ಮುಚ್ಚಿ

ಪಾದರಕ್ಷೆ ಬಿಡುಗಡೆಯ ನಿಯಮಗಳು

Footwear

ಜಾತ್ರಾ ಮಹೋತ್ಸವ ಪರಿಮಿತಿಯಲ್ಲಿ ಪಾದರಕ್ಷೆ ನಿರ್ಬಂಧವಿರುವುದರಿOದ ಪಾದರಕ್ಷೆ ಬಿಡುಗಡೆಗೆ ನಿಯಮಗಳು

  • 2025 ರ ಜಾತ್ರಾ ಮಹೋತ್ಸವಕ್ಕೆ ರಾಜ್ಯ ಮತ್ತು ಹೊರರಾಜ್ಯಗಳಿಂದ 25 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ದರ್ಶನಕ್ಕೆ ಆಗಮಿಸುವ ನಿರೀಕ್ಷೆಯಿದ್ದು, ಅವರ ಸುರಕ್ಷತೆ ಹಾಗೂ ಸುಲಲಿತ ದರ್ಶನ ನಮ್ಮೆಲ್ಲರ ಅತ್ಯಮೂಲ್ಯ ಜವಾಬ್ಚಾರಿ.
  • ಜಾತ್ರಾ ಮಹೋತ್ಸವದ ಪರಿಮಿತಿಯಲ್ಲಿ ಶ್ರದ್ದಾ-ಭಕ್ತಿಪೂರ್ವಕ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿರುವುದರಿಂದ ಭಕ್ತಾದಿಗಳು ಪಾದರಕ್ಷೆಗಳನ್ನು ಎಲ್ಲೆಂದರಲ್ಲಿ ಬಿಡುವುದನ್ನು ಕಡ್ಡಾಯವಾಗಿ ನಿರ್ಬಂಧಿಸಿದೆ.
  • ಭಕ್ತಾದಿಗಳು ಹಾಸನ ನಗರಕ್ಕೆ ಬಂದು ಸೇರುವ ಪ್ರಮುಖ ಸ್ಥಳಗಳಾದ ಹಾಸನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಮತ್ತು ಹಾಸನ ರೈಲ್ವೆ ನಿಲ್ದಾಣಗಳಲ್ಲಿ ಭಕ್ತಾದಿಗಳ ಪಾದರಕ್ಷೆಗಳನ್ನು ಬಿಡಲು ಕಲ್ಪಿಸಿರುವ ವ್ಯವಸ್ಥೆಯನ್ನು ಬಳಸಿಕೊಳ್ಳಲು ಕೋರಿದೆ.
  • ಜಾತ್ರಾ ಮಹೋತ್ಸವಕ್ಕೆ ಭಕ್ತಾದಿಗಳ ಸಂಚಾರ ಉದ್ದೇಶವಾಗಿ ವ್ಯವಸ್ಥೆಗೊಳಿಸಿರುವ ನಗರ ಸಾರಿಗೆ ಬಸ್‌ಗಳಿಗೆ ಪಾದರಕ್ಷೆಗಳೊಂದಿಗೆ ಪ್ರವೇಶಿಸುವುದನ್ನು ನಿರ್ಬಂಧಿಸಿದೆ.
  • ತಮ್ಮ ಸ್ವಂತ ವಾಹನಗಳಲ್ಲಿ ಆಗಮಿಸುವ ಭಕ್ತಾದಿಗಳು ಪಾರ್ಕಿಂಗ್ ಸ್ಥಳಗಳಲ್ಲಿ ವಾಹನಗಳ ನಿಲುಗಡೆ ಮಾಡಿ, ತಮ್ಮ ವಾಹನಗಳಲ್ಲಿಯೇ ಪಾದರಕ್ಷೆಗಳನ್ನು ಬಿಟ್ಟು ದರ್ಶನಕ್ಕೆ ಆಗಮಿಸಲು ತಿಳಿಸಿದೆ.