ಮುಚ್ಚಿ

ಪ್ರವಾಸ ಪ್ಯಾಕೇಜ್-04: ಹಾಸನ-ವಾಟೆಹೊಳೆ ಅಣೆಕಟ್ಟು-ಬೆಟ್ಟದ ಭೈರವೇಶ್ವರ ದೇವಸ್ಥಾನ

Slide4

ಆರಂಭದ ಹಂತ:
ನಗರ ಬಸ್ ನಿಲ್ದಾಣ, ಹಾಸನ
ಅಂತ್ಯ ಹಂತ: ನಗರ ಬಸ್ ನಿಲ್ದಾಣ, ಹಾಸನ
ಪ್ರವಾಸದ ವಿಷಯ: ಪ್ರಕೃತಿ / ಪರಂಪರೆಯ ಅನುಭವ
ಪ್ರವಾಸಿಗರಿಗೆ ಕಲ್ಪಿಸಿರುವ ಸೌಲಭ್ಯಗಳು
ಪ್ರವಾಸಿ ಮಾರ್ಗದರ್ಶಿ,  ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ
ಪ್ರವಾಸಿ ಮಿತ್ರರೊಂದಿಗೆ ಆರಾಮದಾಯಕ ಪ್ರಯಾಣ
ಕೆಎಸ್‌ಆರ್‌ಟಿಸಿ ದರ:
ಯಸ್ಕರಿಗೆ : ರೂ.500.00
ಮಕ್ಕಳು (12 ವರ್ಷದೊಳಗೆ) : ರೂ.400.00
ಆಫ್‌ಲೈನ್ ಬುಕಿಂಗ್

1.ನಗರದ ಹಳೇ ಬಸ್ ನಿಲ್ದಾಣ, ಹಾಸನ

2.ನಗರ ಕೇಂದ್ರ ಬಸ್ ನಿಲ್ದಾಣ, ಹಾಸನ

3.ಸ್ವಾಮಿ ಟೂರ್ ಆಂಡ್ ಟ್ರಾವೆಲ್ಸ್,ವಿವೇಕಾನಂದ ಶಾಲೆ ಹತ್ತಿರ, ಹಾಸನ

newಆನ್ಲೈನ್ 
ಬುಕಿಂಗ್
www.ksrtc.in

ವಿವರವಾದ ವೇಳಾಪಟ್ಟಿ

ವಾಟೆಹೊಳೆ ಡ್ಯಾಮ್

  • ಬೆಳಿಗ್ಗೆ 07.30ಕ್ಕೆ – ವಾಟೆಹೊಳೆ ಡ್ಯಾಮ್‌ಗೆ ನಿರ್ಗಮನ (34 ಕಿ.ಮೀ)
  • ಬೆಳಿಗ್ಗೆ 08.45ಕ್ಕೆ – ವಾಟೆಹೊಳೆ ಡ್ಯಾಮ್‌ಗೆ ಆಗಮನ

  ಪ್ರವಾಸಿ ತಾಣದ ಮಾಹಿತಿ:

  • ವಾಟೆಹೊಳೆ ಡ್ಯಾಮ್ ಅನ್ನು 1984 ರಲ್ಲಿ ನಿರ್ಮಿಸಲಾಗಿದೆ.
  • ಜಲಾನಯನ ಪ್ರದೇಶ – 11 ಹೆಕ್ಟೇರ್

   ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 30 ನಿಮಿಷಗಳು

ಶ್ರೀ ಜನಾರ್ದನಸ್ವಾಮಿ ದೇವಸ್ಥಾನ, ಪಾಳ್ಯ (ಆಲೂರು)

  • ಬೆಳಿಗ್ಗೆ 09.15ಕ್ಕೆ – ಪಾಳ್ಯ ಜನಾರ್ದನಸ್ವಾಮಿ ದೇವಸ್ಥಾನಕ್ಕೆ ನಿರ್ಗಮನ (21 ಕಿ.ಮೀ)
  • ಬೆಳಿಗ್ಗೆ 09.45ಕ್ಕೆ – ಪಾಳ್ಯ ಜನಾರ್ದನಸ್ವಾಮಿ ದೇವಸ್ಥಾನಕ್ಕೆ ದೇವಸ್ಥಾನಕ್ಕೆ ಆಗಮನ

   ಪ್ರವಾಸಿ ತಾಣದ ಮಾಹಿತಿ:

  • ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಪಾಳ್ಯ ಗ್ರಾಮದಲ್ಲಿದೆ.
  • ಹೊಯ್ಸಳರ ಕಾಲದ ವಾಸ್ತುಶಿಲ್ಪ ಹೊಂದಿದೆ.
  • ವಿಷ್ಣುವಿಗೆ ಸಮರ್ಪಿತವಾದ ಜನಾರ್ದನಸ್ವಾಮಿ ರೂಪದ ದೇವಾಲಯ.

       ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 30 ನಿಮಿಷಗಳು

ಮರಗಡಿ ಜಲಪಾತ:

  • ಬೆಳಿಗ್ಗೆ 10.15ಕ್ಕೆ – ಮರಗಡಿ ಜಲಪಾತಕ್ಕೆ ನಿರ್ಗಮನ (ಅಬ್ಬಿ ಜಲಪಾತ) (41 ಕಿ.ಮೀ)
  • ಮಧ್ಯಾಹ್ನ 12.15ಕ್ಕೆ – ಮರಗಡಿ ಜಲಪಾತಕ್ಕೆ ಆಗಮನ (ಅಬ್ಬಿ ಜಲಪಾತ)

          ಪ್ರವಾಸಿ ತಾಣದ ಮಾಹಿತಿ:

  • ಮರಗಡಿ ಜಲಪಾತವು ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿರುವ ಶಾಂತವಾದ ಜಲಪಾತವಾಗಿದ್ದು, ಕಾಫಿ ತೋಟ ಮತ್ತು ದಟ್ಟವಾದ ಹಸಿರಿನಿಂದ ಆವೃತವಾಗಿದೆ.
  • ವಿಶೇಷವಾಗಿ ಮಳೆಗಾಲದಲ್ಲಿ ವೀಕ್ಷಣೆಗೆ ಸೂಕ್ತವಾಗಿದೆ.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 01:00 ಗಂಟೆ

ಮಧ್ಯಾಹ್ನ 01:15- ಮಧ್ಯಾಹ್ನ 02:00ರ ವರೆಗೆ ಮರಗಡಿ ಜಲಪಾತ ಬಳಿ ಖಾಸಗಿ ಹೋಟೆಲ್‌ನಲ್ಲಿ ಊಟದ ವ್ಯವಸ್ಥೆ    [ಪ್ರಯಾಣಿಕರು ಊಟಕ್ಕೆ ಸ್ವತಃ ಶುಲ್ಕ ಪಾವತಿಸಬೇಕಾಗುತ್ತದೆ]

ಬೆಟ್ಟದ ಭೈರವೇಶ್ವರ ದೇವಸ್ಥಾನ:

  • ಮಧ್ಯಾಹ್ನ 02.00ಕ್ಕೆ – ಬೆಟ್ಟದ ಭೈರವೇಶ್ವರ ದೇವಸ್ಥಾನಕ್ಕೆ ನಿರ್ಗಮನ (13 ಕಿ.ಮೀ)
  • ಮಧ್ಯಾಹ್ನ 02.30ಕ್ಕೆ – ಬೆಟ್ಟದ ಭೈರವೇಶ್ವರ ದೇವಸ್ಥಾನಕ್ಕೆ ಆಗಮನ

         ಪ್ರವಾಸಿ ತಾಣದ ಮಾಹಿತಿ:

  • ಪ್ರಾಚೀನ ಕಾಲದ ಬೆಟ್ಟದ ಭೈರವೇಶ್ವರ ದೇವಸ್ಥಾನವು ಭಗವಾನ್ ಭೈರವನಿಗೆ ಸಮರ್ಪಿತವಾಗಿದೆ. ಇದು ಸಕಲೇಶಪುರದ ರಮಣೀಯ ಬೆಟ್ಟಗಳ ನಡುವೆ ಇರುವ ಶಿವನ ದೇವಾಲಯವಾಗಿದೆ.
  • ಇದು ಹಚ್ಚ ಹಸಿರಿನ ಕಾಡುಗಳಿಂದ ಆವೃತವಾಗಿದ್ದು, ಪಶ್ಚಿಮ ಘಟ್ಟಗಳ ವಿಹಂಗಮ ನೋಟಗಳನ್ನು ನೀಡುವ ಈ ದೇವಾಲಯವು ಜನಪ್ರಿಯ ಧಾರ್ಮಿಕ ಕೇಂದ್ರವಾಗಿದೆ.
  • ಇದರ ಪ್ರಶಾಂತ ವಾತಾವರಣ ಮತ್ತು ಸಾಂಪ್ರದಾಯಿಕ ವಾಸ್ತುಶಿಲ್ಪವು ಧಾರ್ಮಿಕ ಭಕ್ತರು ಮತ್ತು ಪ್ರಕೃತಿ ಪ್ರಿಯರನ್ನು ಆಕರ್ಷಿಸುತ್ತದೆ.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 02.00 ಗಂಟೆ

ಸಂಜೆ 04.30ಕ್ಕೆ – ಹಾಸನಕ್ಕೆ ನಿರ್ಗಮನ (73 ಕಿ.ಮೀ)

ಒಟ್ಟು ಪ್ರಯಾಣ182 ಕಿ.ಮೀ.