ಮುಚ್ಚಿ

ಪ್ರವಾಸ ಪ್ಯಾಕೇಜ್-06: ಹಾಸನ-ಬೇಲೂರು-ಹಳೇಬೀಡು

Slide6

ಆರಂಭದ ಹಂತ:
ನಗರ ಬಸ್ ನಿಲ್ದಾಣ, ಹಾಸನ
ಅಂತ್ಯ ಹಂತ: ನಗರ ಬಸ್ ನಿಲ್ದಾಣ, ಹಾಸನ
ಪ್ರವಾಸದ ವಿಷಯ: ಪ್ರಕೃತಿ / ಪರಂಪರೆಯ ಅನುಭವ
ಪ್ರವಾಸಿಗರಿಗೆ ಕಲ್ಪಿಸಿರುವ ಸೌಲಭ್ಯಗಳು
ಪ್ರವಾಸಿ ಮಾರ್ಗದರ್ಶಿ,  ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ
ಪ್ರವಾಸಿ ಮಿತ್ರರೊಂದಿಗೆ ಆರಾಮದಾಯಕ ಪ್ರಯಾಣ
ಕೆಎಸ್‌ಆರ್‌ಟಿಸಿ ದರ:
ವಯಸ್ಕರಿಗೆ : ರೂ.375.00
ಮಕ್ಕಳು (12 ವರ್ಷದೊಳಗೆ) : ರೂ.275.00
ಆಫ್‌ಲೈನ್ ಬುಕಿಂಗ್
1.ನಗರದ ಹಳೇ ಬಸ್ ನಿಲ್ದಾಣ, ಹಾಸನ
2.ನಗರ ಕೇಂದ್ರ ಬಸ್ ನಿಲ್ದಾಣ, ಹಾಸನ
3.ಸ್ವಾಮಿ ಟೂರ್ ಆಂಡ್ ಟ್ರಾವೆಲ್ಸ್, ವಿವೇಕಾನಂದ ಶಾಲೆ ಹತ್ತಿರ,ಹಾಸನ
newಆನ್ಲೈನ್ 
ಬುಕಿಂಗ್
www.ksrtc.in

ವಿವರವಾದ ವೇಳಾಪಟ್ಟಿ

ಶ್ರೀ ಚನ್ನಕೇಶವ ದೇವಸ್ಥಾನ,ಬೇಲೂರು:

  • ಬೆಳಿಗ್ಗೆ 07.30ಕ್ಕೆ – ಬೇಲೂರು ಚನ್ನಕೇಶವ ದೇವಸ್ಥಾನಕ್ಕೆ ನಿರ್ಗಮನ (38 ಕಿ.ಮೀ)
  • ಬೆಳಿಗ್ಗೆ 09.15ಕ್ಕೆ – ಬೇಲೂರು ಚನ್ನಕೇಶವ ದೇವಸ್ಥಾನಕ್ಕೆ ಆಗಮನ

ಪ್ರವಾಸಿ ತಾಣದ ಮಾಹಿತಿ:

  • ಶ್ರೀ ಚನ್ನಕೇಶವ ದೇವಸ್ಥಾನ, ಬೇಲೂರು. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ.
  • ಬೇಲೂರು ಚೆನ್ನಕೇಶವ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ, ಇದು 12 ನೇ ಶತಮಾನದಲ್ಲಿ ಆಕರ್ಷಕ ಕುಸರಿ  ಕೆತ್ತನೆಯಿಂದ ನಿರ್ಮಿಸಲ್ಪಟ್ಟಿದೆ. ರಾಜ ವಿಷ್ಣುವರ್ಧನನು ಈ ದೇವಾಲಯವನ್ನು ನಿರ್ಮಿಸಿದನು ಎಂದು  ಉಲ್ಲೇಖವಿದೆ.
  • ಇದು ಸಂಕೀರ್ಣವಾದ ಸೋಪ್‌ಸ್ಟೋನ್ ಕೆತ್ತನೆಗಳು, ಆಕರ್ಷಕವಾದ ಮದನಿಕಾ ಸಂಸ್ಕೃತಿ ಮತ್ತು ರಾಮಾಯಣ ಮತ್ತು ಮಹಾಭಾರತದಂತಹ ಮಹಾಕಾವ್ಯಗಳನ್ನು ಚಿತ್ರಿಸಲಾಗಿದ್ದು, ಇದು ಕುಸರಿ  ಕಲಾತ್ಮಕವಾಗಿರುವುದರಿಂದ ಹೆಸರುವಾಸಿಯಾಗಿದೆ.

          ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 02 ಗಂಟೆಗಳು

ಯಗಚಿ ಜಲಸಾಹಸ ಕ್ರೀಡಾ ಕೇಂದ್ರ:

  • ಬೆಳಿಗ್ಗೆ 11.15ಕ್ಕೆ – ಯಗಚಿ ಜಲಸಾಹಸ ಕ್ರೀಡಾ ಕೇಂದ್ರಕ್ಕೆ ನಿರ್ಗಮನ (7 ಕಿ.ಮೀ)
  • ಬೆಳಿಗ್ಗೆ 11.30ಕ್ಕೆ – ಯಗಚಿ ಜಲಸಾಹಸ  ಕ್ರೀಡಾ ಕೇಂದ್ರಕ್ಕೆ ಆಗಮನ

     ಪ್ರವಾಸಿ ತಾಣದ ಮಾಹಿತಿ:

  • ಯಗಚಿ ಜಲ ಕ್ರೀಡಾ ಕೇಂದ್ರ ಬೇಲೂರಿನ ಯಗಚಿ ಡ್ಯಾಮ್ ಹಿನ್ನೀರಿನಲ್ಲಿರುವ ಒಂದು ಸಾಹಸ ಕ್ರೀಡಾ ಚಟುವಟಿಕೆಯಾಗಿದೆ.
  • ಈ ಕೇಂದ್ರದಲ್ಲಿ ಸ್ಪೀಡ್ ಬೋಟಿಂಗ್, ಬನಾನಾ ಬೋಟಿಂಗ್, ಜೆಟ್ ರೈಡಿಂಗ್, ಕಯಾಕಿಂಗ್‌ನಂತಹ ವಿವಿಧ ಚಟುವಟಿಕೆಗಳಿದ್ದು, ಆಸಕ್ತರು ಪ್ರತ್ಯೇಕ ಶುಲ್ಕ ಪಾವತಿಸಿ ಚಟುವಟಿಕೆಗಳನ್ನು ಮಾಡಬಹುದು.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ:1.30 ಗಂಟೆ

ಪುಷ್ಪಗಿರಿ ಬೆಟ್ಟ, ಹಳೇಬೀಡು:

  • ಮಧ್ಯಾಹ್ನ 01.00ಕ್ಕೆ – ಪುಷ್ಪಗಿರಿ ಬೆಟ್ಟ, ಹಳೇಬೀಡುಗೆ ನಿರ್ಗಮನ (23 ಕಿ.ಮೀ)
  • ಮಧ್ಯಾಹ್ನ 01.45ಕ್ಕೆ – ಪುಷ್ಪಗಿರಿ ಬೆಟ್ಟ, ಹಳೇಬೀಡಿಗೆ ಆಗಮನ

      ಪ್ರವಾಸಿ ತಾಣದ ಮಾಹಿತಿ:

  • ಪುಷ್ಪಗಿರಿ ಮಹಾ-ಸಂಸ್ಥಾನವು ಕರ್ನಾಟಕದ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ.

ಮಧ್ಯಾಹ್ನ 02.00 – ಮಧ್ಯಾಹ್ನ 03.00ರವರೆಗೆ ಪುಷ್ಪಗಿರಿ ಬೆಟ್ಟದಲ್ಲಿ ಉಚಿತವಾಗಿ ಅನ್ನ ದಾಸೋಹವಿರುತ್ತದೆ

ಹೊಯ್ಸಳೇಶ್ವರ ದೇವಸ್ಥಾನ ಹಳೇಬೀಡು:

  • ಮಧ್ಯಾಹ್ನ 03.00ಕ್ಕೆ – ಹೊಯ್ಸಳೇಶ್ವರ ದೇವಸ್ಥಾನ ಹಳೇಬೀಡಿಗೆ ನಿರ್ಗಮನ (4 ಕಿ.ಮೀ)
  • ಮಧ್ಯಾಹ್ನ 03.10ಕ್ಕೆ – ಹೊಯ್ಸಳೇಶ್ವರ ದೇವಸ್ಥಾನಕ್ಕೆ ಹಳೇಬೀಡಿಗೆ ಆಗಮನ

     ಪ್ರವಾಸಿ ತಾಣದ ಮಾಹಿತಿ:

  • ಇದನ್ನು 12 ನೇ ಶತಮಾನದಲ್ಲಿ ಹೊಯ್ಸಳರು ನಿರ್ಮಿಸಿದರು ಎಂದು ಉಲ್ಲೇಖಿಸಲಾಗಿದೆ.

ಹೊಯ್ಸಳೇಶ್ವರ ದೇವಸ್ಥಾನವು ಶಿವನಿಗೆ ಅರ್ಪಿತವಾಗಿದೆ ಮತ್ತು ಅದರ ಜೋಡಿ ದೇವಾಲಯಗಳು ಮತ್ತು ಬೃಹತ್ ನಂದಿ ಪ್ರತಿಮೆಗಳಿಗೆ ಹೆಸರುವಾಸಿಯಾಗಿದೆ.

  • ಇದರ ಸಮೃದ್ಧ ಕೆತ್ತನೆಗಳಿಂದ ಕೂಡಿದ ಗೋಡೆಗಳು ಮಹಾಕಾವ್ಯಗಳು ಮತ್ತು ಪೌರಾಣಿಕ ದೃಶ್ಯಗಳನ್ನು ಚಿತ್ರಿಸಲಾಗಿದೆ, ಇದು ಹೊಯ್ಸಳ ವಾಸ್ತುಶಿಲ್ಪದ ಒಂದು ಪ್ರಮುಖ ಉದಾಹರಣೆಯಾಗಿದೆ ಮತ್ತು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 01.35 ಗಂಟೆಗಳು

ಶ್ರೀ. ವರದರಾಜಸ್ವಾಮಿ ದೇವಸ್ಥಾನ, ಕೊಂಡಜ್ಜಿ

  • ಮಧ್ಯಾಹ್ನ 04.45ಕ್ಕೆ – ಶ್ರೀ. ವರದರಾಜಸ್ವಾಮಿ ದೇವಸ್ಥಾನ, ಕೊಂಡಜ್ಜಿಗೆ ನಿರ್ಗಮನ
  •  ಮಧ್ಯಾಹ್ನ 05.15ಕ್ಕೆ – ಶ್ರೀ ವರದರಾಜಸ್ವಾಮಿ ದೇವಸ್ಥಾನ, ಕೊಂಡಜ್ಜಿಗೆ ಆಗಮನ

      ಪ್ರವಾಸಿ ತಾಣದ ಮಾಹಿತಿ:

  • ಶಂಖ, ಗದೆ, ಕಮಲವನ್ನು ಹಿಡಿದು ಅಭಯ ಮುದ್ರೆಯನ್ನು ತೋರಿಸುವ 18 ಅಡಿ ಎತ್ತರದ ಕಪ್ಪು ಕಲ್ಲಿನ ವಿಗ್ರಹವನ್ನು ವರದರಾಜ (ವಿಷ್ಣು) ಗೆ ಸಮರ್ಪಿಸಲಾಗಿದೆ.
  • ಶಾಂತಿಯುತ ಮತ್ತು ಆಧ್ಯಾತ್ಮಿಕ ವಾತಾವರಣಕ್ಕೆ ಪ್ರಸಿದ್ದವಾಗಿದೆ.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 30 ನಿಮಿಷ

ಮಳೆಮಲ್ಲೇಶ್ವರ ದೇವಸ್ಥಾನ ಸೀಗೆಗುಡ್ಡ:

  • ಸಂಜೆ 05.30ಕ್ಕೆ – ಸೀಗೆಗುಡ್ಡದ ಮಳೆಮಲ್ಲೇಶ್ವರ ದೇವಸ್ಥಾನಕ್ಕೆ ನಿರ್ಗಮನ (8 ಕಿ.ಮೀ)
  • ಸಂಜೆ 05.45ಕ್ಕೆ – ಸೀಗೆಗುಡ್ಡದ ಮಳೆಮಲ್ಲೇಶ್ವರ ದೇವಸ್ಥಾನಕ್ಕೆ ಆಗಮನ

        ಪ್ರವಾಸಿ ತಾಣದ ಮಾಹಿತಿ:

  • ಮಲ್ಲೇಶ್ವರ (ಶಿವ) ದೇವರಿಗೆ ಸಮರ್ಪಿತವಾದ ದೇವಸ್ಥಾನವಾಗಿದೆ.
  • ಹಚ್ಚ ಹಸಿರಿನಿಂದ ಆವೃತವಾದ ಬೆಟ್ಟದ ತುದಿಯಲ್ಲಿದೆ.
  • ರಮಣೀಯ ನೋಟಗಳು ಮತ್ತು ಶಾಂತಿಯುತ ವಾತಾವರಣನ್ನು ಹೊಂದಿದೆ.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 45 ನಿಮಿಷ

ಸಂಜೆ 06.30ಕ್ಕೆ – ಹಾಸನಕ್ಕೆ ನಿರ್ಗಮನ (18 ಕಿ.ಮೀ)

 ಒಟ್ಟು ಪ್ರಯಾಣ-116 ಕಿ.ಮೀ