ಕೆಹೆಚ್ಬಿ ಲೇಔಟ್
ವಾಹನ ನಿಲುಗಡೆ ನಿಯಮಗಳು
ತಾಯಿ ಹಾಸನಾಂಬ ದೇವಿ ದರ್ಶನ ದಿನಗಳಲ್ಲಿ ವಾಹನ ನಿಲುಗಡೆ ನಿಯಮಗಳು
- 2025 ರ ಜಾತ್ರಾ ಮಹೋತ್ಸವಕ್ಕೆ ರಾಜ್ಯ ಮತ್ತು ಹೊರರಾಜ್ಯಗಳಿಂದ 25 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ದರ್ಶನಕ್ಕೆ ಆಗಮಿಸುವ ನಿರೀಕ್ಷೆಯಿದ್ದು, ಅವರ ಸುರಕ್ಷತೆ ಹಾಗೂ ಸುಲಲಿತ ದರ್ಶನ ನಮ್ಮೆಲ್ಲರ ಅತ್ಯಮೂಲ್ಯ ಜವಾಬ್ಚಾರಿ.
- ಹಾಸನ ನಗರಕ್ಕೆ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳ ಮತ್ತು ಅವರ ವಾಹನಗಳ ಸುರಕ್ಷತೆ ದೃಷ್ಟಿಯಲ್ಲಿ ನಗರದಾದ್ಯಂತ ಯಾವುದೇ ವಾಹನದಟ್ಟಣೆಯಾಗದಂತೆ ನೋ-ಪಾರ್ಕಿಂಗ್ ಸ್ಥಳಗಳಲ್ಲಿ ವಾಹನ ನಿಲುಗಡೆಗೆ ಕಟ್ಟುನಿಟ್ಟಿನ ನಿರ್ಬಂಧವಿದ್ದು ಉಲ್ಲಂಘನೆಗೆ ದಂಡ ವಿಧಿಸಲಾಗುವುದು.
- ಹಾಸನ ನಗರದ ಹಾಸನಾಂಬ ದೇವಸ್ಥಾನ ಆವರಣ ಮತ್ತು ಸಂತೆಪೇಟೆ ವೃತ್ತಕ್ಕೆ ನೇರವಾಗಿ ಭಕ್ತಾದಿಗಳು ವಾಹನಗಳ ಮೂಲಕ ಆಗಮಿಸಲು ಸಂಚಾರ ನಿರ್ಬಂದವಿರುತ್ತದೆ.
- ಹಾಸನ ನಗರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಆಯಾ ಹೆದ್ದಾರಿ ರಸ್ತೆ ಮಾರ್ಗಗಳಿಗೆ ಸೂಕ್ತವಾಗುವಂತೆ ಪಾರ್ಕಿoಗ್ ಸ್ಥಳಗಳನ್ನು ನಿಗಧಿಪಡಿಸಲಾಗಿದೆ.
- ಪಾರ್ಕಿಂಗ್ ಸ್ಥಳಗಳಿಗೆ ಸುಲಲಿತವಾಗಿ ತಲುಪಲು ಆಯಾ ಪಾರ್ಕಿಂಗ್ ಸ್ಥಳಗಳ ಗೂಗಲ್ ಲೋಕೇಷನ್ ಪಾಯಿಂಟ್ ಮ್ಯಾಪ್ಗಳನ್ನು ನೀಡಿದೆ.
- ಪಾರ್ಕಿಂಗ್ ವ್ಯವಸ್ಥೆಯನ್ನು ಈ ಮುಂದಿನ ಸ್ಥಳಗಳಲ್ಲಿ ನಿಗದಿಪಡಿಸಲಾಗಿರುತ್ತದೆ.
(1) ಹಾಸನ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಹೊಂದಿಕೊoಡಿರುವ ಕೆಹೆಚ್ಬಿ ಲೇಔಟ್, ಚನ್ನಪಟ್ಟಣ, ಅರಕಲಗೂಡು-ಗೊರೂರು ಮಾರ್ಗಕ್ಕೆ ಹೊಂದಿಕೊoಡಿರುವoತೆ.
(2) ಬಿಟ್ಟಗೋಡನಹಳ್ಳಿ ಸ್ಮಶಾನದ ಬಳಿ ಖಾಲಿ ಜಾಗ, ಅರಕಲಗೂಡು-ಗೊರೂರು ಸಂತೇಪೇಟೆ ತಲುಪುವ ಮುಂಚೆ.
(3) ದನಗಳ ಸಂತೆ ಮೈದಾನ
(4) ಸಂತೆಮೈದಾನ.
- ಪಾರ್ಕಿಂಗ್ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂಧಿಗಳೊoದಿಗೆ ಸಮನ್ವಯತೆ ಸಾಧಿಸಿ ಆಯಾ ಸ್ಥಳಗಳಲ್ಲಿ ಕಲ್ಪಿಸಿರುವ ವ್ಯವಸ್ಥೆಗಳನ್ನು ಸದುಪಯೋಗ ಪಡಿಸಿಕೊಳ್ಳಲು ಭಕ್ತಾದಿಗಳಲ್ಲಿ ವಿನಂತಿಸಿದೆ.