• ಸಾಮಾಜಿಕ ಮಾಧ್ಯಮ ಲಿಂಕ್ಸ್
  • Site Map
  • Accessibility Links
  • ಕನ್ನಡ
ಮುಚ್ಚಿ

ವಿಶೇಷ ದರ್ಶನ ಸೌಲಭ್ಯ

80 ವರ್ಷ ವಯಸ್ಸು ಮೀರಿದ ಭಕ್ತಾದಿಗಳಿಗೆ ಮತ್ತು ವಿಶೇಷ ಚೇತನ ಭಕ್ತಾದಿಗಳಿಗೆ ವಿಶೇಷ ದರ್ಶನಾವಕಾಶ

  • ತಾಯಿ ಹಾಸನಾಂಬೆ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಲ್ಲಿ 80 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಹಾಗೂ ವಿಶೇಷ ಚೇತನ ಭಕ್ತಾದಿಗಳಿಗೆ ಸುಲಲಿತವಾಗಿ ದರ್ಶನ ಪಡೆಯಲು ವಿಶೇಷ ಕ್ರಮವಹಿಸಲಾಗಿದೆ.
  • ಸದರಿ ಭಕ್ತಾದಿಗಳ ಆರೋಗ್ಯ ಮತ್ತು ಸುರಕ್ಷತೆ ಹಿತದೃಷ್ಟಿಯಿಂದ, ಅವರುಗಳು ಸಾಮಾನ್ಯ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯಲು ಸಾಧ್ಯವಾಗದ ನಿಮಿತ್ತ ಈ ವಿಶೇಷ ದರ್ಶನಾವಕಾಶಕ್ಕಾಗಿ ಕ್ರಮವಹಿಸಿದೆ.
  • 80 ವರ್ಷ ಮೇಲ್ಪಟ್ಟ ಭಕ್ತಾದಿಗಳನ್ನು ಗುರುತಿಸಲು ಹುಟ್ಟಿದ ದಿನಾಂಕವಿರುವ ಆಧಾರ್ ಕಾರ್ಡ್ ಅಥವಾ ಇನ್ನಿತರೆ ಯಾವುದೇ ಸರ್ಕಾರಿ ಗುರುತಿನ ದಾಖಲೆಗಳನ್ನು ಹಾಗೂ ವಿಶೇಷ ಚೇತನರ ಗುರುತಿನ ದಾಖಲೆಯನ್ನು ತೋರಿಸಿದಲ್ಲಿ, ವಿಶೇಷ ದರ್ಶನ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ.
  • ಸದರಿ ಅರ್ಹ ಭಕ್ತಾದಿಗಳನ್ನು ಗುರುತಿಸಿದಂತೆ ಅವರಿಗೆ ವಿಶೇಷ ಸರತಿ ಸಾಲಿನಲ್ಲಿ ವಿಶ್ರಾಂತಿಸಿ, ಸುಲಲಿತವಾಗಿ ಚಲಿಸಿ ದರ್ಶನ ಪಡೆಯಲು ಪೂರಕವಾಗುವಂತೆ ವೀಲ್ ಕುರ್ಚಿ ಸೌಲಭ್ಯಗಳನ್ನು ಕಲ್ಪಿಸಲಾಗಿರುತ್ತದೆ.
  • ವಿಶೇ಼ಷ ಅವಕಾಶಕ್ಕೆ ಅರ್ಹರಾದ ಈ ಭಕ್ತಾದಿಗಳ ಬಗ್ಗೆ ವಹಿಸಬೇಕಾದ ವಿಶೇಷ ಕಾಳಜಿಯನ್ನು ಅರಿತು, ಎಲ್ಲಾ ಅಗತ್ಯ ತುರ್ತುಸೇವೆ ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಕ್ರಮವಹಿಸಲಾಗಿರುತ್ತದೆ. ಹಾಗಾಗಿ, ಈ ಬಗ್ಗೆ ಚಿಂತಿಸಿದOತೆ ದರ್ಶನಕ್ಕೆ ಪ್ರೇರಣೆ ನೀಡಬಯಸಿದೆ.