ತಾಯಿ ಹಾಸನಾಂಬ ದೇವಿಯ ಭಕ್ತಸಮೂಹದ ಸುರಕ್ಷತಾ ನಿರ್ವಹಣೆಗೆ ಆಧುನಿಕ ತಂತ್ರಜ್ಞಾನ ಬಳಕೆ ಮತ್ತು ಮೂಲಭೂತ ವ್ಯವಸ್ಥೆಗಳು
1. 2025 ರ ಜಾತ್ರಾ ಮಹೋತ್ಸವಕ್ಕೆ ರಾಜ್ಯ ಮತ್ತು ಹೊರರಾಜ್ಯಗಳಿಂz 25 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ದರ್ಶನಕ್ಕೆ ಆಗಮಿಸುವ ನಿರೀಕ್ಷೆಯಿದ್ದು, ಅವರ ಸುರಕ್ಷತೆ ಹಾಗೂ ಸುಲಲಿತ ದರ್ಶನ ನಮ್ಮೆಲ್ಲರ ಅತ್ಯಮೂಲ್ಯ ಜವಾಬ್ಚಾರಿ.
2. ಹಿಂದಿನ ಜಾತ್ರಾ ಮಹೋತ್ಸವಗಳ ವೀಡಿಯೋಗಳನ್ನು ತಂತ್ರಜ್ಞರೊಳಗೊಂಡಂತೆ ವಿಶೇಷ ತಂಡದೊಂದಿಗೆ ವೀಕ್ಷಿಸಿ ವೈಜ್ಞಾನಿಕವಾಗಿ ಮತ್ತು ಪ್ರಯೋಗಿಕವಾಗಿ ಸುಧಾರಣೆಗೊಳಿಸಲು ಜಿಲ್ಲಾಡಳಿತ, ಹಾಸನ ಪ್ರಥಮ ಆದ್ಯತೆ ವಹಿಸಿದೆ.
3. ಜನ ದಟ್ಟಣೆ ಮತ್ತು ವಾಹನ ದಟ್ಟಣೆ ಸುಧಾರಿಸಲು ಟ್ರಾಪಿಕ್ ರೂಟ್ ಮ್ಯಾಪ್ ಮತ್ತು ಹೆಚ್ಚುವರಿ ಪಾರ್ಕಿಂಗ್ ಸ್ಥಳಗಳನ್ನು ಪೂರ್ವನಿಗದಿಪಡಿಸಿದೆ. ಅನಗತ್ಯ ಸಂಚಾರ ತಪ್ಪಿಸಲು ಪ್ರತ್ಯೇಕ ವೆಬ್ ಸೈಟ್ ಸೃಜಿಸಿ ಎಲ್ಲಾ ಬಗೆಯ ನಿಯಮಗಳೊಂದಿಗೆ ಪಾರ್ಕಿಂಗ್ ಸ್ಥಳಗಳು ಮತ್ತು ಭಕ್ತರು ದರ್ಶನದ ದ್ವಾರಗಳಿಗೆ ಪ್ರವೇಶ ಪಡೆಯಲು ಬರುವ ಜೊತೆಗೆ ಸರಳವಾಗಿ ಸಂಚರಿಸಲಿಚ್ಚಿಸುವ ಪೂರಕ ಸ್ಥಳಗಳ ಜಿ ಪಿ ಎಸ್ ಗೂಗಲ್ ರೂಟ್ ಮ್ಯಾಪ್ ಸೇರ್ಪಡಿಸಿದೆ.
4. ಅತ್ಯಾಧುನಿಕ ಕೃತಕ ಬುದ್ದಿಮತ್ತೆ ತಂತ್ರಜ್ಞಾನಕ್ಕೆ ಪೂರಕವಾಗಿರುವ ಕ್ಯಾಮೆರಾಗಳನ್ನು ಅಳವಡಿಸುವ ಕ್ರಮವಾಗಿ ಎಲ್ಲಾ ಕಡೆ ಭಕ್ತರು ಇಂತಹ ಕ್ಯಾಮೆರಾಗಳ ಕಣ್ಗಾವಲಿನಲ್ಲಿರಲು ಮತ್ತು ಇಂಚಿಂಚು ವ್ಯತ್ಯಯಗಳನ್ನು ಕಂಟ್ರೋಲ್ ರೂಂ ನಲ್ಲಿ ವೀಕ್ಷಿಸಿ ತಕ್ಷಣ ಕ್ರಮಕ್ಕೆ ಸಂಬಂಧಿತರು ದಾವಿಸಲು ಆಧುನಿಕ ಮಾನಿಟರಿಂಗ್ ವ್ಯವಸ್ಥೆ ಅಳವಡಿಸಿದೆ.
5. ಯಾವುದೇ ಬಗೆಯ ನೂಕುನುಗ್ಗಲು,ಕಾಲುತುಣಿತ ಸಂಭವಿಸದAತೆ ಜನದಟ್ಟಣೆಗೊಳ್ಳುತ್ತಿರುವ ಎಲ್ಲಾ ಸೂಕ್ಷ್ಮ ಪ್ರದೇಶಗಳನ್ನು ಕ್ಯಾಮೇರಾ ಮೂಲಕ ಸೆರೆಹಿಡಿದಂತೆ ಎಸ್ ಡಿ ಆರ್ ಎಫ್ ತಂಡ, ಪೊಲೀಸ್ ಮತ್ತು ಕಾರ್ಯನಿಯೋಜಿತ ಅಧಿಕಾರಿಗಳ ತಂಡ ಮುಂಜಾಗೃತಾ ಕ್ರಮವಹಿಸುವ ವ್ಯವಸ್ಥೆ ರೂಪಿಸಿದೆ,ಪರಸ್ಪರ ತ್ವರಿತ ಸಂಪರ್ಕ ಮತ್ತು ಮಾಹಿತಿ ರವಾನೆಗಾಗಿ ವಾಕಿಟಾಕಿಗಳ ಸಂಖ್ಯೆಯನ್ನು ವಿಸ್ತರಿಸಿದೆ.
6. ನೂಕುನುಗ್ಗಲು ತಡೆಯಲು ಹೆಚ್ಚುವರಿ ಬ್ಯಾರಿಕೇಡಿಂಗ್ ಅವಶ್ಯಕತೆ ಮತ್ತು ಜನರ ವಿಶ್ರಾಂತಿಗೆ ಪೂರಕವಾದ ಹೆಚ್ಚುವರಿ ಜರ್ಮನ್ ಟೆಂಟ್ ವ್ಯವಸ್ಥೆಯ ಅವಶ್ಯಕತೆಯನ್ನು ಪೂರ್ವ ಅಧ್ಯಯನ ಮಾಡಿ,ಎಲ್ಲಾ ತುರ್ತು ಮತ್ತು ಪೂರಕ ಅಗತ್ಯ ಸೇವೆಗಳನ್ನು ವಿಸ್ತರಿಸಿದೆ.
7. ಶೌಚಾಲಯ ಅಗತ್ಯತೆಗೆ ಆಧ್ಯತೆ ನೀಡಿ 200 ಕ್ಕೂ ಹೆಚ್ಚು ಶೌಚಾಲಯ ಮತ್ತು ಅಲ್ಲಿನ ನೀರಿನ ಬಳಕೆಗೆ ವ್ಯವಸ್ಥೆ ಸಿದ್ದಗೊಳಿಸಿದೆ, ಹಾಗೆಯೇ, ಕುಡಿಯಲು ಮಜ್ಜಿಗೆ, ನೀರು ಮತ್ತು ಪಾನಕ ವ್ಯವಸ್ಥೆಯನ್ನು ಹೆಚ್ಚಿಸಿದೆ.
8. ವಿದ್ಯುತ್ ಅವಗಡಗಳು, ಬೆಂಕಿ ಅವಗಡಗಳು ಸಂಭವಿಸದAತೆ ಜಾತ್ರಾ ಮಹೋತ್ಸವದ ಎಲ್ಲಾ ಸ್ಥಳಗಳಲ್ಲಿ ಜಾಗರೂಕತೆ ವಹಿಸಿರುವ ಜೊತೆಗೆ ಅಗ್ನಿಶಾಮಕ ವ್ಯವಸ್ಥೆಯನ್ನು ಪೂರ್ವಸಿದ್ದತೆಗಾಗಿ ಹೆಚ್ಚಿಸಿಕೊಂಡಿದೆ. ಹಾಗೆಯೇ.,ವೈದ್ಯಕೀಯ ತುರ್ತು ಸೇವೆಗಾಗಿ ಆಂಬುಲೆನ್ಸ್ಗಳು ಮತ್ತು ವೈದ್ಯಕೀಯ ಸೇವಾ ಘಟಕಗಳ ಸಂಖ್ಯೆ,ಔಷಧಿಗಳ ಲಭ್ಯತೆ ಮತ್ತು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂಧಿಗಳ ಸಂಖ್ಯೆ ಮತ್ತು ಸುಧಾರಣೆ ವ್ಯವಸ್ಥೆಯನ್ನು ಉನ್ನತಿಗೊಳಿಸಿದೆ.
9. ಟಿಕೇಟ್ ಬಳಕೆಯಲ್ಲಿ ಯಾವುದೇ ದರ್ಶನ ದ್ವಾರಗಳಿಂದ ಭಕ್ತರ ಒಳಪ್ರವೇಶವನ್ನು ನಿಶ್ಚಿತವಾಗಿ ನಿಯಂತ್ರಿಸಲು ಟಿಕೇಟ್ ಬಳಕೆ ಮತ್ತು ಪ್ರವೇಶವನ್ನು ಡಿಜಿಟಲೀಕರಣಗೊಳಿಸಿದೆ.
10. ಸೂಕ್ತ ದರ್ಶನದ ಸರತಿ ಸಾಲನ್ನು ಭಕ್ತರು ನಿರ್ಧರಿಸಿ ಅನಗತ್ಯ ಸಾಲಿನ ಬಳಿ ಭಕ್ತರು ಬಂದು ಸೇರದಂತೆ ಸುಧಾರಣೆಯಾಗಿ ಎದ್ದು ಕಾಣುವಂತೆ ಟಿಕೇಟ್ ಕೌಂಟರ್ ಮತ್ತು ಹೆಚ್ಚುವರಿ ಕೌಂಟರ್ ಸಂಖ್ಯೆಗಳನ್ನು ತೆರೆಯಲು ಕ್ರಮವಹಿಸಿದೆ.
11. ಎಂಬತ್ತು ವರ್ಷ ಮೇಲ್ಪಟ್ಟ ಮತ್ತು ವಿಶೇಷ ಚೇತನ ಭಕ್ತರಿಗೆ ಸರಳ, ವಿಶೇಷ ಮತ್ತು ಉಚಿತ ದರ್ಶನಕ್ಕೆ ಪ್ರೋತ್ಸಾಹವಿದೆ. ವೆಬ್ಸೈಟ್ ನಲ್ಲಿ ಪ್ರತ್ಯೇಕವಾಗಿ ಹೆಚ್ಚಿನ ಮಾಹಿತಿ ನೀಡಿದೆ.
12. ವಾಟ್ಸಾಪ್ ಚಾಟ್ಬಾಟ್, ಮೊಬೈಲ್ ಆಪ್, ವೆಬ್ ಸೈಟ್, ರೇಡಿಯೋ, ಮಾಧ್ಯಮ,ಸಾಮಾಜಿಕ ಜಾಲತಾಣದಲ್ಲಿ ಅರಿವು ಮೂಡಿಸಲು ಹೆಚ್ಚು ಹೆಚ್ಚು ಪ್ರಯತ್ಮಿಸುತ್ತಿರುವಂತೆಯೇ ಈ ಪ್ರಯತ್ನ.