ಮುಚ್ಚಿ

ಪ್ರವಾಸ ಪ್ಯಾಕೇಜ್-10: ಹಾಸನ-ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ-ಬಾಣಾವರ ಕೋಟೆ

Slide 10

ಆರಂಭದ ಹಂತ:
ನಗರ ಬಸ್ ನಿಲ್ದಾಣ, ಹಾಸನ
ಅಂತ್ಯ ಹಂತ: ನಗರ ಬಸ್ ನಿಲ್ದಾಣ, ಹಾಸನ
ಪ್ರವಾಸದ ವಿಷಯ: ಪ್ರಕೃತಿ / ಪರಂಪರೆಯ ಅನುಭವ
ಪ್ರವಾಸಿಗರಿಗೆ ಕಲ್ಪಿಸಿರುವ ಸೌಲಭ್ಯಗಳು
ಪ್ರವಾಸಿ ಮಾರ್ಗದರ್ಶಿ,  ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ
ಪ್ರವಾಸಿ ಮಿತ್ರರೊಂದಿಗೆ ಆರಾಮದಾಯಕ ಪ್ರಯಾಣ
ಕೆಎಸ್‌ಆರ್‌ಟಿಸಿ ದರ:
ಯಸ್ಕರಿಗೆ : ರೂ.500.00
ಮಕ್ಕಳು (12 ವರ್ಷದೊಳಗೆ) : ರೂ.400.00
ಆಫ್‌ಲೈನ್ ಬುಕಿಂಗ್
1.ನಗರದ ಹಳೇ ಬಸ್ ನಿಲ್ದಾಣ, ಹಾಸನ
2.ನಗರ ಕೇಂದ್ರ ಬಸ್ ನಿಲ್ದಾಣ, ಹಾಸನ
3.ಸ್ವಾಮಿ ಟೂರ್ ಆಂಡ್ ಟ್ರಾವೆಲ್ಸ್, ವಿವೇಕಾನಂದ ಶಾಲೆ ಹತ್ತಿರ, 
  ಹಾಸನ
newಆನ್ಲೈನ್ 
ಬುಕಿಂಗ್
www.ksrtc.in

ವಿವರವಾದ ವೇಳಾಪಟ್ಟಿ

ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನ, ಜಾವಗಲ್‌:

  • ಬೆಳಿಗ್ಗೆ 07.30ಕ್ಕೆ – ಜಾವಗಲ್‌ನ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನಕ್ಕೆ ನಿರ್ಗಮನ (41 ಕಿ.ಮೀ)
  • ಬೆಳಿಗ್ಗೆ 09.30ಕ್ಕೆ – ಜಾವಗಲ್‌ನ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಆಗಮನ

     ಪ್ರವಾಸಿ ತಾಣದ ಮಾಹಿತಿ:

  • ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನವನ್ನು ಕ್ರಿ.ಶ. 1250-1260 ರ ಅವಧಿಯಲ್ಲಿ ಹೊಯ್ಸಳ ರಾಜ ಸೋಮೇಶ್ವರನ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು.

      ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 30 ನಿಮಿಷಗಳು

ಶ್ರೀ.ಚನ್ನಕೇಶವ ದೇವಸ್ಥಾನ, ಅರಕೆರೆ:

  • ಬೆಳಿಗ್ಗೆ 10.00ಕ್ಕೆ – ಅರಕೆರೆಯ ಶ್ರೀ.ಚನ್ನಕೇಶವ ದೇವಸ್ಥಾನಕ್ಕೆ ನಿರ್ಗಮನ (13 ಕಿ.ಮೀ)
  • ಬೆಳಿಗ್ಗೆ 10.20ಕ್ಕೆ – ಶ್ರೀ.ಚನ್ನಕೇಶವ ದೇವಸ್ಥಾನ, ಅರಕೆರೆಗೆ ಆಗಮನ

ಪ್ರವಾಸಿ ತಾಣದ ಮಾಹಿತಿ:

  • ಈ ದೇವಾಲಯವನ್ನು 13 ನೇ ಶತಮಾನದಲ್ಲಿ ಹೊಯ್ಸಳ ಆಳ್ವಿಕೆಯ ನಂತರ ನಿರ್ಮಿಸಲಾಯಿತು.

ಮುಖಮಂಟಪ (ಪ್ರವೇಶ ಮಂಟಪ) ಹೊಂದಿರುವ ಸಾಮಾನ್ಯ ನವಗ್ರಹ (ಸಭಾಂಗಣ)ಕ್ಕೆ ತೆರೆದುಕೊಳ್ಳುವ ತ್ರಿಕೂಟ (ಮೂರು ದೇವಾಲಯಗಳು) ವಿನ್ಯಾಸ ಹೊಂದಿದೆ.

  • ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಮೀಕ್ಷೆಯಡಿಯಲ್ಲಿ ಸಂರಕ್ಷಿಸಲಾಗಿದೆ.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 45 ನಿಮಿಷಗಳು

ರಂಗನಾಥಸ್ವಾಮಿ ದೇವಸ್ಥಾನ, ಬೆಟ್ಟದಪುರ

  • ಬೆಳಿಗ್ಗೆ 11.05ಕ್ಕೆ – ಬೆಟ್ಟದಪುರದ ರಂಗನಾಥಸ್ವಾಮಿ ದೇವಸ್ಥಾನಕ್ಕೆ ನಿರ್ಗಮನ (11 ಕಿ.ಮೀ)
  • ಬೆಳಿಗ್ಗೆ 11.25ಕ್ಕೆ– ಬೆಟ್ಟದಪುರದ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಆಗಮನ

    ಪ್ರವಾಸಿ ತಾಣದ ಮಾಹಿತಿ:

  • ಬೆಟ್ಟದಪುರದ ಸುಂದರವಾದ ಬೆಟ್ಟದ ಮೇಲೆ ಈ ದೇವಸ್ಥಾನ ನೆಲೆಸಿದೆ.
  • ದೇವಾಲಯವು ವಿಷ್ಣುವಿನ ಅವತಾರವಾದ ಶ್ರೀ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಸಮರ್ಪಿತವಾಗಿದೆ.

      ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 35 ನಿಮಿಷಗಳು

ಬಾಣಾವರದ ಕೋಟೆ ಸಂಕೀರ್ಣ:

  • ಮಧ್ಯಾಹ್ನ 12.00ಕ್ಕೆ – ಬಾಣಾವರದ ಕೋಟೆ ಸಂಕೀರ್ಣಕ್ಕೆ ನಿರ್ಗಮನ (18 ಕಿ.ಮೀ)
  • ಮಧ್ಯಾಹ್ನ 12.25ಕ್ಕೆ – ಬಾಣಾವರದ ಕೋಟೆ ಸಂಕೀರ್ಣಕ್ಕೆ ಆಗಮನ

ಪ್ರವಾಸಿ ತಾಣದ ಮಾಹಿತಿ:

  • ಪಾಳೇಗಾರರ ಆಳ್ವಿಕೆಯಲ್ಲಿ ಇದನ್ನು ನಿರ್ಮಿಸಲಾಗಿದೆ ಎಂದು ಉಲ್ಲೇಖವಿದೆ. ವಸಾಹತು ಮತ್ತು ಹತ್ತಿರದ ವ್ಯಾಪಾರ ಮಾರ್ಗಗಳನ್ನು ರಕ್ಷಿಸಲು ರಕ್ಷಣಾತ್ಮಕ ಕೋಟೆಯಾಗಿ ಕಾರ್ಯನಿರ್ವಹಿಸಿತು ಎಂದು ಉಲ್ಲೇಖಿಸಲಾಗಿದೆ.
  • ಕೋಟೆ ಸಂಕೀರ್ಣವು ಕೋಟೆ ಆಂಜನೇಯ, ನರಸಿಂಹಸ್ವಾಮಿ ದೇವಸ್ಥಾನ, ಚೌಡೇಶ್ವರಿ ದೇವಸ್ಥಾನ, ಬನಶಂಕರಿ ದೇವಸ್ಥಾನ, ರಂಗನಾಥಸ್ವಾಮಿ ದೇವಸ್ಥಾನ, ಕನ್ನಿಕಾ ಪರಮೇಶ್ವರಿ ಮುಂತಾದ ಐತಿಹಾಸಿಕ ಮತ್ತು ಪ್ರಾಚೀನ ದೇವಾಲಯಗಳನ್ನು ಒಳಗೊಂಡಿದೆ.

      ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 50 ನಿಮಿಷಗಳು

ಮಧ್ಯಾಹ್ನ 01.15 – 02.15 ಬಾಣಾವರದ ಖಾಸಗಿ ಹೋಟೆಲ್ ಊಟ [ಪ್ರಯಾಣಿಕರು ಸ್ವತಃ ಶುಲ್ಕ ಪಾವತಿಸಬೇಕಾಗುತ್ತದೆ]

ರಂಗನಾಥಸ್ವಾಮಿ ದೇವಸ್ಥಾನ, ಬಿಳಿಕಲ್ಲು

  • ಮಧ್ಯಾಹ್ನ 02.15ಕ್ಕೆ – ಬಿಳಿಕಲ್ಲು ರಂಗನಾಥಸ್ವಾಮಿ ದೇವಸ್ಥಾನಕ್ಕೆ ನಿರ್ಗಮನ (30 ಕಿ.ಮೀ)
  • ಮಧ್ಯಾಹ್ನ 03.00ಕ್ಕೆ – ಬಿಳಿಕಲ್ಲು ರಂಗನಾಥಸ್ವಾಮಿ ದೇವಸ್ಥಾನಕ್ಕೆ ಆಗಮನ

    ಪ್ರವಾಸಿ ತಾಣದ ಮಾಹಿತಿ:

  • ದೇವಾಲಯವನ್ನು ಭಗವಾನ್ ರಂಗನಾಥ (ವಿಷ್ಣುವಿನ ರೂಪ)ಕ್ಕೆ ಸಮರ್ಪಿಸಲಾಗಿದೆ.

      ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 45 ನಿಮಿಷಗಳು

ಪುರಾತತ್ವ ವಸ್ತು ಸಂಗ್ರಹಾಲಯ,ಹಾಸನ

  • ಮಧ್ಯಾಹ್ನ 03.45ಕ್ಕೆ- ಹಾಸನದ ಪುರಾತತ್ವ ವಸ್ತು ಸಂಗ್ರಹಾಲಯಕ್ಕೆ ನಿರ್ಗಮನ 65 ಕಿ.ಮೀ
  • ಸಂಜೆ 05.45ಕ್ಕೆ – ಹಾಸನದ ಪುರಾತತ್ವ ವಸ್ತು ಸಂಗ್ರಹಾಲಯಕ್ಕೆ ಆಗಮನ

ಒಟ್ಟು ಪ್ರಯಾಣ : 177 ಕಿ.ಮೀ.