ಮುಚ್ಚಿ

ಪ್ರವಾಸ ಪ್ಯಾಕೇಜ್-05: ಹಾಸನ-ಮಂಜರಾಬಾದ್ ಕೋಟೆ-ಬಿಸಿಲೆ ಘಾಟ್

slide 5

ಆರಂಭದ ಹಂತ:
ನಗರ ಬಸ್ ನಿಲ್ದಾಣ, ಹಾಸನ
ಅಂತ್ಯ ಹಂತ: ನಗರ ಬಸ್ ನಿಲ್ದಾಣ, ಹಾಸನ
ಪ್ರವಾಸದ ವಿಷಯ: ಪ್ರಕೃತಿ / ಪರಂಪರೆಯ ಅನುಭವ
ಪ್ರವಾಸಿಗರಿಗೆ ಕಲ್ಪಿಸಿರುವ ಸೌಲಭ್ಯಗಳು
ಪ್ರವಾಸಿ ಮಾರ್ಗದರ್ಶಿ,  ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ
ಪ್ರವಾಸಿ ಮಿತ್ರರೊಂದಿಗೆ ಆರಾಮದಾಯಕ ಪ್ರಯಾಣ
ಕೆಎಸ್‌ಆರ್‌ಟಿಸಿ ದರ:
ವಯಸ್ಕರಿಗೆ : ರೂ.525.00
ಮಕ್ಕಳು (12 ವರ್ಷದೊಳಗೆ) : ರೂ.425.00
ಆಫ್‌ಲೈನ್ ಬುಕಿಂಗ್
1.ನಗರದ ಹಳೇ ಬಸ್ ನಿಲ್ದಾಣ, ಹಾಸನ 
2.ನಗರ ಕೇಂದ್ರ ಬಸ್ ನಿಲ್ದಾಣ, ಹಾಸನ 
3.ಸ್ವಾಮಿ ಟೂರ್ ಆಂಡ್ ಟ್ರಾವೆಲ್ಸ್,
ವಿವೇಕಾನಂದ ಶಾಲೆ ಹತ್ತಿರ,ಹಾಸನ
newಆನ್ಲೈನ್ 
ಬುಕಿಂಗ್
www.ksrtc.in

ವಿವರವಾದ ವೇಳಾಪಟ್ಟಿ

ಮಂಜರಾಬಾದ್ ಕೋಟೆ:

  • ಬೆಳಿಗ್ಗೆ 07.30ಕ್ಕೆ ಸಕಲೇಶಪುರದ ಮಂಜರಾಬಾದ್ ಕೋಟೆಗೆ ನಿರ್ಗಮನ (44 ಕಿ.ಮೀ)
  • ಬೆಳಿಗ್ಗೆ 09.30ಕ್ಕೆ ಸಕಲೇಶಪುರದ ಮಂಜರಾಬಾದ್ ಕೋಟೆಗೆ ಆಗಮನ

    ಪ್ರವಾಸಿ ತಾಣದ ಮಾಹಿತಿ:

  • ಕ್ರಿ.ಶ 1792 ರಲ್ಲಿ ಟಿಪ್ಪು ಸುಲ್ತಾನ್ ನಿರ್ಮಿಸಿದ ಪರಂಪರೆಯ ಕೋಟೆ.
  • ಈ ಕೋಟೆಯು ವಿಶಿಷ್ಟ 8-ಬಿಂದುಗಳ ನಕ್ಷತ್ರದ ಆಕಾರದಲ್ಲಿದೆ.
  • ಪಶ್ಚಿಮ ಘಟ್ಟಗಳ ವಿಹಂಗಮ ನೋಟದೊಂದಿಗೆ ಎತ್ತರದ ಸ್ಥಳದಲ್ಲಿದೆ.
  • ಛಾಯಾಗ್ರಹಣ ಮತ್ತು ಐತಿಹಾಸಿಕ ವಾಸ್ತುಶಿಲ್ಪವನ್ನು ಅರ್ಥಮಾಡಿಕೊಳ್ಳಲು ಉತ್ತಮ ಸ್ಥಳ.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 02 ಗಂಟೆ

ಮೂಕನಮನೆ ಜಲಪಾತ:

  • ಬೆಳಿಗ್ಗೆ 11.30ಕ್ಕೆ – ಮೂಕನಮನೆ ಜಲಪಾತಕ್ಕೆ ನಿರ್ಗಮನ (36 ಕಿ.ಮೀ)
  • ಮಧ್ಯಾಹ್ನ 01.00ಕ್ಕೆ – ಮೂಕನಮನೆ ಜಲಪಾತಕ್ಕೆ ಆಗಮನ

ಪ್ರವಾಸಿ ತಾಣದ ಮಾಹಿತಿ:

  • ದಟ್ಟವಾದ ಹಸಿರಿನಲ್ಲಿ ಅಡಗಿರುವ ಜಲಪಾತ
  • ಪ್ರಕೃತಿ ಪ್ರಿಯರಿಗೆ ಮತ್ತು ಚಾರಣ ಪ್ರಿಯರಿಗೆ ಯೋಗ್ಯವಾದ ತಾಣವಾಗಿದೆ.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 01 ಗಂಟೆ

ಮಧ್ಯಾಹ್ನ 02.00ಕ್ಕೆ – ಮಧ್ಯಾಹ್ನ 03.00ರವರೆಗೆ ಮೂಕನಮನೆ ಜಲಪಾತದ ಬಳಿ ಖಾಸಗಿ ಹೋಟೆಲ್‌ನಲ್ಲಿ ಊಟ.

(ಪ್ರಯಾಣಿಕರು ಊಟಕ್ಕೆ ಪ್ರತ್ಯೇಕ ಶುಲ್ಕ ಪಾವತಿಸಬೇಕಾಗುತ್ತದೆ)

ಬಿಸಿಲೆ ಘಾಟ್ ವೀಕ್ಷಣಾ ಕೇಂದ್ರ:

  • ಮಧ್ಯಾಹ್ನ 03.00ಕ್ಕೆ – ಬಿಸಿಲೆ ಘಾಟ್ ವೀಕ್ಷಣಾ ಕೇಂದ್ರಕ್ಕೆ ನಿರ್ಗಮನ (25 ಕಿ.ಮೀ)
  • ಸಂಜೆ 04.00ಕ್ಕೆ – ಬಿಸಿಲೆ ಘಾಟ್ ವೀಕ್ಷಣಾ ಕೇಂದ್ರಕ್ಕೆ ಆಗಮನ

     ಪ್ರವಾಸಿ ತಾಣದ ಮಾಹಿತಿ:

  • ಪುಷ್ಪಗಿರಿ, ಕುಮಾರ ಪರ್ವತ, ಪಾಟ್ಲ ಬೆಟ್ಟ, ದೊಡ್ಡಬೆಟ್ಟದ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
  • ಬಿಸ್ಲೆ ಘಾಟ್ ಮೀಸಲು ಅರಣ್ಯ ಸುತ್ತಮುತ್ತಲಿನ ಪ್ರದೇಶವು – ಜೀವವೈವಿಧ್ಯದಿಂದ ಸಮೃದ್ಧವಾಗಿವೆ.

    ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 01 ಗಂಟೆ

ಸಂಜೆ 05.00ಕ್ಕೆ – ಹಾಸನಕ್ಕೆ ನಿರ್ಗಮನ (87 ಕಿ.ಮೀ)

ಒಟ್ಟು ಪ್ರಯಾಣ-192 ಕಿ.ಮೀ