೇ ವಾಹನ ನಿಲುಗಡೆಗೊಳಿಸುವುದು. ಪಾರ್ಕಿಂಗ್ ಸ್ಥಳಗಳಿಂದ ದರ್ಶನದ ಪ್ರದೇಶದ ವರೆಗೆ ಸ್ಥಳೀಯ ಖಾಸಗಿ ವಾಹನಗಳಾದ ಆಟೋ/ಟ್ಯಾಕ್ಸಿಗಳ ಮೂಲಕ ಮಾತ್ರ ಆಗಮಿ¸ಲು ಅವಕಾಶವಿರುತ್ತದೆ.
- ದೇವಸ್ಥಾನದ ಪರಿಮಿತಿಗೆ ಭಕ್ತಾದಿಗಳ ವಾಹನ ಚಾಲನೆಗೆ ನಿರ್ಬಂಧ ವಿಧಿಸಲಾಗಿರುತ್ತದೆ. ಹಾಗೂ ನಗರದ ವಿವಿಧ ಭಾಗಗಳಲ್ಲಿ ಗುರುತು ಪಡಿಸಿದ ಪಾರ್ಕಿಂಗ್ ಸ್ಥಳಗಳಲ್ಲಿ ಹೊರತುಪಡಿಸಿ ಮತ್ಯಾವುದೇ ಸ್ಥಳದಲ್ಲಿ ವಾಹನ ನಿಲುಗಡೆಯನ್ನು ನಿರ್ಬಂಧಿಸಿದೆ.
- ಸಾರ್ವಜನಿಕ ಬಸ್ ಮತ್ತು ರೈಲುಗಳ ಮೂಲಕ ಆಗಮಿಸುವ ಭಕ್ತಾದಿಗಳಿಗೆ ಬಸ್ ಮತ್ತು ರೈಲ್ವೆ ನಿಲ್ದಾಣದಿಂದ ದರ್ಶನದ ಪ್ರದೇಶದ ವರೆಗೆ ನಗರ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ.
- ನಗರ ಸಾರಿಗೆ ಬಸ್, ಖಾಸಗಿ ಟ್ಯಾಕ್ಸಿ ಮತ್ತು ಆಟೋಗಳು ಭಕ್ತಾದಿಗಳನ್ನು ದರ್ಶನಕ್ಕೆ ನಿಗದಿ ಪಡಿಸಿದ ಸ್ಥಳಗಳಲ್ಲಿ ಇಳಿಸಿದ ಕೂಡಲೇ, ಪಾರ್ಕಿಂಗ್ ನಿಯಮ ಉಲ್ಲಂಘನೆಯಾಗದoತೆ ನಿಗದಿತ ಮಾರ್ಗದಲ್ಲಿಯೇ ಹಿಂದಿರುಗಲು ಸೂಚಿಸಿದೆ.
- ಭಕ್ತಾದಿಗಳು ದರ್ಶನದ ನಂತರವೂ ಎಲ್ಲಾ ಸಂಚಾರಿ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿ ಹಿಂದಿರುಗಲು ಕೋರಿದೆ.
- ಹಾಸನ ನಗರಕ್ಕೆ, ಜಿಲ್ಲೆಯ ವಿವಿಧ ಪ್ರವಾಸೋಧ್ಯಮ ಸ್ಥಳಗಳಿಗೆ ಮತ್ತು ಜಾತ್ರಾ ಮಹೋತ್ಸವದ ಪ್ರಯುಕ್ತವಾಗಿ ನಗರದೊಳಗೆ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನ, ವಸ್ತು ಪ್ರದರ್ಶನ, ಡಾಗ್ ಶೋ, ಆರ್ಟ್ ಗ್ಯಾಲರಿ, ಜಾನಪದ ಜಾತ್ರಾ ಸ್ಥಳಗಳಿಗೆ ತಲುಪಲು ಈ ವೆಬ್ಸೈಟ್ನಲ್ಲಿ ಲಭ್ಯವಿರುವ ಗೂಗಲ್ ರೂಟ್ ಮ್ಯಾಪ್ಗಳ ಲಿಂಕ್ನ್ನು ಬಳಸಿಕೊಳ್ಳುವುದು.