• ಸಾಮಾಜಿಕ ಮಾಧ್ಯಮ ಲಿಂಕ್ಸ್
  • Site Map
  • Accessibility Links
  • ಕನ್ನಡ
ಮುಚ್ಚಿ

ಹಾಸನಾಂಬ ಪುಷ್ಪ ಪ್ರದರ್ಶನ

ಜಾತ್ರಾ ಮಹೋತ್ಸವದ ಪ್ರಯುಕ್ತ ಭಕ್ತಾದಿಗಳಿಗೆ

ಹಾಸನಾಂಬ ಫಲಪುಷ್ಪ ಪ್ರದರ್ಶನದ ವಿಶೇಷತೆಗಳು

  • ತಾಯಿ ಹಾಸನಾಂಬ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಜಾತ್ರಾ ಮಹೋತ್ಸವ ಅಂಗವಾಗಿ ದಿನಾಂಕ 17/10/2025 ರಿಂದ 20/10/2025 ರ ವರೆಗೆ, ಹಾಸನ ನಗರದ ಬಿ.ಎಂ ರಸ್ತೆಯಲ್ಲಿರುವ ಸಿಲ್ವರ್ ಜೂಬ್ಲಿ ಪಾರ್ಕ್ ನಲ್ಲಿ ಆಕರ್ಷಣೀಯವಾಗಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ.
  • ಫಲಪುಷ್ಪ ಪ್ರದರ್ಶನ ದಿನಗಳಲ್ಲಿ, ಪ್ರದರ್ಶನ ಕಾಲಾವದಿಯನ್ನು ಸಮಯ ಬೆಳಗ್ಗೆ 09:00 ಗಂಟೆಯಿOದ ರಾತ್ರಿ 08:30 ರ ವರೆಗೆ ನಿಗದಿಪಡಿಸಲಾಗಿದೆ.
  • ಈ ಭಾರಿ ಫಲಪುಷ್ಪ ಪ್ರದರ್ಶನದಲ್ಲಿ ಆಕರ್ಷಣೀಯವಾಗಿ ತಾಯಿ ಹಾಸನಾಂಬ ದೇವಾಲಯದ ರಾಜಗೋಪುರ ಮತ್ತು ಗರುಡ ಕಂಬವನ್ನು ವಿವಿಧ ಬಗೆಯ ಬಣ್ಣಬಣ್ಣದ ಹೂಗಳಿಂದ ಅಲಂಕರಿಸಿ ನಿರ್ಮಿಸುತ್ತಿರುವುದು ಒಂದು ವಿ಼ಷೇಷ.
  • ಪರಿಸರ ಸಂರಕ್ಷಣಾ ವಿಷಯಕ್ಕೆ ಒತ್ತು ಕೊಡಬೇಕಾದ ಇಂದಿನ ಅಗತ್ಯತೆಯಲ್ಲಿ, ಪರಿಸರ ಸಂರಕ್ಷಣೆ ಹಾಗೂ ಪರಿಸರಕ್ಕೆ ಪೂರಕವಾಗಿರುವ ವಿವಿಧ ಕಲಾಕೃತಿಗಳಾದ ಭೂಗೋಳ, ಸೂರ್ಯ, ಮತ್ತು ಇತರೆ ಹೂವಿನ ಮಾದರಿಗಳನ್ನು ಪ್ರದರ್ಶಿಸಲು ಉದ್ದೇಶಿಸಲಾಗಿದೆ.
  • ಅನುಪಯುಕ್ತ ವಸ್ತುಗಳನ್ನು ಬಳಸಿ ಗಾರ್ಡನ್ ಅಂದವನ್ನು ಹೆಚ್ಚಿಸುವ ಮಾದರಿಗಳನ್ನು ಪ್ರದರ್ಶಿಸಲಾಗುವುದು. ತರಕಾರಿ ಕೆತ್ತನೆ, ಇಕೆಬಾನ ಮುಂತಾದ ಮಾದರಿಗಳ ಪ್ರದರ್ಶನ ವೀಕ್ಷಕರ ವಿಶೇಷ ಗಮನ ಸೆಳೆಯಲಿವೆ.
  • ಶಾಲಾ ಮಕ್ಕಳಿಗೆ ಕೇವಲ ಕಲಾಕೃತಿಗಳ ಕಲಿಕೆಯಷ್ಟೇ ಅಲ್ಲದೆ ಫಲಪುಷ್ಪ ಪ್ರದರ್ಶನವು ಕ್ರಿಯಾತ್ಮಕವಾಗಿ ಹತ್ತು ಹಲವು ಕಲಿಕೆಯ ಆಸಕ್ತಿಯನ್ನು ಪ್ರೇರಿಪಿಸುವ ರೀತಿಯಲ್ಲಿ ಮೂಡಿಬರಲಿದೆ.
  • ಇದೇ ಫಲಪುಷ್ಪ ಪ್ರದರ್ಶನದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ವಿವಿಧ ಇಲಾಖೆಗಳ ವತಿಯಿಂದ ವಸ್ತು ಪ್ರದರ್ಶನ ಮಳಿಗೆಗಳನ್ನು ಆಯೋಜಿಸಲಾಗುವುದು.
  • ಫಲಪುಷ್ಪ ಪ್ರದರ್ಶನಕ್ಕೆ ಹಿಂದಿನOತೆ ಪ್ರವೇಶ ಶುಲ್ಕವಿದ್ದು, ಶಾಲಾ ಮಕ್ಕಳ ಹೊರತಾಗಿ [10ನೇ ತರಗತಿಯವರೆಗೆ ಉಚಿತ ಪ್ರವೇಶ], ಉಳಿದ ಪ್ರತಿಯೊಬ್ಬರಿಗೆ ಪ್ರತೀ ಟಿಕೇಟ್ ಶುಲ್ಕ ರೂ. 20/- ನಿಗದಿಪಡಿಸಲಾಗಿದೆ.
  • ಫಲಪುಷ್ಪ ಪ್ರದರ್ಶನ ಆವರಣದಲ್ಲಿ, ಜಾತ್ರಾ ಮಹೋತ್ಸವ ಆವರಣದಲ್ಲಿ ಮತ್ತು ನಗರದೆಲ್ಲೆಡೆ ಸ್ವಚ್ಚತೆ ಕಾಪಾಡುವ ಸಾರ್ವಜನಿಕ ಜವಬ್ದಾರಿಯಲ್ಲಿ ಎಲ್ಲರೂ ಸಹಕರಿಸಲು ಮನವಿ ಮಾಡಿದೆ, ಪ್ಲಾಸ್ಟಿಕ್ ಮತ್ತು ಕಸ ಮುಕ್ತ ಜಾತ್ರಾ ಮಹೋತ್ಸವದ ವಿ಼ಶೇಷ ಸಂಕಲ್ಪಕ್ಕಾಗಿ ಕೋರಿದೆ.