ತಾಯಿ ಹಾಸನಾಂಬ ದೇವಿ ದರ್ಶನಕ್ಕೆ ವಿಐಪಿ ಶಿಷ್ಠಾಚಾರ ನಿಯಮಗಳು
- 2025 ರ ಜಾತ್ರಾ ಮಹೋತ್ಸವಕ್ಕೆ ರಾಜ್ಯ ಮತ್ತು ಹೊರರಾಜ್ಯಗಳಿಂದ 25 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ದರ್ಶನಕ್ಕೆ ಆಗಮಿಸುವ ನಿರೀಕ್ಷೆಯಿದ್ದು, ಅವರ ಸುರಕ್ಷತೆ ಹಾಗೂ ಸುಲಲಿತ ದರ್ಶನ ನಮ್ಮೆಲ್ಲರ ಅತ್ಯಮೂಲ್ಯ ಜವಾಬ್ಚಾರಿ.
- ಶಿಷ್ಠಾಚಾರಕ್ಕೆ ಒಳಪಡುವ ಗಣ್ಯರಾದ ತಾವು ಮತ್ತು ತಮ್ಮ ಕುಟುಂಬದವರು ಆಗಮಿಸಿ ದೇವಿ ದರ್ಶನ ಪಡೆಯಲು ಗೌರವಪೂರ್ವಕವಾಗಿ ಆಹ್ವಾನಿಸಿದೆ.
- ಶಿಷ್ಠಾಚಾರ ವ್ಯವಸ್ಥೆಯು ದಿನಾಂಕ: 09/10/2025 ರಿಂದ 20/10/202 ರ ವರೆಗಿನ ದಿನಗಳಲ್ಲಿ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12:30 ಗಂಟೆ ವರೆಗೆ ನಿಗಧಿಯಾಗಿರುವ ಬಗ್ಗೆ ತಿಳಿಸಬಯಸಿದೆ.
- ದರ್ಶನ ಬಯಸಿದ ದಿನಾಂಕಕ್ಕೆ 5 ದಿನಗಳ ಮುಂಚಿತವಾಗಿ ಜಿಲ್ಲಾಧಿಕಾರಿಳ ಕಛೇರಿ ಇ-ಮೇಲ್ ವಿಳಾಸಕ್ಕೆ (deo.hassan@gmail.com) ಶಿಷ್ಠಾಚಾರದಲ್ಲಿ ವ್ಯತ್ಯಾಸವಾಗದಂತೆ ಪತ್ರ ವ್ಯವಹರಿಸಲು ಕೋರಿದೆ.
- ಗಣ್ಯರು ದರ್ಶನ ಪಡೆಯುವ ದಿನಾಂಕವನ್ನು ಪೂರ್ವ ನಿಗಧಿಪಡಿಸಿಕೊಂಡು, ದಿನಾಂಕ ಖಾತರಿಪಡಿಸಿಕೊoಡoತೆ ದರ್ಶನ ಕಾಲಾವಧಿಯೊಳಗೆ ಒಂದು ಗಂಟೆ ಮುಂಚಿತವಾಗಿ ಆಗಮಿಸಿ ಶಿಷ್ಠಾಚಾರಕ್ಕೆ ನಿಯೋಜಿತ ಅಧಿಕಾರಿಗಳಿಗೆ ತಿಳಿಸಲು ಕೋರಿದೆ.
- ಶಿಷ್ಠಾಚಾರಕ್ಕೆ ಒಳಪಡುವ ಗಣ್ಯರ ಜೊತೆ ಅವರಿಗೆ ಸಂಬoಧಿತ 4 ಜನರ ಸಂಖ್ಯಾಮಿತಿಯಲ್ಲಿ (1+4=5) ಮಾತ್ರ ಶಿಷ್ಠಾಚಾರ ದರ್ಶನಕ್ಕೆ ಅವಕಾಶ ರೂಪಿಸಿದೆ.
- ಹಾಸನದ ಪ್ರವಾಸಿ ಮಂದಿರದಿoದ ಜಿಲ್ಲಾಡಳಿತ ನಿಗಧಿಪಡಿಸಿದ ಶಿಷ್ಠಾಚಾರ ವಾಹನಗಳಲ್ಲಿ ಮಾತ್ರ ಗಣ್ಯರ ದರ್ಶನಕ್ಕೆ ವ್ಯವಸ್ಥೆ ಕೈಗೊಂಡಿರುವುದರಿoದ, ಗಣ್ಯರ ಸ್ವಂತ ಅಥವಾ ಸರ್ಕಾರಿ ವಾಹನಗಳನ್ನು ಪ್ರವಾಸಿ ಮಂದಿರದಲ್ಲೇ ನಿಲುಗಡೆಗೊಳಿಸಲು ಅವಕಾಶ ಕಲ್ಪಿಸಿದೆ.
- ದರ್ಶನದ ಶಿಷ್ಠಾಚಾರ ಸಂಖ್ಯೆಯಲ್ಲಿ ಹೆಚ್ಚಳವಿರುವುದರಿಂದ ಪ್ರವಾಸಿ ಮಂದಿರದಲ್ಲಿ ತಾತ್ಕಲಿಕ ವಿಶ್ರಾಂತಿ ವ್ಯವಸ್ಥೆಗೆ ಮಾತ್ರ ಅವಕಾಶ ಕಲ್ಪಿಸಲಾಗಿರುತ್ತದೆ.
