• ಸಾಮಾಜಿಕ ಮಾಧ್ಯಮ ಲಿಂಕ್ಸ್
  • Site Map
  • Accessibility Links
  • ಕನ್ನಡ
ಮುಚ್ಚಿ

ಒನ್‌ಡೇ ಟೂರ್‌ ಪ್ಯಾಕೇಜ್

Slide1

ಆರಂಭದ ಹಂತ: ನಗರ ಬಸ್ ನಿಲ್ದಾಣ ಹಾಸನ
ಅಂತ್ಯ ಹಂತ: ನಗರ ಬಸ್ ನಿಲ್ದಾಣ ಹಾಸನ
ಪ್ರವಾಸದ ವಿಷಯ: ಧಾರ್ಮಿಕ ಅನುಭವ/ಹಾಸನಾಂಬಾ ಸಪ್ತಮಾತೃಕೆ ದರ್ಶನ
ಕೆಎಸ್‌ಆರ್‌ಟಿಸಿ ದರ:

ವಯಸ್ಕರಿಗೆ: ರೂ. 400+ ರೂ 1000 (ದರ್ಶನ ಪಾಸ್)=1400

ಮಕ್ಕಳು (12 ವರ್ಷಕ್ಕಿಂತ ಕಡಿಮೆ ವಯಸ್ಸಿನವರು): ರೂ. 300+ ರೂ 1000 (ದರ್ಶನ ಪಾಸ್)=1300

ವಿವರವಾದ ವೇಳಾಪಟ್ಟಿ

    ಹಾಸನಾಂಬ ದೇವಸ್ಥಾನ, ಹಾಸನ

  • ಬೆಳಿಗ್ಗೆ 08.00ಕ್ಕೆ – ನಗರ ಬಸ್ ನಿಲ್ದಾಣದಿಂದ ನಿರ್ಗಮನ ( 2 ಕಿ.ಮೀ)
  • ಬೆಳಿಗ್ಗೆ 08.30ಕ್ಕೆ – ಹಾಸನಾಂಬ ದೇವಸ್ಥಾನಕ್ಕೆ ಆಗಮನ

(ದರ್ಶನ ಪಾಸ್: ರೂ 1000.00 ಒಳಗೊಂಡಿದೆ)

      ಪ್ರವಾಸಿ ತಾಣದ ಮಾಹಿತಿ

  • ಇದು ಒಂದು ಪುರಾತನ ಕಾಲದ ದೇವಾಲಯವಾಗಿದೆ.
  • ಈ ದೇವಾಲಯವು ವರ್ಷಕ್ಕೆ ಒಂದು ಬಾರಿ ದೀಪಾವಳಿ ಸಮಯದಲ್ಲಿ ತೆರೆಯಲ್ಪಡುತ್ತದೆ.
  • ಹಾಸನಾಂಬ ದೇವಾಲಯದಲ್ಲಿ ಮಹೇಶ್ವರಿ, ಕೌಮಾರಿ ಮತ್ತು ವೈಷ್ಣವಿರೂಪದಲ್ಲಿ ದೇವಿ ನೆಲೆಸಿರುತ್ತಾರೆ

     ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 2.30 ಗಂಟೆಗಳು

ದೇವಿಗೆರೆ ಕಲ್ಯಾಣಿ, ಹಾಸನ

  •  ಬೆಳಿಗ್ಗೆ 11.00ಕ್ಕೆ – ದೇವಿಗೆರೆ ಕಲ್ಯಾಣಿಗೆ ನಿರ್ಗಮನ (500 ಮೀಟರ್)
  • ಬೆಳಿಗ್ಗೆ 11.15ಕ್ಕೆ – ದೇವಿಗೆರೆ ಕಲ್ಯಾಣಿಗೆ ಆಗಮನ

     ಪ್ರವಾಸಿ ತಾಣದ ಮಾಹಿತಿ:

  • ದೇವಿಗೆರೆ ಕಲ್ಯಾಣಿಯಲ್ಲಿ ಸಪ್ತಮಾತೃಕೆಯರಲ್ಲಿ ವಾರಾಹಿ ದೇವಿ, ಇಂದ್ರಾಣಿ ದೇವಿ ಮತ್ತು ಚಾಮುಂಡಿ ದೇವಿಯರು

ನೆಲೆಸಿರುತ್ತಾರೆ

ಮಧ್ಯಾಹ್ನ 12.00 ರಿಂದ 1.00 ರವರೆಗೆ ಹಾಸನದ ಖಾಸಗಿ ಹೋಟೆಲ್‌ನಲ್ಲಿ ಊಟ [ಪ್ರಯಾಣಿಕರು ಸ್ವತಃ ಶುಲ್ಕ ಪಾವತಿಸಬೇಕಾಗುತ್ತದೆ]

ಕೆಂಚಮ್ಮನ ಹೊಸಕೋಟೆ:

oಮಧ್ಯಾಹ್ನ 01.30ಕ್ಕೆ – ಕೆಂಚಮ್ಮನ ಹೊಸಕೋಟೆಗೆ ನಿರ್ಗಮನ (40 ಕಿ.ಮೀ)

oಮಧ್ಯಾಹ್ನ 03.00ಕ್ಕೆ – ಕೆಂಚಮ್ಮನ ಹೊಸಕೋಟೆಗೆ ಆಗಮನ

    ಪ್ರವಾಸಿ ತಾಣದ ಮಾಹಿತಿ:

  • ಸಪ್ತಮಾತೃಕೆಯರಲ್ಲಿ ಒಬ್ಬರಾದ ಬ್ರಾಹ್ಮಿ ದೇವಿಯನ್ನು ಕೆಂಚಮ್ಮನ ಹೊಸಕೋಟೆಯಲ್ಲಿ ಕೆಂಚಾಂಬಾ ದೇವಿ ಎಂದು

ಪೂಜಿಸಲಾಗುತ್ತಿದೆ.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 30 ನಿಮಿಷಗಳು

ಮಧ್ಯಾಹ್ನ 03.30ಕ್ಕೆ – ಹಾಸನದ ನಗರ ಬಸ್ ನಿಲ್ದಾಣಕ್ಕೆ ನಿರ್ಗಮನ (40 ಕಿ.ಮೀ)

ಒಟ್ಟು ಪ್ರಯಾಣ: 85 ಕಿ.ಮೀ

Slide 2

ಆರಂಭದ ಹಂತ: ಬೆಂಗಳೂರು
ಅಂತ್ಯ ಹಂತ: ಬೆಂಗಳೂರು
ಪ್ರವಾಸದ ವಿಷಯ: ಧಾರ್ಮಿಕ ಅನುಭವ/ಹಾಸನಾಂಬಾ ಸಪ್ತಮಾತೃಕೆ ದರ್ಶನ
ಕೆಎಸ್‌ಆರ್‌ಟಿಸಿ ದರ:

ವಯಸ್ಕರಿಗೆ: ರೂ.1000+ರೂ.1000(ದರ್ಶನ ಪಾಸ್)=2000

ಮಕ್ಕಳು (12 ವರ್ಷಕ್ಕಿಂತ ಕಡಿಮೆ ವಯಸ್ಸಿನವರು): ರೂ.900+ರೂ.1000(ದರ್ಶನ ಪಾಸ್)=1900

ವಿವರವಾದ ವೇಳಾಪಟ್ಟಿ

ಹಾಸನಾಂಬ ದೇವಸ್ಥಾನ, ಹಾಸನ

oಬೆಳಿಗ್ಗೆ 06.00ಕ್ಕೆ – ಬೆಂಗಳೂರು ನಿಂದ ನಿರ್ಗಮನ (180 ಕಿ.ಮೀ)

oಬೆಳಿಗ್ಗೆ 10.00ಕ್ಕೆ – ಹಾಸನದ ಶ್ರೀ ಹಾಸನಾಂಬ ದೇವಸ್ಥಾನಕ್ಕೆ ಆಗಮನ

ಬೆಳಿಗ್ಗೆ 09.00 – ಬೆಳಿಗ್ಗೆ 9.30ರ ವರೆಗೆ ಖಾಸಗಿ ಹೋಟೆಲ್‌ನಲ್ಲಿ ಉಪಾಹಾರ [ಪ್ರಯಾಣಿಕರು ಸ್ವತಃ ಶುಲ್ಕ ಪಾವತಿಸಬೇಕಾಗುತ್ತದೆ]

   (ದರ್ಶನ ಪಾಸ್: ರೂ 1000.00 ಒಳಗೊಂಡಿದೆ)

ಪ್ರವಾಸಿ ತಾಣದ ಮಾಹಿತಿ:

  • ಇದು ಒಂದು ಪುರಾತನ ಕಾಲದ ದೇವಾಲಯವಾಗಿದೆ.
  • ಈ ದೇವಾಲಯವು ವರ್ಷಕ್ಕೆ ಒಂದು ಬಾರಿ ದೀಪಾವಳಿ ಸಮಯದಲ್ಲಿ ತೆರೆಯಲ್ಪಡುತ್ತದೆ.
  • ಹಾಸನಾಂಬ ದೇವಾಲಯದಲ್ಲಿ ಮಹೇಶ್ವರಿ, ಕೌಮಾರಿ ಮತ್ತು ವೈಷ್ಣವಿರೂಪದಲ್ಲಿ ದೇವಿ ನೆಲೆಸಿರುತ್ತಾರೆ.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 2.30 ಗಂಟೆಗಳು

ದೇವಿಗೆರೆ ಕಲ್ಯಾಣಿ:

oಮಧ್ಯಾಹ್ನ 12.30ಕ್ಕೆ – ದೇವಿಗೆರೆ ಕಲ್ಯಾಣಿಗೆ ನಿರ್ಗಮನ (500 ಮೀಟರ್)

oಮಧ್ಯಾಹ್ನ 12.45ಕ್ಕೆ – ದೇವಿಗೆರೆ ಕಲ್ಯಾಣಿಗೆ ಆಗಮನ

    ಪ್ರವಾಸಿ ತಾಣದ ಮಾಹಿತಿ:

  • ದೇವಿಗೆರೆ ಕಲ್ಯಾಣಿಯಲ್ಲಿ ಸಪ್ತಮಾತೃಕೆಯರಲ್ಲಿ ವಾರಾಹಿ ದೇವಿ, ಇಂದ್ರಾಣಿ ದೇವಿ ಮತ್ತು ಚಾಮುಂಡಿ ದೇವಿಯರು ನೆಲೆಸಿರುತ್ತಾರೆ.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 45 ನಿಮಿಷಗಳು

ಮಧ್ಯಾಹ್ನ 1.30 ರಿಂದ 2.30 ರವರೆಗೆ ಹಾಸನದ ಖಾಸಗಿ ಹೋಟೆಲ್‌ನಲ್ಲಿ ಊಟ.

[ಪ್ರಯಾಣಿಕರು ಸ್ವತಃ ಶುಲ್ಕ ಪಾವತಿಸಬೇಕಾಗುತ್ತದೆ]

ಕೆಂಚಮ್ಮನ ಹೊಸಕೋಟೆ:

oಮಧ್ಯಾಹ್ನ 02.45ಕ್ಕೆ – ಕೆಂಚಮ್ಮನ ಹೊಸಕೋಟೆಗೆ ನಿರ್ಗಮನ (40 ಕಿ.ಮೀ)

oಸಂಜೆ 04.00ಕ್ಕೆ– ಕೆಂಚಮ್ಮನ ಹೊಸಕೋಟೆಗೆ ಆಗಮನ

     ಪ್ರವಾಸಿ ತಾಣದ ಮಾಹಿತಿ:

  • ಸಪ್ತಮಾತೃಕೆಯರಲ್ಲಿ ಒಬ್ಬರಾದ ಬ್ರಾಹ್ಮಿ ದೇವಿಯನ್ನು ಕೆಂಚಮ್ಮನ ಹೊಸಕೋಟೆಯಲ್ಲಿ ಕೆಂಚಾAಬಾ ದೇವಿ ಎಂದು ಪೂಜಿಸಲಾಗುತ್ತಿದೆ.

      ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 30 ನಿಮಿಷಗಳು

ಮಧ್ಯಾಹ್ನ 04.30 – ಬೆಂಗಳೂರಿಗೆ ನಿರ್ಗಮನ (220 ಕಿ.ಮೀ)

ಒಟ್ಟು ಪ್ರಯಾಣ: 440 ಕಿ.ಮೀ

Slide3

ಆರಂಭದ ಹಂತ: ಮೈಸೂರು
ಅಂತ್ಯ ಹಂತ: ಮೈಸೂರು
ಪ್ರವಾಸದ ವಿಷಯ: ಧಾರ್ಮಿಕ ಅನುಭವ/ಹಾಸನಾಂಬಾ ಸಪ್ತಮಾತೃಕೆ ದರ್ಶನ
ಕೆಎಸ್‌ಆರ್‌ಟಿಸಿ ದರ:
ಯಸ್ಕರಿಗೆ : ರೂ.600+ ರೂ.1000 (ದರ್ಶನ ಪಾಸ್) =1600
ಮಕ್ಕಳು (12 ವರ್ಷದೊಳಗೆ):ರೂ.500+ರೂ.1000(ದರ್ಶನ ಪಾಸ್) =1500

ವಿವರವಾದ ವೇಳಾಪಟ್ಟಿ:

ಹಾಸನಾಂಬ ದೇವಸ್ಥಾನ, ಹಾಸನ

  • ಬೆಳಿಗ್ಗೆ 06.00ಕ್ಕೆ – ಮೈಸೂರಿನಿಂದ ನಿರ್ಗಮನ (110 ಕಿ.ಮೀ)
  • ಬೆಳಿಗ್ಗೆ 09.00ಕ್ಕೆ – ಹಾಸನದ ಶ್ರೀ ಹಾಸನಾಂಬ ದೇವಸ್ಥಾನಕ್ಕೆ ಆಗಮನ

ಬೆಳಿಗ್ಗೆ 7.30 – 8.30 ಖಾಸಗಿ ಹೋಟೆಲ್‌ನಲ್ಲಿ ಉಪಾಹಾರ [ಪ್ರಯಾಣಿಕರು ಸ್ವತಃ ಶುಲ್ಕ ಪಾವತಿಸಬೇಕಾಗುತ್ತದೆ]

(ದರ್ಶನ ಪಾಸ್: ರೂ.1000.00 ಒಳಗೊಂಡಿದೆ)

ಪ್ರವಾಸಿ ತಾಣದ ಮಾಹಿತಿ:

•  ಇದು ಒಂದು ಪುರಾತನ ಕಾಲದ ದೇವಾಲಯವಾಗಿದೆ.

•  ಈ ದೇವಾಲಯವು ವರ್ಷಕ್ಕೆ ಒಂದು ಬಾರಿ ದೀಪಾವಳಿ ಸಮಯದಲ್ಲಿ ತೆರೆಯಲ್ಪಡುತ್ತದೆ.

•  ಹಾಸನಾಂಬ ದೇವಾಲಯದಲ್ಲಿ ಮಹೇಶ್ವರಿ, ಕೌಮಾರಿ ಮತ್ತು ವೈಷ್ಣವಿರೂಪದಲ್ಲಿ ದೇವಿ ನೆಲೆಸಿರುತ್ತಾರೆ.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 2.30 ಗಂಟೆಗಳು

ದೇವಿಗೆರೆ ಕಲ್ಯಾಣಿ:

oಬೆಳಿಗ್ಗೆ 11.30ಕ್ಕೆ – ದೇವಿಗೆರೆ ಕಲ್ಯಾಣಿಗೆ  ನಿರ್ಗಮನ (500 ಮೀಟರ್)

oಬೆಳಿಗ್ಗೆ 11.45ಕ್ಕೆ – ದೇವಿಗೆರೆ ಕಲ್ಯಾಣಿಗೆ ಆಗಮನ

    ಪ್ರವಾಸಿ ತಾಣದ ಮಾಹಿತಿ:

  • ದೇವಿಗೆರೆ ಕಲ್ಯಾಣಿಯಲ್ಲಿ ಸಪ್ತಮಾತೃಕೆಯರಲ್ಲಿ ವಾರಾಹಿ ದೇವಿ, ಇಂದ್ರಾಣಿ ದೇವಿ ಮತ್ತು ಚಾಮುಂಡಿ ದೇವಿಯರು ನೆಲೆಸಿರುತ್ತಾರೆ

  ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 30 ನಿಮಿಷಗಳು

(ಮಧ್ಯಾಹ್ನ 12.15 ರಿಂದ 1.15 ರವರೆಗೆ ಹಾಸನದ ಖಾಸಗಿ ಹೋಟೆಲ್‌ನಲ್ಲಿ ಊಟ)[ಪ್ರಯಾಣಿಕರು ಸ್ವತಃ ಶುಲ್ಕ ಪಾವತಿಸಬೇಕಾಗುತ್ತದೆ]

ಕೆಂಚಮ್ಮನ ಹೊಸಕೋಟೆ:

  • ಮಧ್ಯಾಹ್ನ 01.30ಕ್ಕೆ – ಕೆಂಚಮ್ಮನ ಹೊಸಕೋಟೆಗೆ ನಿರ್ಗಮನ(40 ಕಿ.ಮೀ)
  • ಮಧ್ಯಾಹ್ನ 02.30ಕ್ಕೆ – ಕೆಂಚಮ್ಮನ ಹೊಸಕೋಟೆಗೆ ಆಗಮನ

ಪ್ರವಾಸಿ ತಾಣದ ಮಾಹಿತಿ:

  • ಸಪ್ತಮಾತೃಕೆಯರಲ್ಲಿ ಒಬ್ಬರಾದ ಬ್ರಾಹ್ಮಿ ದೇವಿಯನ್ನು ಕೆಂಚಮ್ಮನ ಹೊಸಕೋಟೆಯಲ್ಲಿ ಕೆಂಚಾಂಬಾ ದೇವಿ ಎಂದು ಪೂಜಿಸಲಾಗುತ್ತಿದೆ.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 30 ನಿಮಿಷಗಳು

ನಾಗೇಶ್ವರ ಮತ್ತು ಚನ್ನಕೇಶವ ದೇವಾಲಯ, ಮೊಸಳೆ:

oಮಧ್ಯಾಹ್ನ 03.00ಕ್ಕೆ : ಮೊಸಳೆಯ ಶ್ರೀ ನಾಗೇಶ್ವರ ಮತ್ತು ಶ್ರೀ ಚನ್ನಕೇಶವ ದೇವಾಲಯಕ್ಕೆ ನಿರ್ಗಮನ (54 ಕಿ.ಮೀ)

oಮಧ್ಯಾಹ್ನ 04.30ಕ್ಕೆ – ಮೊಸಳೆಯ ಶ್ರೀ ನಾಗೇಶ್ವರ ಮತ್ತು ಶ್ರೀ ಚನ್ನಕೇಶವ ಸ್ವಾಮಿ ದೇವಾಲಯಕ್ಕೆ ಆಗಮನ

 ಪ್ರವಾಸಿ ತಾಣದ ಮಾಹಿತಿ:

  • ಮೊಸಳೆ ಗ್ರಾಮದಲ್ಲಿರುವ ನಾಗೇಶ್ವರ ಮತ್ತು ಚನ್ನಕೇಶವ ಸ್ವಾಮಿ ದೇವಾಲಯ ಸಂಕೀರ್ಣವು ಒಂದೇ ರೀತಿಯ ಅವಳಿ ದೇವಾಲಯಗಳ

ಜೋಡಿಯಾಗಿದೆ.

  • ನಾಗೇಶ್ವರ ದೇವಾಲಯವು ಶಿವನಿಗೆ ಅರ್ಪಿತವಾಗಿದ್ದರೆ, ಚನ್ನಕೇಶವ ದೇವಾಲಯವು ವಿಷ್ಣುವಿಗೆ ಅರ್ಪಿತವಾಗಿದೆ.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 30 ನಿಮಿಷಗಳು

  ಸಂಜೆ 05.00ಕ್ಕೆ – ಮೈಸೂರಿಗೆ ನಿರ್ಗಮನ (98 ಕಿ.ಮೀ )

ಒಟ್ಟು ಪ್ರಯಾಣ: 302 ಕಿ.ಮೀ.

Slide4

ಆರಂಭದ ಹಂತ:
ನಗರ ಬಸ್ ನಿಲ್ದಾಣ, ಹಾಸನ
ಅಂತ್ಯ ಹಂತ: ನಗರ ಬಸ್ ನಿಲ್ದಾಣ, ಹಾಸನ
ಪ್ರವಾಸದ ವಿಷಯ: ಪ್ರಕೃತಿ / ಪರಂಪರೆಯ ಅನುಭವ
ಪ್ರವಾಸಿಗರಿಗೆ ಕಲ್ಪಿಸಿರುವ ಸೌಲಭ್ಯಗಳು
ಪ್ರವಾಸಿ ಮಾರ್ಗದರ್ಶಿ,  ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ
ಪ್ರವಾಸಿ ಮಿತ್ರರೊಂದಿಗೆ ಆರಾಮದಾಯಕ ಪ್ರಯಾಣ
ಕೆಎಸ್‌ಆರ್‌ಟಿಸಿ ದರ:
ಯಸ್ಕರಿಗೆ : ರೂ.500.00
ಮಕ್ಕಳು (12 ವರ್ಷದೊಳಗೆ) : ರೂ.400.00

ವಿವರವಾದ ವೇಳಾಪಟ್ಟಿ

ವಾಟೆಹೊಳೆ ಡ್ಯಾಮ್

  • ಬೆಳಿಗ್ಗೆ 07.30ಕ್ಕೆ – ವಾಟೆಹೊಳೆ ಡ್ಯಾಮ್‌ಗೆ ನಿರ್ಗಮನ (34 ಕಿ.ಮೀ)
  • ಬೆಳಿಗ್ಗೆ 08.45ಕ್ಕೆ – ವಾಟೆಹೊಳೆ ಡ್ಯಾಮ್‌ಗೆ ಆಗಮನ

  ಪ್ರವಾಸಿ ತಾಣದ ಮಾಹಿತಿ:

  • ವಾಟೆಹೊಳೆ ಡ್ಯಾಮ್ ಅನ್ನು 1984 ರಲ್ಲಿ ನಿರ್ಮಿಸಲಾಗಿದೆ.
  • ಜಲಾನಯನ ಪ್ರದೇಶ – 11 ಹೆಕ್ಟೇರ್

   ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 30 ನಿಮಿಷಗಳು

ಶ್ರೀ ಜನಾರ್ದನಸ್ವಾಮಿ ದೇವಸ್ಥಾನ, ಪಾಳ್ಯ (ಆಲೂರು)

  • ಬೆಳಿಗ್ಗೆ 09.15ಕ್ಕೆ – ಪಾಳ್ಯ ಜನಾರ್ದನಸ್ವಾಮಿ ದೇವಸ್ಥಾನಕ್ಕೆ ನಿರ್ಗಮನ (21 ಕಿ.ಮೀ)
  • ಬೆಳಿಗ್ಗೆ 09.45ಕ್ಕೆ – ಪಾಳ್ಯ ಜನಾರ್ದನಸ್ವಾಮಿ ದೇವಸ್ಥಾನಕ್ಕೆ ದೇವಸ್ಥಾನಕ್ಕೆ ಆಗಮನ

   ಪ್ರವಾಸಿ ತಾಣದ ಮಾಹಿತಿ:

  • ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಪಾಳ್ಯ ಗ್ರಾಮದಲ್ಲಿದೆ.
  • ಹೊಯ್ಸಳರ ಕಾಲದ ವಾಸ್ತುಶಿಲ್ಪ ಹೊಂದಿದೆ.
  • ವಿಷ್ಣುವಿಗೆ ಸಮರ್ಪಿತವಾದ ಜನಾರ್ದನಸ್ವಾಮಿ ರೂಪದ ದೇವಾಲಯ.

       ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 30 ನಿಮಿಷಗಳು

ಮರಗಡಿ ಜಲಪಾತ:

  • ಬೆಳಿಗ್ಗೆ 10.15ಕ್ಕೆ – ಮರಗಡಿ ಜಲಪಾತಕ್ಕೆ ನಿರ್ಗಮನ (ಅಬ್ಬಿ ಜಲಪಾತ) (41 ಕಿ.ಮೀ)
  • ಮಧ್ಯಾಹ್ನ 12.15ಕ್ಕೆ – ಮರಗಡಿ ಜಲಪಾತಕ್ಕೆ ಆಗಮನ (ಅಬ್ಬಿ ಜಲಪಾತ)

          ಪ್ರವಾಸಿ ತಾಣದ ಮಾಹಿತಿ:

  • ಮರಗಡಿ ಜಲಪಾತವು ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿರುವ ಶಾಂತವಾದ ಜಲಪಾತವಾಗಿದ್ದು, ಕಾಫಿ ತೋಟ ಮತ್ತು ದಟ್ಟವಾದ ಹಸಿರಿನಿಂದ ಆವೃತವಾಗಿದೆ.
  • ವಿಶೇಷವಾಗಿ ಮಳೆಗಾಲದಲ್ಲಿ ವೀಕ್ಷಣೆಗೆ ಸೂಕ್ತವಾಗಿದೆ.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 01:00 ಗಂಟೆ

ಮಧ್ಯಾಹ್ನ 01:15- ಮಧ್ಯಾಹ್ನ 02:00ರ ವರೆಗೆ ಮರಗಡಿ ಜಲಪಾತ ಬಳಿ ಖಾಸಗಿ ಹೋಟೆಲ್‌ನಲ್ಲಿ ಊಟದ ವ್ಯವಸ್ಥೆ    [ಪ್ರಯಾಣಿಕರು ಊಟಕ್ಕೆ ಸ್ವತಃ ಶುಲ್ಕ ಪಾವತಿಸಬೇಕಾಗುತ್ತದೆ]

ಬೆಟ್ಟದ ಭೈರವೇಶ್ವರ ದೇವಸ್ಥಾನ:

  • ಮಧ್ಯಾಹ್ನ 02.00ಕ್ಕೆ – ಬೆಟ್ಟದ ಭೈರವೇಶ್ವರ ದೇವಸ್ಥಾನಕ್ಕೆ ನಿರ್ಗಮನ (13 ಕಿ.ಮೀ)
  • ಮಧ್ಯಾಹ್ನ 02.30ಕ್ಕೆ – ಬೆಟ್ಟದ ಭೈರವೇಶ್ವರ ದೇವಸ್ಥಾನಕ್ಕೆ ಆಗಮನ

         ಪ್ರವಾಸಿ ತಾಣದ ಮಾಹಿತಿ:

  • ಪ್ರಾಚೀನ ಕಾಲದ ಬೆಟ್ಟದ ಭೈರವೇಶ್ವರ ದೇವಸ್ಥಾನವು ಭಗವಾನ್ ಭೈರವನಿಗೆ ಸಮರ್ಪಿತವಾಗಿದೆ. ಇದು ಸಕಲೇಶಪುರದ ರಮಣೀಯ ಬೆಟ್ಟಗಳ ನಡುವೆ ಇರುವ ಶಿವನ ದೇವಾಲಯವಾಗಿದೆ.
  • ಇದು ಹಚ್ಚ ಹಸಿರಿನ ಕಾಡುಗಳಿಂದ ಆವೃತವಾಗಿದ್ದು, ಪಶ್ಚಿಮ ಘಟ್ಟಗಳ ವಿಹಂಗಮ ನೋಟಗಳನ್ನು ನೀಡುವ ಈ ದೇವಾಲಯವು ಜನಪ್ರಿಯ ಧಾರ್ಮಿಕ ಕೇಂದ್ರವಾಗಿದೆ.
  • ಇದರ ಪ್ರಶಾಂತ ವಾತಾವರಣ ಮತ್ತು ಸಾಂಪ್ರದಾಯಿಕ ವಾಸ್ತುಶಿಲ್ಪವು ಧಾರ್ಮಿಕ ಭಕ್ತರು ಮತ್ತು ಪ್ರಕೃತಿ ಪ್ರಿಯರನ್ನು ಆಕರ್ಷಿಸುತ್ತದೆ.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 02.00 ಗಂಟೆ

ಸಂಜೆ 04.30ಕ್ಕೆ – ಹಾಸನಕ್ಕೆ ನಿರ್ಗಮನ (73 ಕಿ.ಮೀ)

ಒಟ್ಟು ಪ್ರಯಾಣ-182 ಕಿ.ಮೀ.

slide 5

ಆರಂಭದ ಹಂತ:
ನಗರ ಬಸ್ ನಿಲ್ದಾಣ, ಹಾಸನ
ಅಂತ್ಯ ಹಂತ: ನಗರ ಬಸ್ ನಿಲ್ದಾಣ, ಹಾಸನ
ಪ್ರವಾಸದ ವಿಷಯ: ಪ್ರಕೃತಿ / ಪರಂಪರೆಯ ಅನುಭವ
ಪ್ರವಾಸಿಗರಿಗೆ ಕಲ್ಪಿಸಿರುವ ಸೌಲಭ್ಯಗಳು
ಪ್ರವಾಸಿ ಮಾರ್ಗದರ್ಶಿ,  ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ
ಪ್ರವಾಸಿ ಮಿತ್ರರೊಂದಿಗೆ ಆರಾಮದಾಯಕ ಪ್ರಯಾಣ
ಕೆಎಸ್‌ಆರ್‌ಟಿಸಿ ದರ:

ವಯಸ್ಕರಿಗೆ : ರೂ.525.00

ಮಕ್ಕಳು (12 ವರ್ಷದೊಳಗೆ) : ರೂ.425.00

ವಿವರವಾದ ವೇಳಾಪಟ್ಟಿ

ಮಂಜರಾಬಾದ್ ಕೋಟೆ:

  • ಬೆಳಿಗ್ಗೆ 07.30ಕ್ಕೆ ಸಕಲೇಶಪುರದ ಮಂಜರಾಬಾದ್ ಕೋಟೆಗೆ ನಿರ್ಗಮನ (44 ಕಿ.ಮೀ)
  • ಬೆಳಿಗ್ಗೆ 09.30ಕ್ಕೆ ಸಕಲೇಶಪುರದ ಮಂಜರಾಬಾದ್ ಕೋಟೆಗೆ ಆಗಮನ

    ಪ್ರವಾಸಿ ತಾಣದ ಮಾಹಿತಿ:

  • ಕ್ರಿ.ಶ 1792 ರಲ್ಲಿ ಟಿಪ್ಪು ಸುಲ್ತಾನ್ ನಿರ್ಮಿಸಿದ ಪರಂಪರೆಯ ಕೋಟೆ.
  • ಈ ಕೋಟೆಯು ವಿಶಿಷ್ಟ 8-ಬಿಂದುಗಳ ನಕ್ಷತ್ರದ ಆಕಾರದಲ್ಲಿದೆ.
  • ಪಶ್ಚಿಮ ಘಟ್ಟಗಳ ವಿಹಂಗಮ ನೋಟದೊಂದಿಗೆ ಎತ್ತರದ ಸ್ಥಳದಲ್ಲಿದೆ.
  • ಛಾಯಾಗ್ರಹಣ ಮತ್ತು ಐತಿಹಾಸಿಕ ವಾಸ್ತುಶಿಲ್ಪವನ್ನು ಅರ್ಥಮಾಡಿಕೊಳ್ಳಲು ಉತ್ತಮ ಸ್ಥಳ.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 02 ಗಂಟೆ

ಮೂಕನಮನೆ ಜಲಪಾತ:

  • ಬೆಳಿಗ್ಗೆ 11.30ಕ್ಕೆ – ಮೂಕನಮನೆ ಜಲಪಾತಕ್ಕೆ ನಿರ್ಗಮನ (36 ಕಿ.ಮೀ)
  • ಮಧ್ಯಾಹ್ನ 01.00ಕ್ಕೆ – ಮೂಕನಮನೆ ಜಲಪಾತಕ್ಕೆ ಆಗಮನ

ಪ್ರವಾಸಿ ತಾಣದ ಮಾಹಿತಿ:

  • ದಟ್ಟವಾದ ಹಸಿರಿನಲ್ಲಿ ಅಡಗಿರುವ ಜಲಪಾತ
  • ಪ್ರಕೃತಿ ಪ್ರಿಯರಿಗೆ ಮತ್ತು ಚಾರಣ ಪ್ರಿಯರಿಗೆ ಯೋಗ್ಯವಾದ ತಾಣವಾಗಿದೆ.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 01 ಗಂಟೆ

ಮಧ್ಯಾಹ್ನ 02.00ಕ್ಕೆ – ಮಧ್ಯಾಹ್ನ 03.00ರವರೆಗೆ ಮೂಕನಮನೆ ಜಲಪಾತದ ಬಳಿ ಖಾಸಗಿ ಹೋಟೆಲ್‌ನಲ್ಲಿ ಊಟ.

(ಪ್ರಯಾಣಿಕರು ಊಟಕ್ಕೆ ಪ್ರತ್ಯೇಕ ಶುಲ್ಕ ಪಾವತಿಸಬೇಕಾಗುತ್ತದೆ)

ಬಿಸಿಲೆ ಘಾಟ್ ವೀಕ್ಷಣಾ ಕೇಂದ್ರ:

  • ಮಧ್ಯಾಹ್ನ 03.00ಕ್ಕೆ – ಬಿಸಿಲೆ ಘಾಟ್ ವೀಕ್ಷಣಾ ಕೇಂದ್ರಕ್ಕೆ ನಿರ್ಗಮನ (25 ಕಿ.ಮೀ)
  • ಸಂಜೆ 04.00ಕ್ಕೆ – ಬಿಸಿಲೆ ಘಾಟ್ ವೀಕ್ಷಣಾ ಕೇಂದ್ರಕ್ಕೆ ಆಗಮನ

     ಪ್ರವಾಸಿ ತಾಣದ ಮಾಹಿತಿ:

  • ಪುಷ್ಪಗಿರಿ, ಕುಮಾರ ಪರ್ವತ, ಪಾಟ್ಲ ಬೆಟ್ಟ, ದೊಡ್ಡಬೆಟ್ಟದ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
  • ಬಿಸ್ಲೆ ಘಾಟ್ ಮೀಸಲು ಅರಣ್ಯ ಸುತ್ತಮುತ್ತಲಿನ ಪ್ರದೇಶವು – ಜೀವವೈವಿಧ್ಯದಿಂದ ಸಮೃದ್ಧವಾಗಿವೆ.

    ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 01 ಗಂಟೆ

ಸಂಜೆ 05.00ಕ್ಕೆ – ಹಾಸನಕ್ಕೆ ನಿರ್ಗಮನ (87 ಕಿ.ಮೀ)

ಒಟ್ಟು ಪ್ರಯಾಣ-192 ಕಿ.ಮೀ

Slide6

ಆರಂಭದ ಹಂತ:
ನಗರ ಬಸ್ ನಿಲ್ದಾಣ, ಹಾಸನ
ಅಂತ್ಯ ಹಂತ: ನಗರ ಬಸ್ ನಿಲ್ದಾಣ, ಹಾಸನ
ಪ್ರವಾಸದ ವಿಷಯ: ಪ್ರಕೃತಿ / ಪರಂಪರೆಯ ಅನುಭವ
ಪ್ರವಾಸಿಗರಿಗೆ ಕಲ್ಪಿಸಿರುವ ಸೌಲಭ್ಯಗಳು
ಪ್ರವಾಸಿ ಮಾರ್ಗದರ್ಶಿ,  ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ
ಪ್ರವಾಸಿ ಮಿತ್ರರೊಂದಿಗೆ ಆರಾಮದಾಯಕ ಪ್ರಯಾಣ
ಕೆಎಸ್‌ಆರ್‌ಟಿಸಿ ದರ:
ವಯಸ್ಕರಿಗೆ : ರೂ.375.00
ಮಕ್ಕಳು (12 ವರ್ಷದೊಳಗೆ) : ರೂ.275.00

ವಿವರವಾದ ವೇಳಾಪಟ್ಟಿ

ಶ್ರೀ ಚನ್ನಕೇಶವ ದೇವಸ್ಥಾನ,ಬೇಲೂರು:

  • ಬೆಳಿಗ್ಗೆ 07.30ಕ್ಕೆ – ಬೇಲೂರು ಚನ್ನಕೇಶವ ದೇವಸ್ಥಾನಕ್ಕೆ ನಿರ್ಗಮನ (38 ಕಿ.ಮೀ)
  • ಬೆಳಿಗ್ಗೆ 09.15ಕ್ಕೆ – ಬೇಲೂರು ಚನ್ನಕೇಶವ ದೇವಸ್ಥಾನಕ್ಕೆ ಆಗಮನ

ಪ್ರವಾಸಿ ತಾಣದ ಮಾಹಿತಿ:

  • ಶ್ರೀ ಚನ್ನಕೇಶವ ದೇವಸ್ಥಾನ, ಬೇಲೂರು. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ.
  • ಬೇಲೂರು ಚೆನ್ನಕೇಶವ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ, ಇದು 12 ನೇ ಶತಮಾನದಲ್ಲಿ ಆಕರ್ಷಕ ಕುಸರಿ  ಕೆತ್ತನೆಯಿಂದ ನಿರ್ಮಿಸಲ್ಪಟ್ಟಿದೆ. ರಾಜ ವಿಷ್ಣುವರ್ಧನನು ಈ ದೇವಾಲಯವನ್ನು ನಿರ್ಮಿಸಿದನು ಎಂದು  ಉಲ್ಲೇಖವಿದೆ.
  • ಇದು ಸಂಕೀರ್ಣವಾದ ಸೋಪ್‌ಸ್ಟೋನ್ ಕೆತ್ತನೆಗಳು, ಆಕರ್ಷಕವಾದ ಮದನಿಕಾ ಸಂಸ್ಕೃತಿ ಮತ್ತು ರಾಮಾಯಣ ಮತ್ತು ಮಹಾಭಾರತದಂತಹ ಮಹಾಕಾವ್ಯಗಳನ್ನು ಚಿತ್ರಿಸಲಾಗಿದ್ದು, ಇದು ಕುಸರಿ  ಕಲಾತ್ಮಕವಾಗಿರುವುದರಿಂದ ಹೆಸರುವಾಸಿಯಾಗಿದೆ.

          ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 02 ಗಂಟೆಗಳು

ಯಗಚಿ ಜಲಸಾಹಸ ಕ್ರೀಡಾ ಕೇಂದ್ರ:

  • ಬೆಳಿಗ್ಗೆ 11.15ಕ್ಕೆ – ಯಗಚಿ ಜಲಸಾಹಸ ಕ್ರೀಡಾ ಕೇಂದ್ರಕ್ಕೆ ನಿರ್ಗಮನ (7 ಕಿ.ಮೀ)
  • ಬೆಳಿಗ್ಗೆ 11.30ಕ್ಕೆ – ಯಗಚಿ ಜಲಸಾಹಸ  ಕ್ರೀಡಾ ಕೇಂದ್ರಕ್ಕೆ ಆಗಮನ

     ಪ್ರವಾಸಿ ತಾಣದ ಮಾಹಿತಿ:

  • ಯಗಚಿ ಜಲ ಕ್ರೀಡಾ ಕೇಂದ್ರ ಬೇಲೂರಿನ ಯಗಚಿ ಡ್ಯಾಮ್ ಹಿನ್ನೀರಿನಲ್ಲಿರುವ ಒಂದು ಸಾಹಸ ಕ್ರೀಡಾ ಚಟುವಟಿಕೆಯಾಗಿದೆ.
  • ಈ ಕೇಂದ್ರದಲ್ಲಿ ಸ್ಪೀಡ್ ಬೋಟಿಂಗ್, ಬನಾನಾ ಬೋಟಿಂಗ್, ಜೆಟ್ ರೈಡಿಂಗ್, ಕಯಾಕಿಂಗ್‌ನಂತಹ ವಿವಿಧ ಚಟುವಟಿಕೆಗಳಿದ್ದು, ಆಸಕ್ತರು ಪ್ರತ್ಯೇಕ ಶುಲ್ಕ ಪಾವತಿಸಿ ಚಟುವಟಿಕೆಗಳನ್ನು ಮಾಡಬಹುದು.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ:1.30 ಗಂಟೆ

ಪುಷ್ಪಗಿರಿ ಬೆಟ್ಟ, ಹಳೇಬೀಡು:

  • ಮಧ್ಯಾಹ್ನ 01.00ಕ್ಕೆ – ಪುಷ್ಪಗಿರಿ ಬೆಟ್ಟ, ಹಳೇಬೀಡುಗೆ ನಿರ್ಗಮನ (23 ಕಿ.ಮೀ)
  • ಮಧ್ಯಾಹ್ನ 01.45ಕ್ಕೆ – ಪುಷ್ಪಗಿರಿ ಬೆಟ್ಟ, ಹಳೇಬೀಡಿಗೆ ಆಗಮನ

      ಪ್ರವಾಸಿ ತಾಣದ ಮಾಹಿತಿ:

  • ಪುಷ್ಪಗಿರಿ ಮಹಾ-ಸಂಸ್ಥಾನವು ಕರ್ನಾಟಕದ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ.

ಮಧ್ಯಾಹ್ನ 02.00 – ಮಧ್ಯಾಹ್ನ 03.00ರವರೆಗೆ ಪುಷ್ಪಗಿರಿ ಬೆಟ್ಟದಲ್ಲಿ ಉಚಿತವಾಗಿ ಅನ್ನ ದಾಸೋಹವಿರುತ್ತದೆ

ಹೊಯ್ಸಳೇಶ್ವರ ದೇವಸ್ಥಾನ ಹಳೇಬೀಡು:

  • ಮಧ್ಯಾಹ್ನ 03.00ಕ್ಕೆ – ಹೊಯ್ಸಳೇಶ್ವರ ದೇವಸ್ಥಾನ ಹಳೇಬೀಡಿಗೆ ನಿರ್ಗಮನ (4 ಕಿ.ಮೀ)
  • ಮಧ್ಯಾಹ್ನ 03.10ಕ್ಕೆ – ಹೊಯ್ಸಳೇಶ್ವರ ದೇವಸ್ಥಾನಕ್ಕೆ ಹಳೇಬೀಡಿಗೆ ಆಗಮನ

     ಪ್ರವಾಸಿ ತಾಣದ ಮಾಹಿತಿ:

  • ಇದನ್ನು 12 ನೇ ಶತಮಾನದಲ್ಲಿ ಹೊಯ್ಸಳರು ನಿರ್ಮಿಸಿದರು ಎಂದು ಉಲ್ಲೇಖಿಸಲಾಗಿದೆ.

ಹೊಯ್ಸಳೇಶ್ವರ ದೇವಸ್ಥಾನವು ಶಿವನಿಗೆ ಅರ್ಪಿತವಾಗಿದೆ ಮತ್ತು ಅದರ ಜೋಡಿ ದೇವಾಲಯಗಳು ಮತ್ತು ಬೃಹತ್ ನಂದಿ ಪ್ರತಿಮೆಗಳಿಗೆ ಹೆಸರುವಾಸಿಯಾಗಿದೆ.

  • ಇದರ ಸಮೃದ್ಧ ಕೆತ್ತನೆಗಳಿಂದ ಕೂಡಿದ ಗೋಡೆಗಳು ಮಹಾಕಾವ್ಯಗಳು ಮತ್ತು ಪೌರಾಣಿಕ ದೃಶ್ಯಗಳನ್ನು ಚಿತ್ರಿಸಲಾಗಿದೆ, ಇದು ಹೊಯ್ಸಳ ವಾಸ್ತುಶಿಲ್ಪದ ಒಂದು ಪ್ರಮುಖ ಉದಾಹರಣೆಯಾಗಿದೆ ಮತ್ತು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 01.35 ಗಂಟೆಗಳು

ಶ್ರೀ. ವರದರಾಜಸ್ವಾಮಿ ದೇವಸ್ಥಾನ, ಕೊಂಡಜ್ಜಿ

  • ಮಧ್ಯಾಹ್ನ 04.45ಕ್ಕೆ – ಶ್ರೀ. ವರದರಾಜಸ್ವಾಮಿ ದೇವಸ್ಥಾನ, ಕೊಂಡಜ್ಜಿಗೆ ನಿರ್ಗಮನ
  •  ಮಧ್ಯಾಹ್ನ 05.15ಕ್ಕೆ – ಶ್ರೀ ವರದರಾಜಸ್ವಾಮಿ ದೇವಸ್ಥಾನ, ಕೊಂಡಜ್ಜಿಗೆ ಆಗಮನ

      ಪ್ರವಾಸಿ ತಾಣದ ಮಾಹಿತಿ:

  • ಶಂಖ, ಗದೆ, ಕಮಲವನ್ನು ಹಿಡಿದು ಅಭಯ ಮುದ್ರೆಯನ್ನು ತೋರಿಸುವ 18 ಅಡಿ ಎತ್ತರದ ಕಪ್ಪು ಕಲ್ಲಿನ ವಿಗ್ರಹವನ್ನು ವರದರಾಜ (ವಿಷ್ಣು) ಗೆ ಸಮರ್ಪಿಸಲಾಗಿದೆ.
  • ಶಾಂತಿಯುತ ಮತ್ತು ಆಧ್ಯಾತ್ಮಿಕ ವಾತಾವರಣಕ್ಕೆ ಪ್ರಸಿದ್ದವಾಗಿದೆ.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 30 ನಿಮಿಷ

ಮಳೆಮಲ್ಲೇಶ್ವರ ದೇವಸ್ಥಾನ. ಸೀಗೆಗುಡ್ಡ:

  • ಸಂಜೆ 05.30ಕ್ಕೆ – ಸೀಗೆಗುಡ್ಡದ ಮಳೆಮಲ್ಲೇಶ್ವರ ದೇವಸ್ಥಾನಕ್ಕೆ ನಿರ್ಗಮನ (8 ಕಿ.ಮೀ)
  • ಸಂಜೆ 05.45ಕ್ಕೆ – ಸೀಗೆಗುಡ್ಡದ ಮಳೆಮಲ್ಲೇಶ್ವರ ದೇವಸ್ಥಾನಕ್ಕೆ ಆಗಮನ

        ಪ್ರವಾಸಿ ತಾಣದ ಮಾಹಿತಿ:

  • ಮಲ್ಲೇಶ್ವರ (ಶಿವ) ದೇವರಿಗೆ ಸಮರ್ಪಿತವಾದ ದೇವಸ್ಥಾನವಾಗಿದೆ.
  • ಹಚ್ಚ ಹಸಿರಿನಿಂದ ಆವೃತವಾದ ಬೆಟ್ಟದ ತುದಿಯಲ್ಲಿದೆ.
  • ರಮಣೀಯ ನೋಟಗಳು ಮತ್ತು ಶಾಂತಿಯುತ ವಾತಾವರಣನ್ನು ಹೊಂದಿದೆ.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 45 ನಿಮಿಷ

ಸಂಜೆ 06.30ಕ್ಕೆ – ಹಾಸನಕ್ಕೆ ನಿರ್ಗಮನ (18 ಕಿ.ಮೀ)

 ಒಟ್ಟು ಪ್ರಯಾಣ-116 ಕಿ.ಮೀ

Slide7

ಆರಂಭದ ಹಂತ:
ನಗರ ಬಸ್ ನಿಲ್ದಾಣ, ಹಾಸನ
ಅಂತ್ಯ ಹಂತ: ನಗರ ಬಸ್ ನಿಲ್ದಾಣ, ಹಾಸನ
ಪ್ರವಾಸದ ವಿಷಯ: ಪ್ರಕೃತಿ / ಪರಂಪರೆಯ ಅನುಭವ
ಪ್ರವಾಸಿಗರಿಗೆ ಕಲ್ಪಿಸಿರುವ ಸೌಲಭ್ಯಗಳು
ಪ್ರವಾಸಿ ಮಾರ್ಗದರ್ಶಿ,  ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ
ಪ್ರವಾಸಿ ಮಿತ್ರರೊಂದಿಗೆ ಆರಾಮದಾಯಕ ಪ್ರಯಾಣ
ಕೆಎಸ್‌ಆರ್‌ಟಿಸಿ ದರ:
ವಯಸ್ಕರಿಗೆ : ರೂ.400.00
ಮಕ್ಕಳು (12 ವರ್ಷದೊಳಗೆ) : ರೂ.300.00

ವಿವರವಾದ ವೇಳಾಪಟ್ಟಿ

ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನ, ನುಗ್ಗೇಹಳ್ಳಿ:

  • ಬೆಳಿಗ್ಗೆ 07.30ಕ್ಕೆ – ನುಗ್ಗೇಹಳ್ಳಿಯ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನಕ್ಕೆ ನಿರ್ಗಮನ (54 ಕಿ.ಮೀ)
  • ಬೆಳಿಗ್ಗೆ 10.00ಕ್ಕೆ – ನುಗ್ಗೇಹಳ್ಳಿಯ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಆಗಮನ

     ಪ್ರವಾಸಿ ತಾಣದ ಮಾಹಿತಿ:

  • ಕ್ರಿ.ಶ. 1246 ರಲ್ಲಿ ಹೊಯ್ಸಳ ರಾಜ ವೀರಸೋಮೇಶ್ವರನ ಆಳ್ವಿಯ ಸಂದರ್ಭದಲ್ಲಿ ಬೊಮ್ಮಣ್ಣ ದಂಡನಾಯಕ ನಿರ್ಮಿಸಿದನು ಎಂದು ಉಲ್ಲೇಖಿಸಲಾಗಿದೆ.
  • ಇದನ್ನು ಹೊಯ್ಸಳ ತ್ರಿಕೂಟ (ಮೂರು ಗರ್ಭಗುಡಿ) ಶೈಲಿಯಲ್ಲಿ ನಿರ್ಮಿಸಲಾಗಿದೆ – ಕೇಶವ (ಪಶ್ಚಿಮ), ಲಕ್ಷ್ಮಿ

ನರಸಿಂಹ (ಉತ್ತರ) ಮತ್ತು ವೇಣುಗೋಪಾಲ (ದಕ್ಷಿಣ) ಗೆ ಸಮರ್ಪಿಸಲಾಗಿದೆ.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 30 ನಿಮಿಷಗಳು

ಶ್ರವಣಬೆಳಗೊಳ (ವಿಂದ್ಯಗಿರಿ ಬೆಟ್ಟ):

  • ಬೆಳಿಗ್ಗೆ 10.30ಕ್ಕೆ – ಶ್ರವಣಬೆಳಗೊಳಕ್ಕೆ ನಿರ್ಗಮನ (ವಿಂದ್ಯಗಿರಿ ಬೆಟ್ಟ)
  • ಬೆಳಿಗ್ಗೆ 11.15ಕ್ಕೆ – ಶ್ರವಣಬೆಳಗೊಳಕ್ಕೆ (ವಿಂದ್ಯಗಿರಿ ಬೆಟ್ಟ) ಆಗಮನ

     ಪ್ರವಾಸಿ ತಾಣದ ಮಾಹಿತಿ:

  • ಗೋಮಟೇಶ್ವರ ಬಾಹುಬಲಿಯ 57 ಅಡಿ ಎತ್ತರದ ಏಕಶಿಲೆಯ ಪ್ರತಿಮೆಗೆ ಪ್ರಸಿದ್ಧಿಯಾಗಿದೆ.
  • ವಿಶ್ವದ ಅತಿದೊಡ್ಡ ಏಕಶಿಲೆಯ ಪ್ರತಿಮೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ (ಒಂದೇ ಕಲ್ಲಿನಿಂದ ಕೆತ್ತಲಾಗಿದೆ)
  • ಬಾಹುಬಲಿ ಪ್ರತಿಮೆಯನ್ನು ಕ್ರಿ.ಶ. 981 ರಲ್ಲಿ ಗಂಗಾ ರಾಜವಂಶದ ಮಂತ್ರಿ ಚಾಮುಂಡರಾಯರು ಸ್ಥಾಪಿಸಿದರು.
  • ಸುತ್ತಮುತ್ತಲಿನ ಸ್ಥಳವು ಶ್ರವಣಬೆಳಗೊಳ ಪಟ್ಟಣ ಮತ್ತು ಚಂದ್ರಗಿರಿ ಬೆಟ್ಟದ ವಿಹಂಗಮ ನೋಟವನ್ನು ಸವಿಯಬಹುದು.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 02 ಗಂಟೆಗಳು

ಮಧ್ಯಾಹ್ನ 01.15 – ಮಧ್ಯಾಹ್ನ 2.15 ಶ್ರೀ ಜೈನ ಮಠದಲ್ಲಿ ಉಚಿತ ದಾಸೋಹ

ಶ್ರವಣಬೆಳಗೊಳ (ಚಂದ್ರಗಿರಿ ಬೆಟ್ಟ):

  • ಮಧ್ಯಾಹ್ನ 02.15ಕ್ಕೆ – ಚಂದ್ರಗಿರಿ ಬೆಟ್ಟಕ್ಕೆ ನಿರ್ಗಮನ (500 ಮೀಟರ್)
  • ಮಧ್ಯಾಹ್ನ 02.25ಕ್ಕೆ – ಚಂದ್ರಗಿರಿ ಬೆಟ್ಟಕ್ಕೆ ಆಗಮನ

      ಪ್ರವಾಸಿ ತಾಣದ ಮಾಹಿತಿ:

  • ವಿಂದ್ಯಗಿರಿ ಬೆಟ್ಟದ ಎದುರು ಇದೆ.
  • ಜೈನ ಸನ್ಯಾಸಿಗಳಿಗೆ ಅರ್ಪಿಸಲಾದ ಹಲವಾರು ಜೈನ ಬಸದಿಗಳು (ದೇವಾಲಯಗಳು) ಮತ್ತು ಸ್ಮಾರಕಗಳು ಇಲ್ಲಿವೆ.
  • ಜೈನಮುನಿ ಭದ್ರಬಾಹು ಜೊತೆ ಸಂಬಂಧ ಹೊಂದಿದ್ದು, ಅವರು ತಮ್ಮ ಶಿಷ್ಯರೊಂದಿಗೆ ಇಲ್ಲಿ ಧ್ಯಾನ ಮಾಡಿದ್ದರು. ಚಂದ್ರಗುಪ್ತ ಬಸದಿ, ಪಾಶ್ವನಾಥ ಬಸದಿ, ಶಾಂತಿನಾಥ ಬಸದಿ ಇತ್ಯಾದಿ ಸೇರಿದಂತೆ ಸುಮಾರು 14 ದೇವಾಲಯಗಳಿವೆ.
  • ಮೇಲ್ಭಾಗವನ್ನು ತಲುಪಲು 200-250 ಮೆಟ್ಟಿಲುಗಳ ಹತ್ತಬೇಕಾಗುತ್ತದೆ. ಶ್ರವಣಬೆಳಗೊಳ ಪಟ್ಟಣ ಮತ್ತು ವಿಂದ್ಯಗಿರಿ ಬೆಟ್ಟದ ವಿಹಂಗಮ ನೋಟವನ್ನು ಆನಂದಿಸಬಹುದು. ಜೈನ ಯಾತ್ರಿಕರಿಗೆ ಪ್ರಮುಖ ತಾಣವಾಗಿದೆ.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 01.35 ಗಂಟೆಗಳು

ಬೆಲಸಿಂದ ಉದ್ಯಾನವನ:

  • ಮಧ್ಯಾಹ್ನ 04.00ಕ್ಕೆ – ಚನ್ನರಾಯಪಟ್ಟಣದ ಬೆಲಸಿಂದ ಉದ್ಯಾನವನಕ್ಕೆ ನಿರ್ಗಮನ (15 ಕಿ.ಮೀ)
  • ಮಧ್ಯಾಹ್ನ 04.30ಕ್ಕೆ – ಬೆಲಸಿಂದ ಉದ್ಯಾನವನಕ್ಕೆ ಆಗಮನ

     ಪ್ರವಾಸಿ ತಾಣದ ಮಾಹಿತಿ:

  • ಹಸಿರು ಗ್ರಂಥಾಲಯ, ವಿಶಾಲವಾದ ಪ್ರಕೃತಿ ವನ, ನಡಿಗೆ ಮಾರ್ಗಗಳು ಮತ್ತು ದೋಣಿ ವಿಹಾರವನ್ನು ಆನಂದಿಸಬಹುದಾಗಿದೆ.

           ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 1.30 ಗಂಟೆ

ಸಂಜೆ 06.00ಕ್ಕೆ – ಹಾಸನಕ್ಕೆ ನಿರ್ಗಮನ (34 ಕಿ.ಮೀ)

ಒಟ್ಟು ಪ್ರಯಾಣ– 131.5 ಕಿ.ಮೀ.

Slide 8

ಆರಂಭದ ಹಂತ:
ನಗರ ಬಸ್ ನಿಲ್ದಾಣ, ಹಾಸನ
ಅಂತ್ಯ ಹಂತ: ನಗರ ಬಸ್ ನಿಲ್ದಾಣ, ಹಾಸನ
ಪ್ರವಾಸದ ವಿಷಯ: ಪ್ರಕೃತಿ / ಪರಂಪರೆಯ ಅನುಭವ
ಪ್ರವಾಸಿಗರಿಗೆ ಕಲ್ಪಿಸಿರುವ ಸೌಲಭ್ಯಗಳು
ಪ್ರವಾಸಿ ಮಾರ್ಗದರ್ಶಿ,  ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ
ಪ್ರವಾಸಿ ಮಿತ್ರರೊಂದಿಗೆ ಆರಾಮದಾಯಕ ಪ್ರಯಾಣ
ಕೆಎಸ್‌ಆರ್‌ಟಿಸಿ ದರ:
ವಯಸ್ಕರಿಗೆ : ರೂ.400.00
ಮಕ್ಕಳು (12 ವರ್ಷದೊಳಗೆ) : ರೂ.300.00

ವಿವರವಾದ ವೇಳಾಪಟ್ಟಿ

ಬೂಚೇಶ್ವರ ದೇವಸ್ಥಾನ, ಕೋರವಂಗಲ:

  • ಬೆಳಿಗ್ಗೆ 07.30ಕ್ಕೆ – ಕೋರವಂಗಲದ ಬೂಚೇಶ್ವರ ದೇವಸ್ಥಾನಕ್ಕೆ ನಿರ್ಗಮನ (13 ಕಿ.ಮೀ)
  • ಬೆಳಿಗ್ಗೆ 08.20ಕ್ಕೆ – ಕೋರವಂಗಲದ ಬೂಚೇಶ್ವರ ದೇವಸ್ಥಾನಕ್ಕೆ ಆಗಮನ

    ಪ್ರವಾಸಿ ತಾಣದ ಮಾಹಿತಿ:

  • ಹೊಯ್ಸಳ ರಾಜ ವೀರಬಲ್ಲಾಳರ ಪಟ್ಟಾಭಿಷೇಕದ ಸ್ಮರಣಾರ್ಥವಾಗಿ ಶ್ರೀಮಂತ ಪೋಷಕನು ಬುಚಿ (ಬುಚಿರಾಜ) 12ನೇ ಶತಮಾನದಲ್ಲಿ ನಿರ್ಮಿಸಿದನೆಂದು ಉಲ್ಲೇಖಿಸಲಾಗಿದೆ.
  • ಇದು ದ್ವಿಕೂಟ (ಅವಳಿ ಗರ್ಭಗುಡಿ) ದೇವಾಲಯವಾಗಿದ್ದು, ಎರಡು ದೇವಾಲಯಗಳು ಪರಸ್ಪರ ಎದುರಾಗಿವೆ, ಒಂದು

ಶಿವನಿಗೆ ಮತ್ತು ಇನ್ನೊಂದು ಸೂರ್ಯನಿಗೆ ಸಮರ್ಪಿತವಾಗಿದೆ.

      ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 40 ನಿಮಿಷಗಳು

ಕೇಶವ ದೇವಸ್ಥಾನ ಮತ್ತು ಸೋಮೇಶ್ವರ ದೇವಸ್ಥಾನ, ಹಾರನಹಳ್ಳಿ:

  • ಬೆಳಿಗ್ಗೆ 09.00ಕ್ಕೆ – ಕೇಶವ ದೇವಸ್ಥಾನ ಮತ್ತು ಸೋಮೇಶ್ವರ ದೇವಸ್ಥಾನ, ಹಾರನಹಳ್ಳಿಗೆ ನಿರ್ಗಮನ (27 ಕಿ.ಮೀ)
  • ಬೆಳಿಗ್ಗೆ 09.45ಕ್ಕೆ– ಕೇಶವ ದೇವಸ್ಥಾನ ಮತ್ತು ಸೋಮೇಶ್ವರ ದೇವಸ್ಥಾನಕ್ಕೆ ಆಗಮನ

     ಪ್ರವಾಸಿ ತಾಣದ ಮಾಹಿತಿ:

  • ಶಿವನಿಗೆ (ಲಿಂಗ ರೂಪದಲ್ಲಿ) ಸಮರ್ಪಿತವಾದ ಈ ದೇವಾಲಯವನ್ನು 1234-1235 ಸಿ.ಇ.ರ ಸುಮಾರಿಗೆ ಹೊಯ್ಸಳ ಅವಧಿಯಲ್ಲಿ ನಿರ್ಮಿಸಲಾಯಿತು, ಹೆಗ್ಗಡೆಯ ಸಹೋದರರಾದ ಪೆದ್ದಣ್ಣ, ಸೋವಣ್ಣ ಮತ್ತು ಕೇಶಣ್ಣರಿಂದ ರಾಜ ವೀರ ಸೋಮೇಶ್ವರನ ಆಳ್ವಿಕೆಯಲ್ಲಿ ನಿರ್ಮಾಣಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.
  • ಸೋಮೇಶ್ವರ ದೇವಾಲಯವು ಲಕ್ಷ್ಮೀನರಸಿಂಹ ದೇವಾಲಯದಿಂದ ಪೂರ್ವಕ್ಕೆ ಕೇವಲ 100 ಮೀಟರ್ ದೂರದಲ್ಲಿ ಹಾರನಹಳ್ಳಿಯಲ್ಲಿ ಹೊಯ್ಸಳ ಸ್ಮಾರಕದ ಗಮನಾರ್ಹ ಜೋಡಿ ದೇವಾಲಯಗಳನ್ನು ನಿರ್ಮಾಣ ಮಾಡಲಾಗಿದೆ.
  • ಹೊಯ್ಸಳರ ಶೈಲಿಯಲ್ಲಿ ನಿರ್ಮಿಸಲಾದ ಈ ದೇವಾಲಯವು ನಕ್ಷತ್ರಾಕಾರದ (ನಕ್ಷತ್ರಾಕಾರದ) ಗರ್ಭಗುಡಿಯನ್ನು (ಏಕಕೂಟ) ಹೊಂದಿದೆ, ಇದು ತ್ರಿಕೂಟ (ಮೂರು-ಗರ್ಭಗುಡಿ) ವಿನ್ಯಾಸವನ್ನು ಹೊಂದಿದೆ.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 30 ನಿಮಿಷಗಳು

ಮಾಲೇಕಲ್ ತಿರುಪತಿ, ಅರಸೀಕೆರೆ:

  • ಬೆಳಿಗ್ಗೆ 10.15ಕ್ಕೆ– ಮಾಲೇಕಲ್ ತಿರುಪತಿ, ಅರಸೀಕೆರೆಗೆ ನಿರ್ಗಮನ (12 ಕಿ.ಮೀ)
  • ಬೆಳಿಗ್ಗೆ 10.35ಕ್ಕೆ – ಅರಸೀಕೆರೆಯ ಮಾಲೇಕಲ್ ತಿರುಪತಿಗೆ ಆಗಮನ

ಪ್ರವಾಸಿ ತಾಣದ ಮಾಹಿತಿ:

  • ಆಂಧ್ರಪ್ರದೇಶದ ತಿರುಪತಿಯಲ್ಲಿರುವ ದೇವರಿಗೆ ಹೋಲುವ ರೂಪದಲ್ಲಿ ವೆಂಕಟೇಶ್ವರ (ಬಾಲಾಜಿ) ದೇವರಿಗೆ ಸಮರ್ಪಿತವಾಗಿದೆ.
  • ಬೆಟ್ಟದ ತುದಿಯನ್ನು ತಲುಪಲು ಸುಮಾರು 1250 ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ. ಬೆಟ್ಟದ ಮೇಲ್ಭಾಗದಿಂದ ಅರಸೀಕೆರೆ ಪಟ್ಟಣದ ಸುತ್ತಮುತ್ತಲಿನ ಹಾಗೂ ಗ್ರಾಮಾಂತರದ ರಮಣೀಯ ನೋಟವನ್ನು ಸವಿಯಬಹುದು.

ಪ್ರವಾಸಿ ತಾಣದ ವೀಕ್ಷಣೆಯ ಕಾಲಾವಧಿ: 01 ಗಂಟೆ

ಜೇನುಕಲ್ ಸಿದ್ಧೇಶ್ವರ ಬೆಟ್ಟ:

  • ಬೆಳಿಗ್ಗೆ 11.35ಕ್ಕೆ – ಜೇನುಕಲ್ ಸಿದ್ಧೇಶ್ವರ ಬೆಟ್ಟಕ್ಕೆ ನಿರ್ಗಮನ (10 ಕಿ.ಮೀ)
  • ಬೆಳಿಗ್ಗೆ 11.45ಕ್ಕೆ – ಜೇನುಕಲ್ ಸಿದ್ಧೇಶ್ವರ ಬೆಟ್ಟಕ್ಕೆ ಆಗಮನ

ಪ್ರವಾಸಿ ತಾಣದ ಮಾಹಿತಿ:

  • ಸಿದ್ದೇಶ್ವರ (ಶಿವ) ದೇವರಿಗೆ ಸಮರ್ಪಿತವಾಗಿದೆ. ಜೇನುಕಲ್ ಎಂದರೆ ಕನ್ನಡದಲ್ಲಿ “ಜೇನು ಬಂಡೆ” ಎಂದರ್ಥ.
  • ಈ ಪ್ರದೇಶವು ಒಂದು ಕಾಲದಲ್ಲಿ ಕಾಡು ಜೇನುಗೂಡುಗಳಿಂದ ಸಮೃದ್ಧವಾಗಿತ್ತು ಎಂದು ಸೂಚಿಸುತ್ತದೆ.
  • ಈ ಬೆಟ್ಟವು ಕೆಲವು ಋತುಗಳಲ್ಲಿ ನೈಸರ್ಗಿಕ ಶಿಲಾ ರಚನೆಗಳು ಮತ್ತು ಜೇನುನೊಣಗಳ ವಸಾಹತುಗಳಿಗೆ ಹೆಸರುವಾಸಿಯಾಗಿದೆ.

            ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 01.15 ಗಂಟೆಗಳು

ಶ್ರೀ ಜೇನುಕಲ್ಲು ಬೆಟ್ಟದಲ್ಲಿ ಮಧ್ಯಾಹ್ನ 01.00 ರಿಂದ ಮಧ್ಯಾಹ್ನ 2.00 ರವರೆಗೆ ಉಚಿತ ಊಟದ ವ್ಯವಸ್ಥೆ ಇರುತ್ತದೆ.

ಗಾಂಧೀಜಿ ಚಿತಾ ಭಸ್ಮ:

  • ಮಧ್ಯಾಹ್ನ 02.00ಕ್ಕೆ – ಗಾಂಧೀಜಿ ಚಿತಾ ಭಸ್ಮಕ್ಕೆ ನಿರ್ಗಮನ (7 ಕಿ.ಮೀ)
  • ಮಧ್ಯಾಹ್ನ 02.15ಕ್ಕೆ – ಗಾಂಧೀಜಿ ಚಿತಾ ಭಸ್ಮಕ್ಕೆ ಆಗಮನ

     ಪ್ರವಾಸಿ ತಾಣದ ಮಾಹಿತಿ:

  • 1948 ರಲ್ಲಿ ಗಾಂಧೀಜಿಯವರ ಚಿತಾ ಭಸ್ಮದ ಒಂದು ಭಾಗವನ್ನು ಅವರ ದಹನದ ನಂತರ ವಿಸರ್ಜಿಸಿದ ಸ್ಥಳವನ್ನು ಈ ಸ್ಮಾರಕ ಗುರುತಿಸುತ್ತದೆ. ಏಕತೆಯ ಸಂಕೇತವಾಗಿ ಗಾಂಧೀಜಿಯವರ ಚಿತಾ ಭಸ್ಮವನ್ನು ಭಾರತದಾದ್ಯಂತ ಅನೇಕ ಸ್ಥಳಗಳಿಗೆ ಕಳುಹಿಸಲಾಯಿತು. ಅರಸೀಕೆರೆ ಈ ಪ್ರದೇಶ ಇದರಲ್ಲಿ ಒಂದಾಗಿದೆ.
  • ಈ ಘಟನೆಯ ಸ್ಮರಣಾರ್ಥವಾಗಿ ಒಂದು ಸಣ್ಣ ಸ್ಮಾರಕ ಸ್ತಂಭ (ಸ್ಮೃತಿ ಸ್ತಂಭ) ನಿರ್ಮಿಸಲಾಗಿದೆ

    ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 45 ನಿಮಿಷಗಳು

ನರಸಿಂಹಸ್ವಾಮಿ ದೇವಸ್ಥಾನ, ಶಾಂತಿಗ್ರಾಮ:

  • ಮಧ್ಯಾಹ್ನ 03.00ಕ್ಕೆ – ಶಾಂತಿಗ್ರಾಮ, ನರಸಿಂಹಸ್ವಾಮಿ ದೇವಸ್ಥಾನಕ್ಕೆ ನಿರ್ಗಮನ (44 ಕಿ.ಮೀ)
  • ಮಧ್ಯಾಹ್ನ 04.30ಕ್ಕೆ – ಶಾಂತಿಗ್ರಾಮ, ನರಸಿಂಹಸ್ವಾಮಿ ದೇವಸ್ಥಾನಕ್ಕೆ ಆಗಮನ

     ಪ್ರವಾಸಿ ತಾಣದ ಮಾಹಿತಿ:

  • ಹೊಯ್ಸಳರ ಅವಧಿಯಲ್ಲಿ (12-13ನೇ ಶತಮಾನದಲ್ಲಿ) ನಿರ್ಮಿಸಲಾಗಿದೆ ಎಂದು ನಂಬಲಾದ ಲಕ್ಷ್ಮಿ ನರಸಿಂಹನು ವಿಷ್ಣುವಿನ ಅವತಾರ ಮತ್ತು ಲಕ್ಷ್ಮಿ ದೇವಿಯ ಜೊತೆ ಪೂಜಿಸಲ್ಪಡುತ್ತಾನೆ.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 30 ನಿಮಿಷಗಳು

ಗೆಂಡೆಕಟ್ಟೆ ಅರಣ್ಯ, ಹಾಸನ:

  • ಸಂಜೆ 05.00ಕ್ಕೆ – ಹಾಸನದ ಗೆಂಡೆಕಟ್ಟೆ ಅರಣ್ಯಕ್ಕೆ ನಿರ್ಗಮನ
  • ಸಂಜೆ 05.15ಕ್ಕೆ – ಹಾಸನದ ಗೆಂಡೆಕಟ್ಟೆ ಅರಣ್ಯಕ್ಕೆ ಆಗಮನ

       ಪ್ರವಾಸಿ ತಾಣದ ಮಾಹಿತಿ:

ಜಿಂಕೆವನ, ಪ್ರಕೃತಿಯ ಮಕ್ಕಳ ಆಟದ ಮೈದಾನದಲ್ಲಿ ಆನಂದಿಸಬಹುದು.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 45 ನಿಮಿಷಗಳು

ಪುರಾತತ್ವ ವಸ್ತು ಸಂಗ್ರಹಾಲಯಕ್ಕೆ:

  • ಸಂಜೆ 06.00ಕ್ಕೆ – ಹಾಸನದ ಪುರಾತತ್ವ ವಸ್ತು ಸಂಗ್ರಹಾಲಯಕ್ಕೆ ನಿರ್ಗಮನ (07 ಕಿ.ಮೀ)
  • ಸಂಜೆ 06.15ಕ್ಕೆ – ಹಾಸನದ ಪುರಾತತ್ವ ವಸ್ತು ಸಂಗ್ರಹಾಲಯಕ್ಕೆ ಆಗಮನ

ಒಟ್ಟು ಪ್ರಯಾಣ: 132 ಕಿ.ಮೀ

slide 9

ಆರಂಭದ ಹಂತ:
ನಗರ ಬಸ್ ನಿಲ್ದಾಣ, ಹಾಸನ
ಅಂತ್ಯ ಹಂತ: ನಗರ ಬಸ್ ನಿಲ್ದಾಣ, ಹಾಸನ
ಪ್ರವಾಸದ ವಿಷಯ: ಪ್ರಕೃತಿ / ಪರಂಪರೆಯ ಅನುಭವ
ಪ್ರವಾಸಿಗರಿಗೆ ಕಲ್ಪಿಸಿರುವ ಸೌಲಭ್ಯಗಳು
ಪ್ರವಾಸಿ ಮಾರ್ಗದರ್ಶಿ,  ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ
ಪ್ರವಾಸಿ ಮಿತ್ರರೊಂದಿಗೆ ಆರಾಮದಾಯಕ ಪ್ರಯಾಣ
ಕೆಎಸ್‌ಆರ್‌ಟಿಸಿ ದರ:
ಯಸ್ಕರಿಗೆ : ರೂ.400.00
ಮಕ್ಕಳು (12 ವರ್ಷದೊಳಗೆ) : ರೂ.300.00

ವಿವರವಾದ ವೇಳಾಪಟ್ಟಿ

ಹಾಲುವಾಗಿಲು ಸಣ್ಣ ಚೆಕ್ ಡ್ಯಾಮ್‌:

  • ಬೆಳಿಗ್ಗೆ 07.30ಕ್ಕೆ – ಹಾಲುವಾಗಿಲು ಸಣ್ಣ ಚೆಕ್ ಡ್ಯಾಮ್‌ಗೆ ನಿರ್ಗಮನ (8 ಕಿ.ಮೀ)
  • ಬೆಳಿಗ್ಗೆ 08.15ಕ್ಕೆ – ಹಾಲುವಾಗಿಲು ಸಣ್ಣ ಚೆಕ್ ಡ್ಯಾಮ್‌ಗೆ ಆಗಮನ

     ಪ್ರವಾಸಿ ತಾಣದ ಮಾಹಿತಿ:

  • ಹಾಲುವಾಗಿಲು ವಾಸ್ತವವಾಗಿ ಒಂದು ಸಣ್ಣ ಚೆಕ್ ಡ್ಯಾಮ್
  • ವಿಶೇಷವಾಗಿ ಮಳೆಗಾಲದಲ್ಲಿ ನೀರು ನಿಧಾನವಾಗಿ ಉಕ್ಕಿ ಹರಿಯುವಾಗ ಈ ಸ್ಥಳವು ಶಾಂತ ವಾತಾವರಣವನ್ನು ನೀಡುತ್ತದೆ.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 45 ನಿಮಿಷಗಳು

ಶೆಟ್ಟಿಹಳ್ಳಿ ಚರ್ಚ್:

  • ಬೆಳಿಗ್ಗೆ 09.00ಕ್ಕೆ – ಶೆಟ್ಟಿಹಳ್ಳಿ ಚರ್ಚ್ ನಿರ್ಗಮನ (22 ಕಿ.ಮೀ)
  • ಬೆಳಿಗ್ಗೆ 09.45ಕ್ಕೆ – ಶೆಟ್ಟಿ ಹಳ್ಳಿ, ಚರ್ಚ್ ಆಗಮನ

      ಪ್ರವಾಸಿ ತಾಣದ ಮಾಹಿತಿ:

  • ಮುಖ್ಯವಾಗಿ ಬ್ರಿಟಿಷ್ ಎಸ್ಟೇಟ್ ಸ್ಥಳೀಯರಿಗೆ ಸೇವೆ ಸಲ್ಲಿಸುವ ಫ್ರೆಂಚ್ ಮಿಷನರಿಗಳಿಂದ 1860 ರ ದಶಕದಲ್ಲಿ ನಿರ್ಮಿಸಲಾಗಿದೆ.
  • ಗೋಥಿಕ್ ವಾಸ್ತುಶಿಲ್ಪದ ಒಂದು ಪ್ರಮುಖ ಉದಾಹರಣೆಯೆಂದರೆ ಬೆಲ್ಲ ಮತ್ತು ಮೊಟ್ಟೆಗಳನ್ನು ಒಳಗೊಂಡಿರುವ ಅಸಾಮಾನ್ಯ ಗಾರೆ ಮಿಶ್ರಣವನ್ನು ಬಳಸಿ ನಿರ್ಮಿಸಲಾದ ಅಲಂಕೃತ ಕಮಾನುಗಳನ್ನು ಹೊಂದಿದೆ.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 01.15 ಗಂಟೆಗಳು

ಶ್ರೀ.ರಂಗನಾಥ ಸ್ವಾಮಿ ದೇವಸ್ಥಾನ, ಕೋನಾಪುರ:

  • ಬೆಳಿಗ್ಗೆ 11.00ಕ್ಕೆ – ಕೋನಾಪುರದ ಶ್ರೀ.ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ನಿರ್ಗಮನ (15 ಕಿ.ಮೀ)
  • ಬೆಳಿಗ್ಗೆ 11.20ಕ್ಕೆ– ಕೋನಾಪುರದ ಶ್ರೀ.ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಆಗಮನ

     ಪ್ರವಾಸಿ ತಾಣದ ಮಾಹಿತಿ:

  • ಗೊರೂರು ಅಣೆಕಟ್ಟಿನ ಬಳಿಯ ಸುಂದರವಾದ ಬೆಟ್ಟದ ಮೇಲೆ ನೆಲೆಸಿದೆ.
  • ದೇವಾಲಯವು ಹಚ್ಚ ಹಸಿರಿನಿಂದ ಆವೃತವಾಗಿದೆ.
  • ಆಧ್ಯಾತ್ಮಿಕ ಶಾಂತತೆಯನ್ನು ಅನುಭವಿಸಲು ಇದು ಉತ್ತಮ ಸ್ಥಳವಾಗಿದೆ.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 25 ನಿಮಿಷಗಳು

ಹೇಮಾವತಿ ಜಲಾಶಯ, ಗೊರೂರು :

  • ಬೆಳಿಗ್ಗೆ 11.45ಕ್ಕೆ – ಹೇಮಾವತಿ ಜಲಾಶಯಕ್ಕೆ ನಿರ್ಗಮನ (ಗೊರೂರು ಜಲಾಶಯ)( 8 ಕಿ.ಮೀ)
  • ಮಧ್ಯಾಹ್ನ 12.00ಕ್ಕೆ – ಹೇಮಾವತಿ ಜಲಾಶಯಕ್ಕೆ ಆಗಮನ (ಗೊರೂರು ಜಲಾಶಯ)

      ಪ್ರವಾಸಿ ತಾಣದ ಮಾಹಿತಿ:

  • ಕಾವೇರಿಯ ಉಪನದಿಯಾದ ಹೇಮಾವತಿ ನದಿಗೆ ಅಡ್ಡಲಾಗಿ ಈ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಈ ಜಲಾಶಯವು ಗೊರೂರು ಬಳಿ ಇದೆ.
  • ನೀರಾವರಿ, ಕುಡಿಯುವ ಮತ್ತು ವಿದ್ಯುತ್ ಉತ್ಪಾದನೆಗೆ ನೀರನ್ನು ಒದಗಿಸಲು 1979 ರಲ್ಲಿ ಈ ಅಣೆಕಟ್ಟನ್ನು ನಿರ್ಮಿಸಲಾಯಿತು. ತಂಪಾದ ಗಾಳಿಯೊಂದಿಗೆ ಶಾಂತ ವಾತಾವರಣವು ಕುಟುಂಬ ವಿಹಾರಕ್ಕೆ ಸೂಕ್ತವಾಗಿದೆ.
  • ಮಾನ್ಸೂನ್ ಮತ್ತು ಮಾನ್ಸೂನ್ ನಂತರದ ತಿಂಗಳುಗಳು (ಜುಲೈ-ಅಕ್ಟೋಬರ್) ಪೂರ್ಣ ಜಲಾಶಯ ಮತ್ತು ಸುತ್ತಮುತ್ತಲಿನ ಹಚ್ಚ ಹಸಿರಿನ ಪ್ರದೇಶಗಳನ್ನು ವೀಕ್ಷಿಸಲು ಉತ್ತಮ ಸಮಯವಾಗಿದೆ.

             ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 01.30 ಗಂಟೆಗಳು

ಮಧ್ಯಾಹ್ನ 01.30 –ಮಧ್ಯಾಹ್ನ 02.15ರ ವರೆಗೆ ಗೊರೂರು ಅಣೆಕಟ್ಟಿನ ಬಳಿಯ ಖಾಸಗಿ ಹೋಟೆಲ್‌ನಲ್ಲಿ ಊಟ   

[ಪ್ರಯಾಣಿಕರು ಸ್ವತಃ ಶುಲ್ಕ ಪಾವತಿಸಬೇಕಾಗುತ್ತದೆ]

ಶ್ರೀ ಸುಬ್ರಹ್ಮಣ್ಯಸ್ವಾಮಿ ಮತ್ತು ಶ್ರೀ ರಾಮೇಶ್ವರ ದೇವಸ್ಥಾನ, ರಾಮನಾಥಪುರ:

  • ಮಧ್ಯಾಹ್ನ 02.15ಕ್ಕೆ – ರಾಮನಾಥಪುರದ ಶ್ರೀ ಸುಬ್ರಹ್ಮಣ್ಯಸ್ವಾಮಿ ಮತ್ತು ರಾಮೇಶ್ವರ ದೇವಸ್ಥಾನಕ್ಕೆ ನಿರ್ಗಮನ (30 ಕಿ.ಮೀ)
  • ಮಧ್ಯಾಹ್ನ 03.00ಕ್ಕೆ – ರಾಮನಾಥಪುರದ ಶ್ರೀ ಸುಬ್ರಹ್ಮಣ್ಯಸ್ವಾಮಿ ಮತ್ತು ರಾಮೇಶ್ವರ ದೇವಸ್ಥಾನಕ್ಕೆ ಆಗಮನ

      ಪ್ರವಾಸಿ ತಾಣದ ಮಾಹಿತಿ:

  • ಕಾವೇರಿ ನದಿಯ ದಡದಲ್ಲಿರುವ ರಾಮನಾಥಪುರದಲ್ಲಿರುವ ಈ ದೇವಾಲಯವು ಆಧ್ಯಾತ್ಮಿಕ ವಾತಾವರಣವನ್ನು ಹೊಂದಿದೆ.
  • ಮಧ್ವಾಚಾರ್ಯರು ಸ್ಥಾಪಿಸಿದ ಮಾಧ್ವ (ದ್ವೈತ) ಸಂಪ್ರದಾಯದಲ್ಲಿ ಈ ದೇವಾಲಯವು ಪ್ರಮುಖ ಪರಂಪರೆಯಾಗಿದೆ.
  • ರಾಮೇಶ್ವರ ದೇವಸ್ಥಾನ ಪುರಾಣ ಐತಿಹ್ಯಾವಿರುವ ಈ ಕ್ಷೇತ್ರ ಬಹು ಪ್ರಸಿದ್ದವಾದದು. ಈ ದೇವಾಲಯವು

ಹೊಯ್ಸಳರ ಕಾಲದಲ್ಲಿ ನಿರ್ಮಿತವಾಗಿರುತ್ತದೆ.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 01:30 ಗಂಟೆ

ಸಂಜೆ 04.30ಕ್ಕೆ- ಹಾಸನಕ್ಕೆ ನಿರ್ಗಮನ (49 ಕಿ.ಮೀ)

ಒಟ್ಟು ಪ್ರಯಾಣ: 132 ಕಿ.ಮೀ

Slide 10

ಆರಂಭದ ಹಂತ:
ನಗರ ಬಸ್ ನಿಲ್ದಾಣ, ಹಾಸನ
ಅಂತ್ಯ ಹಂತ: ನಗರ ಬಸ್ ನಿಲ್ದಾಣ, ಹಾಸನ
ಪ್ರವಾಸದ ವಿಷಯ: ಪ್ರಕೃತಿ / ಪರಂಪರೆಯ ಅನುಭವ
ಪ್ರವಾಸಿಗರಿಗೆ ಕಲ್ಪಿಸಿರುವ ಸೌಲಭ್ಯಗಳು
ಪ್ರವಾಸಿ ಮಾರ್ಗದರ್ಶಿ,  ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ
ಪ್ರವಾಸಿ ಮಿತ್ರರೊಂದಿಗೆ ಆರಾಮದಾಯಕ ಪ್ರಯಾಣ
ಕೆಎಸ್‌ಆರ್‌ಟಿಸಿ ದರ:
ಯಸ್ಕರಿಗೆ : ರೂ.500.00
ಮಕ್ಕಳು (12 ವರ್ಷದೊಳಗೆ) : ರೂ.400.00

ವಿವರವಾದ ವೇಳಾಪಟ್ಟಿ

ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನ, ಜಾವಗಲ್‌:

  • ಬೆಳಿಗ್ಗೆ 07.30ಕ್ಕೆ – ಜಾವಗಲ್‌ನ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನಕ್ಕೆ ನಿರ್ಗಮನ (41 ಕಿ.ಮೀ)
  • ಬೆಳಿಗ್ಗೆ 09.30ಕ್ಕೆ – ಜಾವಗಲ್‌ನ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಆಗಮನ

     ಪ್ರವಾಸಿ ತಾಣದ ಮಾಹಿತಿ:

  • ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನವನ್ನು ಕ್ರಿ.ಶ. 1250-1260 ರ ಅವಧಿಯಲ್ಲಿ ಹೊಯ್ಸಳ ರಾಜ ಸೋಮೇಶ್ವರನ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು.

      ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 30 ನಿಮಿಷಗಳು

ಶ್ರೀ.ಚನ್ನಕೇಶವ ದೇವಸ್ಥಾನ, ಅರಕೆರೆ:

  • ಬೆಳಿಗ್ಗೆ 10.00ಕ್ಕೆ – ಅರಕೆರೆಯ ಶ್ರೀ.ಚನ್ನಕೇಶವ ದೇವಸ್ಥಾನಕ್ಕೆ ನಿರ್ಗಮನ (13 ಕಿ.ಮೀ)
  • ಬೆಳಿಗ್ಗೆ 10.20ಕ್ಕೆ – ಶ್ರೀ.ಚನ್ನಕೇಶವ ದೇವಸ್ಥಾನ, ಅರಕೆರೆಗೆ ಆಗಮನ

ಪ್ರವಾಸಿ ತಾಣದ ಮಾಹಿತಿ:

  • ಈ ದೇವಾಲಯವನ್ನು 13 ನೇ ಶತಮಾನದಲ್ಲಿ ಹೊಯ್ಸಳ ಆಳ್ವಿಕೆಯ ನಂತರ ನಿರ್ಮಿಸಲಾಯಿತು.

ಮುಖಮಂಟಪ (ಪ್ರವೇಶ ಮಂಟಪ) ಹೊಂದಿರುವ ಸಾಮಾನ್ಯ ನವಗ್ರಹ (ಸಭಾಂಗಣ)ಕ್ಕೆ ತೆರೆದುಕೊಳ್ಳುವ ತ್ರಿಕೂಟ (ಮೂರು ದೇವಾಲಯಗಳು) ವಿನ್ಯಾಸ ಹೊಂದಿದೆ.

  • ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಮೀಕ್ಷೆಯಡಿಯಲ್ಲಿ ಸಂರಕ್ಷಿಸಲಾಗಿದೆ.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 45 ನಿಮಿಷಗಳು

ರಂಗನಾಥಸ್ವಾಮಿ ದೇವಸ್ಥಾನ, ಬೆಟ್ಟದಪುರ

  • ಬೆಳಿಗ್ಗೆ 11.05ಕ್ಕೆ – ಬೆಟ್ಟದಪುರದ ರಂಗನಾಥಸ್ವಾಮಿ ದೇವಸ್ಥಾನಕ್ಕೆ ನಿರ್ಗಮನ (11 ಕಿ.ಮೀ)
  • ಬೆಳಿಗ್ಗೆ 11.25ಕ್ಕೆ– ಬೆಟ್ಟದಪುರದ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಆಗಮನ

    ಪ್ರವಾಸಿ ತಾಣದ ಮಾಹಿತಿ:

  • ಬೆಟ್ಟದಪುರದ ಸುಂದರವಾದ ಬೆಟ್ಟದ ಮೇಲೆ ಈ ದೇವಸ್ಥಾನ ನೆಲೆಸಿದೆ.
  • ದೇವಾಲಯವು ವಿಷ್ಣುವಿನ ಅವತಾರವಾದ ಶ್ರೀ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಸಮರ್ಪಿತವಾಗಿದೆ.

      ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 35 ನಿಮಿಷಗಳು

ಬಾಣಾವರದ ಕೋಟೆ ಸಂಕೀರ್ಣ:

  • ಮಧ್ಯಾಹ್ನ 12.00ಕ್ಕೆ – ಬಾಣಾವರದ ಕೋಟೆ ಸಂಕೀರ್ಣಕ್ಕೆ ನಿರ್ಗಮನ (18 ಕಿ.ಮೀ)
  • ಮಧ್ಯಾಹ್ನ 12.25ಕ್ಕೆ – ಬಾಣಾವರದ ಕೋಟೆ ಸಂಕೀರ್ಣಕ್ಕೆ ಆಗಮನ

ಪ್ರವಾಸಿ ತಾಣದ ಮಾಹಿತಿ:

  • ಪಾಳೇಗಾರರ ಆಳ್ವಿಕೆಯಲ್ಲಿ ಇದನ್ನು ನಿರ್ಮಿಸಲಾಗಿದೆ ಎಂದು ಉಲ್ಲೇಖವಿದೆ. ವಸಾಹತು ಮತ್ತು ಹತ್ತಿರದ ವ್ಯಾಪಾರ ಮಾರ್ಗಗಳನ್ನು ರಕ್ಷಿಸಲು ರಕ್ಷಣಾತ್ಮಕ ಕೋಟೆಯಾಗಿ ಕಾರ್ಯನಿರ್ವಹಿಸಿತು ಎಂದು ಉಲ್ಲೇಖಿಸಲಾಗಿದೆ.
  • ಕೋಟೆ ಸಂಕೀರ್ಣವು ಕೋಟೆ ಆಂಜನೇಯ, ನರಸಿಂಹಸ್ವಾಮಿ ದೇವಸ್ಥಾನ, ಚೌಡೇಶ್ವರಿ ದೇವಸ್ಥಾನ, ಬನಶಂಕರಿ ದೇವಸ್ಥಾನ, ರಂಗನಾಥಸ್ವಾಮಿ ದೇವಸ್ಥಾನ, ಕನ್ನಿಕಾ ಪರಮೇಶ್ವರಿ ಮುಂತಾದ ಐತಿಹಾಸಿಕ ಮತ್ತು ಪ್ರಾಚೀನ ದೇವಾಲಯಗಳನ್ನು ಒಳಗೊಂಡಿದೆ.

      ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 50 ನಿಮಿಷಗಳು

ಮಧ್ಯಾಹ್ನ 01.15 – 02.15 ಬಾಣಾವರದ ಖಾಸಗಿ ಹೋಟೆಲ್ ಊಟ [ಪ್ರಯಾಣಿಕರು ಸ್ವತಃ ಶುಲ್ಕ ಪಾವತಿಸಬೇಕಾಗುತ್ತದೆ]

ರಂಗನಾಥಸ್ವಾಮಿ ದೇವಸ್ಥಾನ, ಬಿಳಿಕಲ್ಲು

  • ಮಧ್ಯಾಹ್ನ 02.15ಕ್ಕೆ – ಬಿಳಿಕಲ್ಲು ರಂಗನಾಥಸ್ವಾಮಿ ದೇವಸ್ಥಾನಕ್ಕೆ ನಿರ್ಗಮನ (30 ಕಿ.ಮೀ)
  • ಮಧ್ಯಾಹ್ನ 03.00ಕ್ಕೆ – ಬಿಳಿಕಲ್ಲು ರಂಗನಾಥಸ್ವಾಮಿ ದೇವಸ್ಥಾನಕ್ಕೆ ಆಗಮನ

    ಪ್ರವಾಸಿ ತಾಣದ ಮಾಹಿತಿ:

  • ದೇವಾಲಯವನ್ನು ಭಗವಾನ್ ರಂಗನಾಥ (ವಿಷ್ಣುವಿನ ರೂಪ)ಕ್ಕೆ ಸಮರ್ಪಿಸಲಾಗಿದೆ.

      ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 45 ನಿಮಿಷಗಳು

ಪುರಾತತ್ವ ವಸ್ತು ಸಂಗ್ರಹಾಲಯ,ಹಾಸನ

  • ಮಧ್ಯಾಹ್ನ 03.45ಕ್ಕೆ- ಹಾಸನದ ಪುರಾತತ್ವ ವಸ್ತು ಸಂಗ್ರಹಾಲಯಕ್ಕೆ ನಿರ್ಗಮನ 65 ಕಿ.ಮೀ
  • ಸಂಜೆ 05.45ಕ್ಕೆ – ಹಾಸನದ ಪುರಾತತ್ವ ವಸ್ತು ಸಂಗ್ರಹಾಲಯಕ್ಕೆ ಆಗಮನ

ಒಟ್ಟು ಪ್ರಯಾಣ : 177 ಕಿ.ಮೀ.

ಪ್ರಾಥಮಿಕ ಆರೋಗ್ಯ ಅಧಿಕಾರಿಗಳ ದೂರವಾಣಿ ವಿವರ

ಬೇಲೂರು ತಾಲ್ಲೂಕು:
ತಾಲ್ಲೂಕು ಆರೋಗ್ಯ ಅಧಿಕಾರಿಗಳು: 
ಡಾ.ವಿಜಯ್
ದೂರವಾಣಿ:8867023659
ಬೇಲೂರು ತಾಲ್ಲೂಕು:
ತಾಲ್ಲೂಕು ಆರೋಗ್ಯ ಅಧಿಕಾರಿಗಳು: 
ಡಾ.ವಿಜಯ್
ದೂರವಾಣಿ:8867023659
ಸಕಲೇಶಪುರ ತಾಲ್ಲೂಕು:
ತಾಲ್ಲೂಕು ಆರೋಗ್ಯ ಅಧಿಕಾರಿಗಳು:
 ಡಾ.ಮಹೇಶ್
ದೂರವಾಣಿ:9449326801
ಚನ್ನರಾಯಪಟ್ಟಣ ತಾಲ್ಲೂಕು:
ತಾಲ್ಲೂಕು ಆರೋಗ್ಯ ಅಧಿಕಾರಿಗಳು:
ಡಾ.ತೇಜಸ್ವಿನಿ
ದೂರವಾಣಿ:9742148181
ಅರಕಲಗೂಡು ತಾಲ್ಲೂಕು:
ತಾಲ್ಲೂಕು ಆರೋಗ್ಯ ಅಧಿಕಾರಿಗಳು:
 ಡಾ.ಪುಷ್ಪಲತಾ
ದೂರವಾಣಿ:9449285483
ಅರಸೀಕೆರೆ ತಾಲ್ಲೂಕು:
ತಾಲ್ಲೂಕು ಆರೋಗ್ಯ ಅಧಿಕಾರಿಗಳು: 
ಡಾ.ರಂಗನಾಥ್
ದೂರವಾಣಿ:9611530449
ಆಲೂರು ತಾಲ್ಲೂಕು:
ತಾಲ್ಲೂಕು ಆರೋಗ್ಯ ಅಧಿಕಾರಿಗಳು:
 ಡಾ.ನಿಸಾರ್ ಫಾತೀಮಾ.ಟಿ.ಹೆಚ್
ದೂರವಾಣಿ:9845452021
ಹೊಳೆನರಸೀಪುರ ತಾಲ್ಲೂಕು:
ತಾಲ್ಲೂಕು ಆರೋಗ್ಯ ಅಧಿಕಾರಿಗಳು: 
ಡಾ.ರಾಜೇಶ್
ದೂರವಾಣಿ:9448106381

 

ಪೊಲೀಸ್ ಕಛೇರಿ ದೂರವಾಣಿ ಸಂಖ್ಯೆ

ಹಾಸನ ತಾಲ್ಲೂಕು
ಉಪ ಪೊಲೀಸ್ ವರಿಷ್ಠಾಧಿಕಾರಿ: 
ಶ್ರೀ ಮುರುಳಿಧರ.ಪಿ.ಕೆ
ಮೊಬೈಲ್ ನಂ: 9480804720
ದೂರವಾಣಿ:08172-268964
ಸಕಲೇಶಪುರ ತಾಲ್ಲೂಕು
ಉಪ ಪೊಲೀಸ್ ವರಿಷ್ಠಾಧಿಕಾರಿ: 
ಶ್ರೀ ಪ್ರಮೋದ್ ಕುಮಾರ್
ಮೊಬೈಲ್ ನಂ:9480804723
ದೂರವಾಣಿ:08173-245505
ಅರಸೀಕೆರೆ ತಾಲ್ಲೂಕು
ಉಪ ಪೊಲೀಸ್ ವರಿಷ್ಠಾಧಿಕಾರಿ: 
ಶ್ರೀ ಗೋಪಿ
ಮೊಬೈಲ್ ನಂ:9480804721
ದೂರವಾಣಿ:08172-232422
ಅರಸೀಕೆರೆ ತಾಲ್ಲೂಕು
ಉಪ ಪೊಲೀಸ್ ವರಿಷ್ಠಾಧಿಕಾರಿ: 
ಶ್ರೀ ಗೋಪಿ
ಮೊಬೈಲ್ ನಂ:9480804721
ದೂರವಾಣಿ:08172-232422
ಹೊಳೆನರಸೀಪುರ ತಾಲ್ಲೂಕು
ಉಪ ಪೊಲೀಸ್ ವರಿಷ್ಠಾಧಿಕಾರಿ: 
ಶ್ರೀ ಶಾಲು
ಮೊಬೈಲ್ ನಂ:9480804722
ದೂರವಾಣಿ:08175-273632
ಅರಕಲಗೂಡು ತಾಲ್ಲೂಕು
ವೃತ್ತ ಪೊಲೀಸ್ ನಿರೀಕ್ಷಕರು: 
ಶ್ರೀ ವಸಂತ್.ಕೆ.ಎ
ಮೊಬೈಲ್ ನಂ: 9480804734
ದೂರವಾಣಿ:08175-220285
ಬೇಲೂರು ತಾಲ್ಲೂಕು
ವೃತ್ತ ಪೊಲೀಸ್ ನಿರೀಕ್ಷಕರು: 
ಶ್ರೀ ರೇವಣ್ಣ
ಮೊಬೈಲ್ ನಂ: 9480804782
ದೂರವಾಣಿ:08177-222444
ಆಲೂರು ತಾಲ್ಲೂಕು
ವೃತ್ತ ಪೊಲೀಸ್ ನಿರೀಕ್ಷಕರು: 
ಶ್ರೀ ಮೋಹನ್ ರೆಡ್ಡಿ
ಮೊಬೈಲ್ ನಂ: 9480804739
ದೂರವಾಣಿ:08173-218231

ಕೆ.ಎಸ್.ಆರ್.ಟಿ.ಸಿ ಡಿಪೋ ವ್ಯವಸ್ಥಾಪಕರು

ಬೇಲೂರು ತಾಲ್ಲೂಕು:
ಡಿಪೋ ವ್ಯವಸ್ಥಾಪಕರು:
ದೂರವಾಣಿ: 7760990412
ಹಾಸನ ತಾಲ್ಲೂಕು:
ಡಿಪೋ ವ್ಯವಸ್ಥಾಪಕರು:
ದೂರವಾಣಿ: 7760990518
ಸಕಲೇಶಪುರ ತಾಲ್ಲೂಕು:
ಡಿಪೋ ವ್ಯವಸ್ಥಾಪಕರು:
ದೂರವಾಣಿ: 7760990414
ನ್ನರಾಯಪಟ್ಟಣ ತಾಲ್ಲೂಕು:
ಡಿಪೋ ವ್ಯವಸ್ಥಾಪಕರು:
ದೂರವಾಣಿ: 7760990514
ಅರಕಲಗೂಡು ತಾಲ್ಲೂಕು:
ಡಿಪೋ ವ್ಯವಸ್ಥಾಪಕರು:
ದೂರವಾಣಿ: 7760990516
ಅರಸೀಕೆರೆ ತಾಲ್ಲೂಕು:
ಡಿಪೋ ವ್ಯವಸ್ಥಾಪಕರು:
ದೂರವಾಣಿ: 7760990415
ಆಲೂರು ತಾಲ್ಲೂಕು:
ಡಿಪೋ ವ್ಯವಸ್ಥಾಪಕರು:
ದೂರವಾಣಿ: 7760990513
ಹೊಳೆನರಸೀಪುರ ತಾಲ್ಲೂಕು:
ಡಿಪೋ ವ್ಯವಸ್ಥಾಪಕರು:
ದೂರವಾಣಿ: 7760990517

ಟೂರ್ ಪ್ಯಾಕೇಜ್ ಬುಕಿಂಗ್ ಕೇಂದ್ರಗಳು

1.ನಗರದ ಹಳೇ ಬಸ್ ನಿಲ್ದಾಣ, ಹಾಸನ
2.ನಗರ ಕೇಂದ್ರ ಬಸ್ ನಿಲ್ದಾಣ, ಹಾಸನ
3.ಸ್ವಾಮಿ ಟೂರ್ ಆಂಡ್ ಟ್ರಾವೆಲ್ಸ್, ವಿವೇಕಾನಂದ ಶಾಲೆ ಹತ್ತಿರ, ಹಾಸನ
  ಆನ್ಲೈನ್ ಬುಕಿಂಗ್ ಕೇಂದ್ರಗಳು.
ಕೆ.ಎಸ್.ಆರ್.ಟಿ.ಸಿ ಅಧಿಕೃತ ವೆಬ್ ಸೈಟ್:(www.ksrtc.in)

ಪ್ರವಾಸಿಗರಿಗೆ ಊಟದ ವ್ಯವಸ್ಥೆ

  • ಟೂರ್ ಪ್ಯಾಕೇಜ್-01
          ಮರಗಡಿ ಜಲಪಾತದ ಹತ್ತಿರ (ಅಬ್ಬಿ ಫಾಲ್ಸ್), ಖಾಸಗಿ ಹೋಟೆಲ್‌ನಲ್ಲಿ ಊಟ.
          (ಊಟದ ಮೊತ್ತವನ್ನು ಪ್ರವಾಸಿಗರೆ ಪಾವತಿಸಬೇಕು).
  • ಟೂರ್ ಪ್ಯಾಕೇಜ್-02
           ಮೂಕನಮನೆ ಫಾಲ್ಸ್ ಹತ್ತಿರ, ಖಾಸಗಿ ಹೋಟೆಲ್‌ನಲ್ಲಿ ಊಟ.
           (ಊಟದ ಮೊತ್ತವನ್ನು ಪ್ರವಾಸಿಗರೆ ಪಾವತಿಸಬೇಕು).
  • ಟೂರ್ ಪ್ಯಾಕೇಜ್-03
          ಹಳೇಬೀಡಿನ ಪುಷ್ಪಗಿರಿ ಮಠದಲ್ಲಿ ಉಚಿತ ದಾಸೋಹ.
  • ಟೂರ್ ಪ್ಯಾಕೇಜ್-04
          ಶ್ರವಣಬೆಳಗೊಳದ ಮಠದಲ್ಲಿ ಉಚಿತ ದಾಸೋಹ.
  • ಟೂರ್ ಪ್ಯಾಕೇಜ್-05
          ಜೇನುಕಲ್ಲು ಬೆಟ್ಟದಲ್ಲಿ ಉಚಿತ ದಾಸೋಹ.
  • ಟೂರ್ ಪ್ಯಾಕೇಜ್-06
           ಗೊರೂರು ಅಣೆಕಟ್ಟಿನ ಹತ್ತಿರ, ಖಾಸಗಿ ಹೋಟೆಲ್‌ನಲ್ಲಿ ಊಟ.
           (ಊಟದ ಮೊತ್ತವನ್ನು ಪ್ರಯಾಣಿಕರು ಪ್ರತ್ಯೇಕವಾಗಿ ಪಾವತಿಸಬೇಕು)
  • ಟೂರ್ ಪ್ಯಾಕೇಜ್-07
           ಬಾಣಾವರ ಬಸ್ ನಿಲ್ದಾಣ ಹತ್ತಿರ, ಖಾಸಗಿ ಹೋಟೆಲ್‌ನಲ್ಲಿ ಊಟ.
           (ಊಟದ ಮೊತ್ತವನ್ನು ಪ್ರಯಾಣಿಕರು ಪ್ರತ್ಯೇಕವಾಗಿ ಪಾವತಿಸಬೇಕು)
  • ಟೂರ್ ಪ್ಯಾಕೇಜ್-08
          ಹಾಸನ ನಗರದ ಖಾಸಗಿ ಹೋಟೆಲ್‌ನಲ್ಲಿ ಊಟ.
          (ಊಟದ ಮೊತ್ತವನ್ನು ಪ್ರಯಾಣಿಕರು ಪ್ರತ್ಯೇಕವಾಗಿ ಪಾವತಿಸಬೇಕು)
  • ಟೂರ್ ಪ್ಯಾಕೇಜ್-09
          ಹಾಸನ ನಗರದ ಖಾಸಗಿ ಹೋಟೆಲ್‌ನಲ್ಲಿ ಊಟ.
          (ಊಟದ ಮೊತ್ತವನ್ನು ಪ್ರಯಾಣಿಕರು ಪ್ರತ್ಯೇಕವಾಗಿ  ಪಾವತಿಸಬೇಕು)
  • ಟೂರ್ ಪ್ಯಾಕೇಜ್-10
          ಹಾಸನ ನಗರದ ಖಾಸಗಿ ಹೋಟೆಲ್‌ನಲ್ಲಿ ಊಟ.
          (ಊಟದ ಮೊತ್ತವನ್ನು ಪ್ರಯಾಣಿಕರು ಪ್ರತ್ಯೇಕವಾಗಿ ಪಾವತಿಸಬೇಕು)

ಸುರಕ್ಷತಾ ಕ್ರಮಗಳು

  • ಪ್ರತಿ ಟೂರ್ ಬಸ್‌ನಲ್ಲಿ ಪ್ರಥಮ ಚಿಕಿತ್ಸೆ ಕಿಟ್‌ನೊಂದಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಸಹ ನಿಯೋಜಿಸಲಾಗುವುದು.
  • ಪ್ರತಿ ಟೂರ್ ಬಸ್‌ನಲ್ಲಿ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಪ್ರವಾಸಿ ಮಿತ್ರರನ್ನು (ಪೋಲೀಸ್) ನಿಯೋಜಿಸಲಾಗುವುದು.
  • ಪ್ರತಿ ಟೂರ್ ಬಸ್‌ನಲ್ಲಿ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿಯನ್ನು ನೀಡಲು ಪ್ರವಾಸಿ ಮಾರ್ಗದರ್ಶಿಗಳನ್ನು ನಿಯೋಜಿಸಲಾಗುವುದು.
  • ಹಾಸನ ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿವುಳ್ಳ ಮಡಿಕೆಗಳನ್ನು(Brochure), ಸ್ಥಳೀಯ ಪೊಲೀಸ್ ಇಲಾಖೆಯ ಸಹಾಯವಾಣಿ/ದೂರವಾಣಿ ಸಂಖ್ಯೆ, ಅಗ್ನಿಶಾಮಕ ಹಾಗೂ ಇತರೆ ಸಹಾಯವಾಣಿ/ದೂರವಾಣಿ ಸಂಖ್ಯೆ ವಿವರವನ್ನು ಟೂರ್ ಬಸ್ ನಲ್ಲಿ ಪ್ರಯಾಣಿಸುವ ಪ್ರವಾಸಿಗರಿಗೆ ಒದಗಿಸಲಾಗುವುದು.
  • ಪ್ರಯಾಣ ಸಮಯದಲ್ಲಿ ಬಸ್ ದುರಸ್ಥಿಗೊಂಡರೆ ಕೆ.ಎಸ್.ಆರ್.ಟಿ.ಸಿ ವತಿಯಿಂದ 30 ನಿಮಿಷದಲ್ಲಿ ಬದಲಿ ಬಸ್ ವ್ಯವಸ್ಥೆಯನ್ನು ಮಾಡಲಾಗುವುದು.