ಮುಚ್ಚಿ

ತಲುಪುವ ಬಗೆ

ರಸ್ತೆಯ ಮೂಲಕ 

ಹಾಸನವು ಬೆಂಗಳೂರು, ಮೈಸೂರು, ಮಂಗಳೂರು, ಮಡಿಕೇರಿ, ಚಿಕ್ಕಮಗಳೂರು ಇವುಗಳಿಗೆ ಒಳ್ಳೆಯ ಸಂಪರ್ಕ ಹೊಂದಿದೆ.  ಇದು ಬೆಂಗಳೂರಿನಿಂದ ಸುಮಾರು 187 ಕಿಲೋಮೀಟರ್ ಮತ್ತು ಮೈಸೂರಿನಿಂದ 115 ಕಿಲೋಮೀಟರ್ ದೂರದಲ್ಲಿದೆ.  ಈ ನಗರಗಳಿಗೆ/ಪಟ್ಟಣಗಳಿಗೆ ಹಾಸನದಿಂದ ಮೇಲಿಂದ ಮೇಲೆ ಬಹಳಷ್ಟು ಸರ್ಕಾರಿ ಬಸ್ಸುಗಳು ಇರುತ್ತವೆ. 

ರೈಲಿನ ಮೂಲಕ 

ಹಾಸನವು ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ ಮತ್ತು ಮಂಗಳೂರಿಗೆ ರೈಲು ಸಂಪರ್ಕ ಹೊಂದಿದೆ.

ವಾಯುಮಾರ್ಗ 

ಹಾಸನದಲ್ಲಿ ವಿಮಾನ ನಿಲ್ದಾಣವಿರುವುದಿಲ್ಲ.  ಬೆಂಗಳೂರು ಅತಿ ಹತ್ತಿರದ ವಿಮಾನ ನಿಲ್ದಾಣವಾಗಿದ್ದು, ಅಲ್ಲಿಂದ ಭಾರತದಾದ್ಯಂತ ದೊಡ್ಡ ದೊಡ್ಡ ಸ್ಥಳಗಳಿಗೆ ಹಾಗೂ ವಿದೇಶಗಳಿಗೆ ಹೋಗಲು ವಿಮಾನಗಳು ಇರುತ್ತವೆ.